ಮೊಹಮ್ಮದ್ ಅಮೀರ್ ಕ್ರಿಕೆಟ್​ಗೆ ಮತ್ತೆ ವಿದಾಯ.. ಆಲ್​ರೌಂಡರ್ ಬೆನ್ನಲ್ಲೇ ಪೇಸ್ ಬೌಲರ್ ಬಿಗ್ ಶಾಕ್

author-image
Bheemappa
Updated On
ಮೊಹಮ್ಮದ್ ಅಮೀರ್ ಕ್ರಿಕೆಟ್​ಗೆ ಮತ್ತೆ ವಿದಾಯ.. ಆಲ್​ರೌಂಡರ್ ಬೆನ್ನಲ್ಲೇ ಪೇಸ್ ಬೌಲರ್ ಬಿಗ್ ಶಾಕ್
Advertisment
  • ಚಾಂಪಿಯನ್ ಟ್ರೋಫಿಯಲ್ಲಿ ಭಾರತದ ಸೋಲಿಗೆ ಕಾರಣರಾಗಿದ್ದರು
  • ಮೂರು ದಿನದ ಅಂತರದಲ್ಲಿ ತಂಡಕ್ಕೆ ಇಬ್ಬರು ನಿವೃತ್ತಿ ಘೋಷಣೆ
  • 2009ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು

ಪಾಕಿಸ್ತಾನ ಕ್ರಿಕೆಟ್​ ತಂಡದ ಪೇಸ್ ಬೌಲರ್ ಮೊಹಮ್ಮದ್ ಅಮೀರ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮತ್ತೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆಲ್‌ರೌಂಡರ್ ಇಮಾದ್ ವಾಸಿಮ್ ನಿವೃತ್ತಿ ಘೋಷಣೆ ಮಾಡಿದ ಮರು ದಿನವೇ ಮೊಹಮ್ಮದ್ ಅಮೀರ್ ಕ್ರಿಕೆಟ್​​ಗೆ ವಿದಾಯ ಹೇಳಿದ್ದಾರೆ.

ಮೊಹಮ್ಮದ್ ಅಮೀರ್ ಇದೀಗ 32 ವರ್ಷದ ಆಟಗಾರ. ಲೆಫ್ಟ್​ ಹ್ಯಾಂಡ್ ಬೌಲಿಂಗ್, ಲೆಫ್ಟ್​ ಹ್ಯಾಂಡ್ ಬ್ಯಾಟರ್ ಆಗಿರುವ ಇವರು 2009ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಈ ಹಿಂದೆ ಒಮ್ಮೆ ಕ್ರಿಕೆಟ್​ಗೆ ವಿದಾಯ ಹೇಳಿ ಮತ್ತೆ ಬಂದಿದ್ದರು. ಆದರೆ ಈಗ ಮತ್ತೊಮ್ಮೆ ನಿವೃತ್ತಿ ಘೋಷಣೆ ಮಾಡಿದ್ದಾರೆ.  ಅಂದಿನಿಂದ ಇಲ್ಲಿವರೆಗೆ 36 ಟೆಸ್ಟ್​ ಪಂದ್ಯಗಳನ್ನು ಆಡಿದ್ದು 119 ವಿಕೆಟ್​ಗಳನ್ನು ಉರುಳಿಸಿದ್ದಾರೆ. 44 ರನ್​ಗೆ 6 ವಿಕೆಟ್ ಪಡೆದಿರುವುದು ಅವರ ಟೆಸ್ಟ್ ಬೆಸ್ಟ್ ಬೌಲಿಂಗ್ ಸಾಧನೆ ಆಗಿದೆ.

publive-image

ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ PV ಸಿಂಧು ಅದ್ಧೂರಿ ನಿಶ್ಚಿತಾರ್ಥ.. ಹುಡುಗ ಯಾರು, ಏನು ಮಾಡುತ್ತಾರೆ?

61 ಏಕದಿನ ಪಂದ್ಯಗಳನ್ನು ಆಡಿದ್ದು 81 ವಿಕೆಟ್​ಗಳನ್ನು ಪಡೆದಿದ್ದಾರೆ. 30 ರನ್​ಗೆ 5 ವಿಕೆಟ್ ಪಡೆದಿರುವುದು ಉತ್ತಮ ಸಾಧನೆ ಆಗಿದೆ. 32 ಟಿ20 ಪಂದ್ಯಗಳನ್ನು ಆಡಿದ್ದು 71 ವಿಕೆಟ್​ ಉರುಳಿಸಿದ್ದಾರೆ. 13 ರನ್​ಗೆ 4 ವಿಕೆಟ್ ಪಡೆದಿರುವುದು ಅವರ ಟಿ20 ಕ್ರಿಕೆಟ್​ ಜೀವನದ ಬೆಸ್ಟ್ ಬೌಲಿಂಗ್ ಆಗಿದೆ. 2017ರ ಚಾಂಪಿಯನ್ ಟ್ರೋಫಿ ಫೈನಲ್​ ಪಂದ್ಯದಲ್ಲಿ ಭಾರತ ಜೊತೆ ಉತ್ತಮ ಬೌಲಿಂಗ್ ಮಾಡಿದ್ದ ಅಮೀರ್ 16 ರನ್​ಗೆ 3 ವಿಕೆಟ್ ಪಡೆದು ತಂಡದ ಗೆಲುವುಗೆ ಕಾರಣರಾಗಿದ್ದರು. ರೋಹಿತ್, ಕೊಹ್ಲಿ ಹಾಗೂ ಶಿಖರ್ ಧವನ್ ಅವರನ್ನು ಔಟ್ ಮಾಡಿದ್ದರು.

ಈ ಕುರಿತು ತಮ್ಮ ಟ್ವೀಟರ್ ಅಕೌಂಟ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದು ನನ್ನ ಜೀವನದ ಅತ್ಯಂತ ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿದ್ದು ಸರಿಯಾದ ಸಮಯಕ್ಕೆ ಈ ನಿರ್ಧಾರ ಮಾಡಿದ್ದೇನೆ ಅನಿಸಿದೆ. ಯಂಗ್ ಪ್ಲೇಯರ್ಸ್​ ತಂಡಕ್ಕೆ ಬಂದು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment