/newsfirstlive-kannada/media/post_attachments/wp-content/uploads/2025/02/PAK-LADY-DANCE.jpg)
ಪಾಕಿಸ್ತಾನ ಮಹಿಳೆಯೊಬ್ಬಳು ಸಾಂಪ್ರದಾಯಿಕ ಉಡುಗೆ ತೊಟ್ಟು ಡಾನ್ಸ್ ಮಾಡಿದ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಈ ಡ್ಯಾನ್ಸ್ ಮೂಲಕ ಪಾಕ್ ಮಹಿಳೆ ತನ್ನ ದೇಶದಲ್ಲಾಗುತ್ತಿರುವ ವಿಚ್ಛೇದನಗಳ ಬಗ್ಗೆ ಬಹಳ ಕಠಿಣವಾದ ಒಂದು ಸಂದೇಶವನ್ನು ನೀಡಿದ್ದಾಳೆ. ಇದೊಂದು ಕಳಂಕ, ನಮ್ಮಲ್ಲಿ ಅಂದ್ರೆ ಮಹಿಳೆಯರಲ್ಲಿ ಸ್ವಯಂ ಸಬಲೀಕರಣ ಬಲಗೊಳ್ಳಬೇಕು ಎಂದು ಹೇಳಿದ್ದಾರೆ.
ಅಜೀಮಾ ಇಹ್ಸಾನ್, ಡಿವೋರ್ಸ್ ಆದ ಮೂರು ಮಕ್ಕಳ ತಾಯಿ. ಪಾಕಿಸ್ತಾನದ ಕೋಕ್ ಸ್ಟುಡಿಯೋದಲ್ಲಿ ಮಘ್ರೋನ್ ಲಾ ಎಂಬ ಹಾಡಿಗೆ ಒಂದು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಅಜೀಮಾ ಡ್ಯಾನ್ಸ್ ಮಾಡುತ್ತಿದ್ದರೆ. ಅಲ್ಲಿದ್ದವರೆಲ್ಲಾ ಅವಳ ಡ್ಯಾನ್ಸ್ಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು.
ಇದನ್ನೂ ಓದಿ:ಟೇಕ್ ಆಫ್ ಆಗಿದ್ದ ವಿಮಾನ ಪತನ.. ಮಹಿಳೆಯರು, ಮಕ್ಕಳು ಸೇರಿ 46 ಪ್ರಯಾಣಿಕರು ನಿಧನ
ಈ ಒಂದು ವಿಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅಜೀಮಾ ಕ್ಯಾಪ್ಷನ್ನಲ್ಲಿ ತುಂಬಾ ಪವರ್ಫುಲ್ಲಾದ ನೋಟ್ ಮಾಡಿದ್ದಾರೆ ಅದರಲ್ಲೂ ವಿಚ್ಛೇದನ ವಿಚಾರದಲ್ಲಿ ಸಾಮಾಜಿಕ ಗ್ರಹಿಕೆಗಳ ಬಗ್ಗೆ ಸವಾಲು ಎಸೆದಿದ್ದಾರೆ. ಪಾಕಿಸ್ತಾನದ ಸಮುದಾಯದಲ್ಲಿ ವಿಚ್ಛೇದನ ಎನ್ನುವುದು ಒಂದು ರೀತಿಯಲ್ಲಿ ಮರಣದಂಡನೆಯಾದಂತಾಗಿದೆ. ನಾನು ನನ್ನ ಬದುಕೇ ಮುಗಿದು ಹೋಗಿದೆ ಎಂದು ಹೇಳಿದ್ದೆ. ಇದರ ಬಗ್ಗೆ ನನಗೆ ಪಶ್ಚಾತಾಪವಿದೆ. ನನ್ನ ಬದುಕು ಇಳಿಜಾರಿನಲ್ಲಿ ಸಾಗುತ್ತಿದೆ, ಸಂತೋಷವೆಲ್ಲಿ. ಇದನ್ನು ಮರೆತು ಬಿಡಿ. ತೀರ್ಪು ಇನ್ನು ಬರಬೇಕು. ಆದ್ರೆ ಒಂದು ಏನು ಗೊತ್ತಾ? ನಾನು ಇದನ್ನೇ ನರ್ತಿಸುತ್ತಿದ್ದೇನೆ. ನಾನು ಇದರಿಂದಲೇ ನಗುತ್ತಿದ್ದೇನೆ. ನಾನಂದುಕೊಂಡಷ್ಟು ಬದುಕು ಅಷ್ಟು ಕೆಟ್ಟದಾಗಿ ಏನು ಇಲ್ಲ. ನಿಜಕ್ಕೂ ಅದಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ.
View this post on Instagram
ಅದು ಮಾತ್ರವಲ್ಲ ಸಂತುಷ್ಟವಿಲ್ಲದ ಮದುವೆಯೊಂದಿಗೆ ಇರೋದು ವಿಚ್ಛೇದನಕ್ಕಿಂತ ಕೀಳುಮಟ್ಟದ್ದು. ಇದು ಹೃದಯಾಘಾತಕಾರಿ ನಿಜ, ಆದ್ರೆ ನಾವು ನಮ್ಮ ತಾಜಾ ಜೀವನವನ್ನು ಶುರು ಮಾಡಬೇಕು.ನನಗೆ ನಿಜಕ್ಕೂ ಡಿವೋರ್ಸ್ ಇಷ್ಟವಿರಲಿಲ್ಲ. ಆದರೆ ನನ್ನ ಹಾಗೂ ನನ್ನ ಮಕ್ಕಳ ಸಲುವಾಗಿ ಇದೊಂದು ಸ್ವಾತಂತ್ರ್ಯ ಬೇಕಿತ್ತು. ನನ್ನ ಎಕ್ಸ್ ಪಾರ್ಟನರ್ಗೂ ಕೂಡ . ಇದು ಇಬ್ಬರ ನಡುವಿನ ಅತ್ಯಂತ ಅತ್ಯುತ್ತಮ ನಿರ್ಧಾರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ವಿಜೇತ ಜೀನ್ ಹ್ಯಾಕ್ಮನ್ ನಿಗೂಢ ಸಾವು.. ಪತ್ನಿ, ನಾಯಿ ಜೊತೆ ಶವವಾಗಿ ಪತ್ತೆ; ಆಗಿದ್ದೇನು?
ಕೊನೆಗೆ ಒಂದು ನೋಟ್ನೊಂದಿಗೆ ತಮ್ಮ ಸಂದೇಶವನ್ನು ಮುಕ್ತಾಗೊಳಿಸಿರುವ ಇಹ್ಸಾನ್, ಡಿವೋರ್ಸ್ ಆಗಿ ಎರಡು ವರ್ಷಗಳ ಬಳಿಕವೂ ನಾನು ಬದುಕಿರುವುದೇ ಒಂದು ಸಾಕ್ಷಿ. ನೀವು ಒಂದು ಕಾಲದಲ್ಲಿ ರೋಧಿಸಿ, ಸರಿಪಡಿಸಿ ನಂತರ ಜಗತ್ತು ನಮ್ಮನ್ನು ನೋಡುತ್ತಲೇ ಇಲ್ಲ ಎಂಬ ಭಾವನೆಯಿಂದ ನರ್ತಿಸಿ ಎಂದು ಡಿವೋರ್ಸ್ಗೆ ಒಳಗಾದ ಮಹಿಳೆಯರಿಗೆ ಸಂದೇಶ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ