/newsfirstlive-kannada/media/post_attachments/wp-content/uploads/2025/06/PAK_1.jpg)
ಬಡತನ ಕಡಿಮೆ ಮಾಡುವಲ್ಲಿ ಭಾರತ ದೊಡ್ಡ ಪ್ರಗತಿ ಸಾಧಿಸುತ್ತಿದ್ರೆ, ಅತ್ತ ಪಾಕಿಸ್ತಾನದ ಬಡತನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಪಾಕಿಸ್ತಾನದಲ್ಲಿ ಬಡತನ ಶೇಕಡಾ 45 ರಷ್ಟು ಏರಿಕೆ ಕಂಡಿದ್ರೆ, ಶೇಕಡಾ 16.5 ರಷ್ಟು ಜನರು ತೀವ್ರ ಬಡತನದಲ್ಲಿ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ವಿಶ್ವಬ್ಯಾಂಕ್ ಬಡತನ ರೇಖೆಯ ಮಿತಿ ಪರಿಷ್ಕರಣೆಯ ನಂತರ ಪಾಕಿಸ್ತಾನದ ಮಾಹಿತಿ ಬಹಿರಂಗಗೊಂಡಿದೆ. 2024-25ರಲ್ಲಿ ಪಾಕಿಸ್ತಾನದಲ್ಲಿ 1.9 ಮಿಲಿಯನ್ ಹೆಚ್ಚುವರಿ ಜನರು ಬಡತನಕ್ಕೆ ಒಳಗಾಗಿದ್ದಾರೆ ಎಂದು ವಿಶ್ವಬ್ಯಾಂಕ್ ಹೇಳಿತ್ತು. ಪಾಕ್ನಲ್ಲಿ ಜನಸಂಖ್ಯೆಯೂ ವಾರ್ಷಿಕವಾಗಿ ಸುಮಾರು ಶೇ.2ರಷ್ಟು ವೃದ್ಧಿಗೊಳ್ಳುತ್ತಿದೆ. ಇದರಿಂದ ಈ ವರ್ಷ 1.9 ಮಿಲಿಯನ್ ಹೆಚ್ಚಿನ ಜನರು ಬಡತನ ಅನುಭವಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ.
ಇದನ್ನೂ ಓದಿ:ಡಬಲ್ ಬ್ಯಾರೆಲ್ ರೈಫಲ್ನಿಂದ ತನಗೆ ತಾನೇ ಶೂಟ್ ಮಾಡಿಕೊಂಡ ಯುವಕ.. ಕಾರಣವೇನು?
ಐಎಂಎಫ್, ವರ್ಲ್ಡ್ ಬ್ಯಾಂಕ್ ನೀಡುವ ಸಾಲವನ್ನು ಪಾಕಿಸ್ತಾನ ತನ್ನ ಜನರ ಬಡತನ ನಿರ್ಮೂಲನೆಗೆ ಬಳಸಿಲ್ಲ. ಬದಲಾಗಿ ಆ ಹಣವನ್ನು ಭಯೋತ್ಪಾದನೆಗೆ ಬಳಸಲಾಗಿದೆ ಎಂದು ಭಾರತ ಬಲವಾಗಿ ಪ್ರತಿ ಪಾದಿಸುತ್ತಿದೆ. ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪ್ರಚೋದಿಸಲು ಪಾಕಿಸ್ತಾನ ಜಾಗತಿಕ ನೆರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಆ ಹಣ ಸಾಮಾನ್ಯ ಜನರಿಗಾಗಿ ಬಳಕೆ ಆಗಿಲ್ಲ. ಹೀಗಾಗಿ ಆ ದೇಶದಲ್ಲಿ ಬಡತನ ಹೆಚ್ಚುತ್ತಿದೆ. ಈ ಬಗ್ಗೆ ಡೇಟಾವನ್ನು ವಿಶ್ವಬ್ಯಾಂಕ್ ಸಂಗ್ರಹಿಸಿ ಮಾಹಿತಿ ಕಲೆಹಾಬಹುದು ಎಂದು ಹೇಳಲಾಗಿದೆ.
ಭಾರತದ ಬಡತನ ಶೇ.5.3 ಕ್ಕೆ ಕುಸಿದಿದೆ. ಕಳೆದ 12 ವರ್ಷದಲ್ಲಿ ಬಡತನದ ಪ್ರಮಾಣ ಭಾರೀ ಇಳಿಕೆ ಆಗಿದೆ. ವಿಶ್ವ ಬ್ಯಾಂಕ್ ಕಳೆದ ವಾರ ರಿಲೀಸ್ ಮಾಡಿರುವ ಬಡತನ ಪ್ರಮಾಣದ ಅಂಕಿ ಅಂಶಗಳಲ್ಲಿ ಭಾರತ ಬಡತನದಿಂದ ಹೆಚ್ಚು ಚೇತರಿಕೆ ಕಂಡಿರುವುದು ಇದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 26 ಕೋಟಿ 7 ಲಕ್ಷ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ