/newsfirstlive-kannada/media/post_attachments/wp-content/uploads/2025/06/sana-yousaf.jpg)
ಈಕೆ ಹೆಸರು ಸನಾ ಯೂಸಫ್​​. ಇವಳಿಗೆ ಕೇವಲ 17 ವರ್ಷ. ಈಕೆ ಟಿಕ್​ಟಾಕ್​​ನಲ್ಲಿ ಸಖತ್​ ಫೇಮಸ್. ಸನಾಳ ಚೆಲುವಿಗೆ ರೋಬೋ ಕೂಡ ಲವ್​​ನಲ್ಲಿ ಬಿದ್ದಿತ್ತು. ಈ ಪಾಕಿಸ್ತಾನದ ಸುಂದರಿಗೆ ಮಿಲಿಯನ್​ ಗಟ್ಟಲೇ ಫಾಲೋವರ್ಸ್​​​ ಕೂಡ ಇದ್ದಾರೆ.
ಇತ್ತೀಚೆಗೆ ಸನಾ ಯೂಸಫ್ ಸಂಭ್ರಮದಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ಕೆಲವೇ ಕೆಲವು ಗಂಟೆಗಳಲ್ಲಿ ಗುಂಡೇಟಿಗೆ ತನ್ನ ಉಸಿರು ಚೆಲ್ಲಿದ್ದಾಳೆ. ಬ್ಯೂಟಿ ಸನಾ ದುರಂತ ಅಂತ್ಯ ಇಡೀ ವಿಶ್ವಾದ್ಯಂತ ಚರ್ಚೆಗೆ ಕಾರಣವಾಗಿದೆ.
ಬರ್ತ್​ಡೇ ದಿನ ಅಸಲಿಗೆ ಆಗಿದ್ದೇನು?
ಕಳೆದ ಜೂನ್​ 2 ಸನಾ ಯೂಸಫ್‌ಗೆ 17ನೇ ಬರ್ತ್ ​ಡೇ ಇತ್ತು. ಹುಟ್ಟುಹಬ್ಬ ಅನ್ನೋ ಕಾರಣಕ್ಕೆ ಸನಾ, ತನ್ನ ಫ್ರೆಂಡ್ಸ್‌ಗೆ ಇಸ್ಲಾಮಾಬಾದ್‌ನಲ್ಲಿರುವ ತನ್ನ ಮನೆಗೆ ಆಹ್ವಾನ ಮಾಡಿದ್ದಳು. ಕೇಕ್​ ಕಟ್​ ಮಾಡಿ, ಸ್ನೇಹಿತರನ್ನೆಲ್ಲಾ ಭೇಟಿಯಾದ ಮೇಲೆ ಸನಾ ತನ್ನ ಬರ್ತ್​ಡೇ ಸೆಲೆಬ್ರೇಷನ್​ ವೀಡಿಯೋವನ್ನ ಸೋಷಿಯಲ್​ ಮೀಡಿಯಾಗೆ ಅಪ್​ ಮಾಡಿದ್ದಾಳೆ. ಆ ವೀಡಿಯೊ ಪೋಸ್ಟ್ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಆಕೆಯನ್ನ ಗುಂಡಿಕ್ಕಿ ಕೊಲ್ಲಲಾಗಿದೆ.
/newsfirstlive-kannada/media/post_attachments/wp-content/uploads/2025/06/sana-yousaf-1.jpg)
ಸನಾಳನ್ನ ಕೊಂದಿದ್ಯಾರು? ಆಕೆಯನ್ನ ಕೊಂದಿದ್ಯಾಕೆ?
ಸನಾ ಯೂಸಫ್ ಬರ್ತ್​ ಡೇ ಸೆಲೆಬ್ರೇಷನ್ ಕಾರ್ಯಕ್ರಮಕ್ಕೆ ಅನೇಕ ಅಪರಿಚಿತರು ಬಂದಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಅವರೂ ಸಹ ಗೆಸ್ಟ್​​ ಇರಬಹುದು ಅಂದುಕೊಂಡಿದ್ದ ಸನಾ ಅವರ ಮೇಲೆ ಹೆಚ್ಚು ಗಮನ ಕೊಟ್ಟಿರಲಿಲ್ಲ.
ಸಂತೋಷದ ಸಮಯದಲ್ಲೇ ಒಬ್ಬ ಅಪರಿಚಿತ ದಾಳಿಕೋರ, ಸನಾಳ ಮೇಲೆ ಗುಂಡಿನ ಮಳೆ ಸುರಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ.. ಬಂದಂತಹ ಗೆಸ್ಟ್​​, ಆ ಕುಟುಂಬಕ್ಕೆ ಗೊತ್ತಿರುವವನೇ ಇರಬಹುದು ಅಂತಲೂ ಹೇಳಲಾಗ್ತಿದೆ.
/newsfirstlive-kannada/media/post_attachments/wp-content/uploads/2025/06/sana-yousaf-2.jpg)
ಸದ್ಯಕ್ಕೆ ಪಾಕ್​​ ಪೊಲೀಸರು ಸನಾಳ ಶವವನ್ನ, ಪೋಸ್ಟ್​​ಮಾರ್ಟಮ್​​​ ಪರೀಕ್ಷೆಗಾಗಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಇಲ್ಲಿಯವರೆಗೂ ಸನಾಳ ಹತ್ಯೆ ವಿಚಾರವಾಗಿ ಯಾರನ್ನೂ ಬಂಧಿಸಲಾಗಿಲ್ಲ. ಆಕೆಯ ಹತ್ಯೆಯ ಹಿಂದಿನ ಉದ್ದೇಶವೂ ಸಹ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಸ್ಟಾರ್ ನಟಿ.. ವೈಷ್ಣವಿ ಗೌಡ ಮದುವೆ ಯಾವಾಗ, ಎಲ್ಲಿ ಗೊತ್ತಾ?
ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ
ಪಾಕಿಸ್ತಾನದ ಖೈಬರ್ ಪುಂಖ್ಯಾ ಪ್ರಾಂತ್ಯದ ಚಿತ್ರಾಲ್ ಮೂಲದ ಸನಾ ಯೂಸುಫ್​ಗೆ, ಟಿಕ್‌ಟಾಕ್‌ನಲ್ಲಿ ಭಾರಿ ಫಾಲೋವರ್ಸ್ ಇದ್ದಾರೆ. ಹೀಗಾಗಿ ಸನಾ ದುರಂತದ ಘಟನೆಯನ್ನ ವ್ಯಾಪಕವಾಗಿ ಖಂಡಿಸಿದ್ದಾರೆ. ಬರ್ತ್​ ಡೇ ದಿನವೇ ಅವಳ ಸಾವಾಗಿದ್ದಕ್ಕಾಗಿ, ಸಾಮಾಜಿಕ ಜಾಲಾತಾಣಗಳಲ್ಲಿ ವ್ಯಾಪಕ ಆಕ್ರೋಶದ ಜೊತೆಗೆ, ಅತಿಯಾದ ದುಃಖದ ಸಂದೇಶಗಳನ್ನ ಹಂಚಿಕೊಂಡಿದ್ದಾರೆ. ಆಕೆಯ ಕೆಲವು ಅಭಿಮಾನಿಗಳಂತೂ, ನಮಗೆ ಆದಷ್ಟು ಬೇಗನೇ ನ್ಯಾಯವನ್ನ ಕೊಡಿಸಬೇಕು ಎಂದು ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us