/newsfirstlive-kannada/media/post_attachments/wp-content/uploads/2025/04/PAK_CRICKETER.jpg)
3 ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ವೈಟ್ವಾಶ್ ನೋವಿನಲ್ಲಿ ಇರುವಾಗ ಆಘಾತಕಾರಿ ಘಟನೆಯೊಂದು ನಡೆದಿದೆ. ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯ ಸೋತ ಬಳಿಕ ಪಾಕ್ ಆಲರೌಂಡರ್ ಖುಷ್ದಿಲ್ ಶಾ ಬ್ಯಾರಿಕೇಡ್ ಜಿಗಿದು, ಇಬ್ಬರು ಕ್ರಿಕೆಟ್ ಅಭಿಮಾನಿಗಳನ್ನ ಥಳಿಸಲು ಮುಂದಾಗಿರುವ ಘಟನೆ ನಡೆದಿದೆ.
ನ್ಯೂಜಿಲೆಂಡ್ನ ಮೌಂಟ್ ಮೌಂಗನುಯಿಯಲ್ಲಿ 3ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಮೊದಲು ಬ್ಯಾಟಿಂಗ್ ಮಾಡಿತ್ತು. 42 ಓವರ್ನಲ್ಲಿ 8 ವಿಕೆಟ್ಗೆ 264 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನ ಹತ್ತಿದ್ದ ಪಾಕಿಸ್ತಾನ ವಿಫಲವಾಗಿ ಹೀನಾಯವಾಗಿ ಸೋತಿದೆ. 40 ಓವರ್ಗಳಲ್ಲಿ ಆಲೌಟ್ ಆದ ಪಾಕ್ ಕೇವಲ 221 ರನ್ ಗಳಿಸಿ ಸರಣಿಯಲ್ಲಿ ವೈಟ್ವಾಶ್ ಆಯಿತು.
ಇದೇ ಬೇಸರದಲ್ಲಿರುವಾಗ ಪಾಕ್ ಆಟಗಾರರನ್ನು ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನದ ಅಭಿಮಾನಿಗಳೇ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಪದೇ ಪದೇ ನಿಂದಿಸುತ್ತಿದ್ದರಿಂದ ಕೋಪಗೊಂಡ ಪಾಕ್ ಆಲರೌಂಡರ್ ಖುಷ್ದಿಲ್ ಶಾ, ಅಭಿಮಾನಿಗಳನ್ನು ಹೊಡೆಯಲು ಪ್ರಯತ್ನ ಮಾಡಿದ್ದಾರೆ. ಮೈದಾನದ ಬ್ಯಾರಿಕೇಡ್ ಹಾರಿ ಹೋಗುವಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆದು ದುರಂತವನ್ನ ತಡೆದಿದ್ದಾರೆ.
ಇದನ್ನೂ ಓದಿ:6, 6, 6; ಯಶಸ್ವಿ ಜೈಸ್ವಾಲ್ ಘರ್ಜನೆ ಆರಂಭ.. ಸ್ಫೋಟಕ ಅರ್ಧಶತಕ
ಅಭಿಮಾನಿಗಳು ನಿಂದಿಸುವಾಗ ಖುಷ್ದಿಲ್ ಶಾ ಕೂಡ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಪಂದ್ಯದಲ್ಲಿ ಖುಷ್ದಿಲ್ ಶಾನನ್ನು ಬೆಂಚ್ಗೆ ಸೀಮಿತ ಮಾಡಲಾಗಿತ್ತು. ಸದ್ಯ ಈ ಘಟನೆಯ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು ಪಾಕ್ ಕ್ರಿಕೆಟರನ ದುರ್ವರ್ತನೆಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಎಲ್ಲ ಮಾದರಿಗಳಲ್ಲೂ ಹೀನಾಯವಾಗಿ ಸೋಲು ಕಂಡಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ವೈಟ್-ಬಾಲ್ ಸರಣಿ ಪ್ರವಾಸದಲ್ಲಿ ಯಾವುದೂ ಸರಿಯಾಗಿ ಆಡಿಲ್ಲ. ಟಿ20 ಸರಣಿಯನ್ನು 1-4 ಅಂತರದಿಂದ ಸೋತು ಹೋಗಿದೆ. ಇದರ ಜೊತೆಗೆ ಇದೀಗ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ಗೆ ಒಳಗಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ