/newsfirstlive-kannada/media/post_attachments/wp-content/uploads/2023/06/PANCARD.jpg)
ಪ್ಯಾನ್​​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡುವಂತೆ ಸರ್ಕಾರ ಈಗಾಗಲೇ ಅನೇಕ ಬಾರಿ ಹೇಳಿರೋದು ಗೊತ್ತೇ ಇದೆ. ಹಣಕಾಸು ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಈ ನಿರ್ಧಾರ ಕೈಗೊಂಡಿದೆ.
ಇನ್ಮೇಲೆ ಲಿಂಕ್ ಮಾಡದಿದ್ದರೆ ಭಾರೀ ದಂಡ ಬೀಳುವ ಸಾಧ್ಯತೆ ಇದೆ. ಡಿಸೆಂಬರ್ 31ರೊಳಗೆ ಪ್ಯಾನ್ ಕಾರ್ಡ್​ಗೆ ಆಧಾರ್ ಲಿಂಕ್ ಮಾಡುವಂತೆ ಸೂಚಿಸಲಾಗಿದೆ. ಡಿಸೆಂಬರ್ 31ರ ನಂತರ ಲಿಂಕ್ ಆಗಿರದ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ನಿಷ್ಕ್ರಿಯಗೊಂಡರೆ ಹೊಸ ಪ್ಯಾನ್ ಕಾರ್ಡ್ ತೆಗೆದುಕೊಳ್ಳುವುದನ್ನು ಬಿಟ್ಟರೆ ಬೇರೆ ದಾರಿ ಆಯ್ಕೆ ಇರುವುದಿಲ್ಲ. ಆದರೆ ಇದರಲ್ಲೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಇದನ್ನೂ ಓದಿ: ATM ರೀತಿಯಲ್ಲೇ ಆಧಾರ್ ಕಾರ್ಡ್​..! ಮನೆಯಲ್ಲೇ ಕೂತು ನೀವು ಪಡೆದುಕೊಳ್ಳಬಹುದು..!
ಕೆಲವು ಕಂಪನಿಗಳು ಗ್ರಾಹಕರ ಅನುಮತಿಯಿಲ್ಲದೇ ಅವರ ಪ್ರೊಫೈಲ್‌ಗಳನ್ನು ರಚಿಸಲು ಪ್ಯಾನ್ ಮಾಹಿತಿ ಬಳಸುತ್ತಿವೆ. ಇದು ಆರ್ಥಿಕ ಅಪರಾಧಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಸರ್ಕಾರ ಆಧಾರ್ ಲಿಂಕ್​ ನಿಯಮವನ್ನು ಜಾರಿಗೆ ತಂದಿದೆ. ಪ್ಯಾನ್ ಕಾರ್ಡ್ ದುರ್ಬಳಕೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us