newsfirstkannada.com

Share :

Published May 26, 2023 at 12:51am

  ಮೆಗಾಸ್ಟಾರ್​ ಎದುರು ಗೆದ್ದು ಬಂದ ಬಜರಂಗಿ!

  ಲೋಕಿ ಲೈಫ್ ಬದಲಿಸ್ತಾರಾ ನೀಲ್?

  ಕನ್ನಡದ ಪ್ರತಿಭಾನ್ವಿತ ನಟ ಸೌರವ್ ಲೋಕಿ

ಟ್ಯಾಲೆಂಟ್​ ಇರುತ್ತೆ, ಅವಕಾಶನೂ ಸಿಗುತ್ತೆ. ಆದ್ರೆ ಗೆಲುವು ಸಿಕ್ಕಲ್ಲ. ಇಂಡಸ್ಟ್ರಿಯಲ್ಲಿ ಹುಡುಕಿದ್ರೆ ಇಂಥ ನೂರಾರು ಪ್ರತಿಭೆಗಳು ಸಿಗುತ್ತೆ. ಈ ಸಲ ಈ ನಟನ ಬಗ್ಗೆ ಪ್ಯಾನ್ ಇಂಡಿಯಾ ಸುದ್ದಿಯಾಗಬಹುದು ಅನ್ನೋ ಭರವಸೆ ಹುಟ್ಕೊಂಡಿದೆ. ಭಜರಂಗಿ-2 ಸಿನಿಮಾವನ್ನು ನೋಡಿದವರಿಗೆ ನಟ ಯಾರು ಅಂತ ಗೊತ್ತಾಗಿರುತ್ತೆ. ಖಡಕ್ ಹೈಟ್​, ಕಟ್ಟುಮಸ್ತಾದ ಫಿಟ್ನೆಸ್​, ಅದ್ಭುತ ಟ್ಯಾಲೆಂಟ್​. ಕನ್ನಡದ ಪ್ರತಿಭಾನ್ವಿತ ನಟ ಸೌರವ್ ಲೋಕಿ ಅಲಿಯಾಸ್ ಭಜರಂಗಿ ಲೋಕಿ.

2009ರಲ್ಲಿ ‘ಸವಾರಿ’ ಚಿತ್ರದಲ್ಲಿ ಮೊದಲ ಸಲ ಬಣ್ಣ ಹಚ್ಚಿದ್ದ ಸೌರವ್ ಲೋಕಿ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ರು ಲೋಕಿ ಅಂತ ರೆಕಗನೈಸ್​ ಆಗಿದ್ದು ಮಾತ್ರ ಶಿವಣ್ಣನ ‘ಭಜರಂಗಿ’ ಚಿತ್ರದಲ್ಲಿ. ನರಹಂತಕ, ರಕ್ತಾಕ್ಷನ ಪಾತ್ರ ಮಾಡಿದ ಲೋಕಿ ಈ ಸಿನಿಮಾದೊಂದಿಗೆ ಭಜರಂಗಿ ಲೋಕಿ ಅಂತಾನೇ ಫೇಮಸ್ ಆದರು. ಭಜರಂಗಿ ಚಿತ್ರದಲ್ಲಿ ಲೋಕಿ ಪರ್ಫಾಮೆನ್ಸ್​ ನೋಡಿದ ಈ ಹುಡುಗನಿಗೆ ಒಳ್ಳೆಯ ಭವಿಷ್ಯ ಇದೆ. ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಅಂತೆಲ್ಲಾ ಹರಸಿ ಹಾರೈಸಿದ್ರು. ಅದರಂತೆ ಒಳ್ಳೊಳ್ಳೆ ಅವಕಾಶಗಳು ಕೂಡ ಬಂತು. ಶಿವಣ್ಣ, ಯಶ್​, ಶ್ರೀಮುರಳಿ, ನಿಖಿಲ್, ಶರಣ್ ಸೇರಿ 2021ರಲ್ಲಿ ಬಂದ ಭಜರಂಗಿ-2 ಚಿತ್ರದವರೆಗೂ ವಿಭಿನ್ನ ಪಾತ್ರ, ವಿಶೇಷ ಅಭಿನಯದ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆದ್ರು. ಆದ್ರೆ, ಈವರೆಗೂ ಭಜರಂಗಿ ಮತ್ತು ಭಜರಂಗಿ-2 ಪಾತ್ರಗಳು ಕೊಟ್ಟಷ್ಟು ಖ್ಯಾತಿ ಬೇರೆ ಪಾತ್ರಗಳಿಂದ ಸಿಕ್ಕಿಲ್ಲ ಅನ್ನೋದು ವಾಸ್ತವ.

ಮೆಗಾಸ್ಟಾರ್​ ಎದುರು ಗೆದ್ದು ಬಂದ ಭಜರಂಗಿ!

ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ಲೋಕಿ ಬಹಳ ಇಂಪಾರ್ಟೆಂಟ್​ ಪಾತ್ರವೊಂದನ್ನ ಮಾಡಿ ಸೈ ಎನಿಸಿಕೊಂಡರು. ಅದರ ಜೊತೆಗೆ ‘ಲೋಕಲ್ ಟ್ರೈನ್’ ಎನ್ನುವ ಮತ್ತೊಂದು ತೆಲುಗು ಸಿನಿಮಾದಲ್ಲೂ ನಟಿಸಿದ್ದರು. ಹೀಗೆ ಸ್ಯಾಂಡಲ್​ವುಡ್​ ಜೊತೆ ಪಕ್ಕದ ತೆಲುಗು ರಾಜ್ಯದಲ್ಲೂ ಕಮಾಲ್ ಮಾಡಿದ ಲೋಕಿಗೆ ಈಗ ಭರ್ಜರಿ ಅವಕಾಶವೊಂದು ಸಿಕ್ಕಿದ್ದು, ಈ ಅವಕಾಶ ಕೈ ಹಿಡಿದ್ರೆ ಲೋಕಿ ಅದೃಷ್ಟನೇ ಬದಲಾಗುವ ಸಾಧ್ಯತೆ ಇದೆ.

ಪ್ಯಾನ್ ಇಂಡಿಯಾ ಚಿತ್ರದಲ್ಲಿ ಭಜರಂಗಿ ಲೋಕಿ!

ಇಷ್ಟು ದಿನ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದ ಲೋಕಿ ಈಗ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸಲಾರ್ ಚಿತ್ರದಲ್ಲಿ ಲೋಕಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರಂತೆ. ಪ್ರಭಾಸ್​ ನಾಯಕನಾಗಿರೋ ಈ ಚಿತ್ರದಲ್ಲಿ ಜಗಪತಿಬಾಬು, ಪೃಥ್ವಿರಾಜ್ ಸುಕುಮಾರನ್ ಹಾಗೂ ಕನ್ನಡದ ಪ್ರಮೋದ್ ಪಂಜು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಜೊತೆ ಭಜರಂಗಿ ಲೋಕಿನೂ ತೊಡೆ ತಟ್ಟಲಿದ್ದಾರೆ ಅನ್ನೋ ಎಕ್ಸ್​ಕ್ಲೂಸಿವ್ ಸಮಾಚಾರ ಹೊರಬಿದ್ದಿದೆ. ಹೊಂಬಾಳೆ ಸಾರಥ್ಯದಲ್ಲಿ ನೀಲ್ ಕಲ್ಪನೆಯಲ್ಲಿ ರೆಡಿಯಾಗ್ತಿರೋ ಸಲಾರ್​ ಇದೇ ಸೆಪ್ಟೆಂಬರ್ 28ಕ್ಕೆ ವರ್ಲ್ಡ್​ವೈಡ್​ ರಿಲೀಸ್ ಆಗ್ತಿದ್ದು, ಇಂಡಿಯಾದ ಬಿಗ್ಗೆಸ್ಟ್​ ಆ್ಯಕ್ಷನ್ ಅಡ್ವೆಂಚರ್ ಎಂದು ಹೇಳಲಾಗುತ್ತಿದೆ. ಕೆಜಿಎಫ್​ ಮೀರಿಸೋ ಲೆವೆಲ್​ಗೆ ಸಲಾರ್​ ತಯಾರಾಗಿದ್ದು, ಇಂಥಾ ಹೈ ವೋಲ್ಟೇಜ್ ಚಿತ್ರದಲ್ಲಿ ಲೋಕಿ ಕಾಣಿಸಿಕೊಂಡಿದ್ದು, ಲೋಕಿ ಪ್ರತಿಭೆಗೆ ತಕ್ಕ ಕ್ಯಾರೆಕ್ಟರ್​ನ ಪ್ರಶಾಂತ್ ನೀಲ್ ಡಿಸೈನ್ ಮಾಡಿರ್ತಾರೆ, ಈ ಸಿನಿಮಾದಿಂದ ಲೋಕಿ ಪ್ಯಾನ್ ಇಂಡಿಯಾ ಲೋಕಕ್ಕೆ ಪರಿಚಯ ಆಗ್ತಾರೆ ಅನ್ನೋ ನಿರೀಕ್ಷೆ ಹುಟ್ಕೊಂಡಿದೆ. ಅದು ನಿಜ ಆಗಲಿ ಅಂತ ನಿಮ್ಮ ಜೊತೆ ನಾವು ಕೂಡ ಹಾರೈಸ್ತೀವಿ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More