POK ಗಡಿಯಲ್ಲಿ ಪಾಕಿಸ್ತಾನಿ ಸಚಿವನಿಂದ ಹೊಸ ನಾಟಕ.. ಹೆಂಗಿದೆ ಗೊತ್ತಾ ಹೈಡ್ರಾಮಾ..?

author-image
Ganesh
Updated On
ಅತ್ತ ಧರಿ.. ಇತ್ತ ಪುಲಿ.. ಪಾಕಿಸ್ತಾನದ ಒಳಗೆ ಆಂತರಿಕ ಯುದ್ಧ; ಪಾಕ್ ಸೇನೆಗೆ ದೊಡ್ಡ ಹೊಡೆತ
Advertisment
  • ಜಗತ್ತಿನ ಮುಂದೆ ಒಳ್ಳೆಯವ ಎಂದು ತೋರಿಸಲು ಹೈಡ್ರಾಮಾ
  • ಗಡಿಗೆ ರಾಷ್ಟ್ರಿಯ ಮಾಧ್ಯಮ ಕರ್ಕೊಂಡು ಬಂದು ನಾಟಕ
  • ಭಯದ ಜೊತೆಗೆ ಪ್ರಚೋದನಾಕಾರಿ ಹೇಳಿಕೆ ಕೊಟ್ಟ

ಪಿಓಕೆಗೆ (ಪಾಕ್ ಆಕ್ರಮಿತ ಪಾಕಿಸ್ತಾನ) ಮಾಧ್ಯಮಗಳನ್ನ ಕರೆತಂದು ಪಾಕಿಸ್ತಾನ ಹೈಡ್ರಾಮಾ ಮಾಡಿದೆ. ಪಿಓಕೆಯಲ್ಲಿ ಉಗ್ರರ ನೆಲೆಗಳು ಇರೋ ಬಗ್ಗೆ ಭಾರತ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪಾಕ್​ನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅತ್ತುಲ್ಲಾ ತರಾರ್ ಪಾಕ್ ಗಡಿಗೆ ರಾಷ್ಟ್ರೀಯ ಮಾಧ್ಯಮಗಳನ್ನು ಕರೆತಂದಿದ್ದಾನೆ.

ಭಾರತ ಹೇಳುವ ಹಾಗೆ ನಮ್ಮಲ್ಲಿ ಉಗ್ರರ ನೆಲೆಗಳಿಲ್ಲ. ಭಾರತ ಸುಖಾಸುಮ್ಮನೆ ಪಾಕ್ ಮೇಲೆ ಆರೋಪ ಮಾಡ್ತಿದೆ ಎಂಬ ಸಂದೇಶ ರವಾನೆ ಮಾಡಲು ಕುತಂತ್ರ ರೂಪಿಸಿದೆ. ಪಾಕಿಸ್ತಾನ ಈ ನಡೆಗೆ ಭಾರತ ಮಾತ್ರವಲ್ಲ, ವಿಶ್ವದ ಹಲವು ದೇಶಗಳಿಂದ ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ತಮ್ಮನ್ನ ತಾವು ಒಳ್ಳೆಯವರು ಎಂದು ಹೇಳಿಕೊಳ್ಳಲು ಪಾಕ್​ ಹೈಡ್ರಾಮಾ ಮಾಡಿದೆ.

ಇದನ್ನೂ ಓದಿ: ಯುದ್ಧ ಘೋಷಣೆ ಆಗೇಬಿಡುತ್ತಾ..? ನಾಳೆ ಪ್ರಧಾನಿ ಮೋದಿಯಿಂದ ಮಹತ್ವದ ನಿರ್ಧಾರ ಸಾಧ್ಯತೆ

ಪ್ರಚೋದನಾಕಾರಿ ಹೇಳಿಕೆ..

ಅಷ್ಟೇ ಅಲ್ಲದೇ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಆತ, ನಮ್ಮ ರಕ್ಷಣಾ ವ್ಯವಸ್ಥೆಗಳು ತುಂಬಾ ಬಲಿಷ್ಠವಾಗಿವೆ. ನಮ್ಮ ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ನಿಯಮಿತವಾಗಿ ಕ್ಷಿಪಣಿ ಪರೀಕ್ಷೆ ನಡೆಸುತ್ತೇವೆ. ಪಾಕಿಸ್ತಾನ ಪರಮಾಣು ಶಕ್ತಿಯಾಗಿದ್ದು, ಈ ಪರೀಕ್ಷೆಗಳು ನಿಯಮಿತವಾಗಿ ನಡೆಯುತ್ತವೆ. ಪಾಕಿಸ್ತಾನ ಶಾಂತಿಯನ್ನು ನಂಬುತ್ತದೆ, ಆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದಿದ್ದಾನೆ.

ಇದನ್ನೂ ಓದಿ: ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಸಾಧ್ಯತೆ.. ಯಾಕೆ ಈ ಪ್ರದೇಶಗಳಲ್ಲೇ ಯುದ್ಧ ಕವಾಯತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment