newsfirstkannada.com

‘ಜಿಂದಾಬಾದ್’ ಘೋಷಣೆ ವೇಳೆ ಬಾಂಬ್ ದಾಳಿ.. ಸ್ಫೋಟಗೊಳ್ಳುವ ಭೀಕರ ದೃಶ್ಯ ಮೊಬೈಲ್​​ನಲ್ಲಿ ಸೆರೆ -Video

Share :

Published July 31, 2023 at 8:36am

Update July 31, 2023 at 8:37am

    ರಾಜಕೀಯ ಸಮಾವೇಶ ಗುರಿಯಾಗಿಸಿಕೊಂಡು ದಾಳಿ

    44 ಕಾರ್ಯಕರ್ತರು ಸಾವು, 200 ಮಂದಿ ಆಸ್ಪತ್ರೆಗೆ ದಾಖಲು

    ನೋಡ ನೋಡುತ್ತಲೇ ಜನರ ದೇಹಗಳು ಛಿದ್ರಛಿದ್ರ

ಪಾಕಿಸ್ತಾನದ ಬಿಜೌರ್ ಜಿಲ್ಲೆಯ ಪಖ್ತುಂಖ್ವಾನಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರನೊಬ್ಬ ನಡೆಸಿದ ವಿಧ್ವಂಸಕ ಕೃತ್ಯಕ್ಕೆ 44 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಜೆಯುಐ-ಎಫ್​ ಪಕ್ಷವು (Jamiat Ulema Islam-Fazl) ಸಾರ್ವಜನಿಕ ಸಭೆ ನಡೆಸುತ್ತಿದ್ದಾಗ ಬಾಂಬ್ ದಾಳಿ ನಡೆಸಲಾಗಿದೆ.

ಬಾಂಬ್ ದಾಳಿ ಬೆನ್ನಲ್ಲೇ, ಸ್ಫೋಟದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ರಾಜಕೀಯ ಕಾರ್ಯಕರ್ತರು ತಮ್ಮ ಪಕ್ಷದ ಪರ ಜೈಕಾರ ಕೂಗುತ್ತಿದ್ದಾರೆ. ಹಜರತ್ ಮೌಲನಾ ಅಬ್ದುಲ್ ರಶೀದ್ ಸಾಹೇಬ್.. ಜಿಂದಾಬಾದ್​, ಜಿಂದಾಬಾದ್​ ಎಂದು ಘೋಷಣೆ ಕೇಳಿಬರುತ್ತಿದೆ. ಈ ಬೆನ್ನಲ್ಲೇ ಭಯಾನಕವಾಗಿ ಸ್ಫೋಟಗೊಂಡಿದೆ.

ಇನ್ನು ಸಮಾವೇಶವು ಅಫ್ಘಾನಿಸ್ತಾನ ಗಡಿಯ ಖೇರ್​ ಪ್ರದೇಶದ ಬಳಿ ನಡೆದಿತ್ತು. JUI-F ಪಕ್ಷದಿಂದ ಸುಮಾರು 4000 ಕಾರ್ಯಕರ್ತರು ಭಾಗಿಯಾಗಿದ್ದರು. ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಆತ್ಮಾಹುತಿ ಬಾಂಬ್ ದಾಳಿಕೋರ ಸ್ಫೋಟ ನಡೆಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜಿಂದಾಬಾದ್’ ಘೋಷಣೆ ವೇಳೆ ಬಾಂಬ್ ದಾಳಿ.. ಸ್ಫೋಟಗೊಳ್ಳುವ ಭೀಕರ ದೃಶ್ಯ ಮೊಬೈಲ್​​ನಲ್ಲಿ ಸೆರೆ -Video

https://newsfirstlive.com/wp-content/uploads/2023/07/PAK-2-1.jpg

Load More