/newsfirstlive-kannada/media/post_attachments/wp-content/uploads/2025/05/Pakistan-spy.jpg)
ಪಹಲ್ಗಾಮ್ ಪೈಶಾಚಿಕ ದಾಳಿ ಬಳಿಕ ವಿಶ್ವದ ಎದುರು ಪಾಕಿಸ್ತಾನ ಅಕ್ಷರಶಃ ಮಂಡಿಯೂರಿದೆ. ಇತ್ತ ಧೈರ್ಯವಾಗಿ ಯುದ್ಧ ಮಾಡೋ ತಾಕತ್ತು ತೋರುತ್ತಿಲ್ಲ. ಭಾರತ ನಮ್ಮ ಮೇಲೆ ದಾಳಿ ಮಾಡೋದು ಪಕ್ಕಾ ಅಂತ ಹೇಳುತ್ತಲೇ ಇದೆ. ಹೇಗಿದ್ರೂ ಭಾರತದೊಂದಿಗೆ ಯುದ್ಧ ನಡೆದರೆ ಸೋಲೋದು ಪಕ್ಕಾ ಅಂತ ನಿರ್ಧರಿಸಿರೋ ಪಾಕ್ ಕಳ್ಳ ಹಾದಿ ಹಿಡಿದಿದೆ.
ಸಂದಿಗೊಂದಿಯ ಸೈಬರ್ ಯುದ್ಧ ಆರಂಭಿಸಿದ್ಯಾ ಪಾಕ್?
ನವಿಲನ್ನ ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಿತ್ತು ಅನ್ನೋ ಗಾದೆ ಮಾತು ನಿಮಗೆ ನೆನಪಿರಬಹುದು. ಥೇಟ್ ಅದೇ ರೀತಿಯಲ್ಲಿ ಪಾಕಿಸ್ತಾನ ನೇರವಾಗಿ ಭಾರತದೊಂದಿಗೆ ಯುದ್ಧ ಮಾಡೋ ಸಾಮರ್ಥ್ಯವಿಲ್ಲದೇ ಕಳ್ಳಹಾದಿ ಹಿಡಿದಿದೆ. ತನ್ನ ದೇಶದಲ್ಲಿನ ಒಂದಷ್ಟು ಹ್ಯಾಕರ್ಗಳನ್ನ ಗುಡ್ಡೆ ಹಾಕಿಕೊಂಡು ಸಂದಿಗೊಂದಿಯ ಸೈಬರ್ ಯುದ್ಧಕ್ಕೆ ಕಾಲು ಕೆರೆಯುತ್ತಿದೆಯೇ? ಇಂಥದ್ದೊಂದು ಅನುಮಾನಕ್ಕೆ ಕಾರಣ ಆಗಿರೋದೇ ಇದೊಂದು ಕೋಡ್ ವರ್ಡ್.. ಅದುವೇ ಸೈಬರ್ ಗ್ರೂಪ್ HOAX1337.
ಇದನ್ನೂ ಓದಿ: ಪಹಲ್ಗಾಮ್ ಘೋರ ದುರಂತ ಮರುಸೃಷ್ಟಿಸಿದ ಭರ್ಜರಿ ಬ್ಯಾಚ್ಯುಲರ್ಸ್ ವೇದಿಕೆ; ಎಲ್ಲರೂ ಭಾವುಕ!
ಏನಿದು HOAX1337 ಹಾಗೂ ನ್ಯಾಷನಲ್ ಸೈಬರ್ ಕ್ರೂ?
ಭಾರತದ ಪ್ರಮುಖ ವೆಬ್ಸೈಟ್ಗಳನ್ನ ಹ್ಯಾಕ್ ಮಾಡೋದಕ್ಕೆ ಪಾಕ್ನ ಇಮಾಮ್ ಹಮಾಮ್ ಹ್ಯಾಕರ್ಗಳು ಯತ್ನಿಸಿ ವಿಫಲರಾಗಿದ್ದಾರೆ. ಭಾರತೀಯ ಸೇನೆ ಸೇರಿಂದತೆ ಹಲವು ಪ್ರಮುಖ ವೆಬ್ಸೈಟ್ ಮೇಲೆ ಪಾಕ್ನ ಇದೇ HOAX1337 ಹಾಗೂ ನ್ಯಾಷನಲ್ ಸೈಬರ್ ಕ್ರೂ ಹೆಸರಿನ ಹ್ಯಾಕರ್ಗಳು ತಿಣುಕಾಡಿ ಸೋತಿರೋ ವಿಚಾರ ಇದೀಗ ಬಯಲಾಗಿದೆ. ಆರ್ಮಿ ಪಬ್ಲಿಕ್ ಸ್ಕೂಲ್, ಸೈನಿಕ್ ಹೆಲ್ತ್ ಕೇರ್ ಪೋರ್ಟಲ್ ಅಂತಹ ಪ್ರಮುಖ ಸೈಟ್ ಮೇಲೆ ಕಣ್ಣಿಟ್ಟಿದ್ರು. ಆದರೆ, ಭಾರತೀಯ ಸೈಬರ್ ಸೇನಾನಿಗಳ ಎದುರು ಗಪ್ಚುಪ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ