/newsfirstlive-kannada/media/post_attachments/wp-content/uploads/2025/01/PANIPURI-GST-1.jpg)
ನಮ್ಮ ದೇಶದಲ್ಲಿ ಅತಿಹೆಚ್ಚು ಪ್ರಸಿದ್ಧಿ ಪಡೆದಿರುವ ಬೀದಿ ಬದಿಯ ಆಹಾರವೆಂದರೆ ಅದು ಪಾನಿಪುರಿ. ಹಿಂದಿ ಗೊತ್ತಿಲ್ಲದವರು ಕೂಡ ಭಯ್ಯಾ ಏಕ್ ಪ್ಲೇಟ್ ಪಾನಿಪುರಿ ಅನ್ನೋ ಶಬ್ದವನ್ನು ಕಲಿತೇ ಇರುತ್ತಾರೆ. ಅಷ್ಟೊಂದು ಫೇಮಸ್ ಈ ಪಾನಿಪುರಿ. ಒಂದು ಬಾರಿ ರುಚಿಕಟ್ಟಾದ ಪಾನಿಪುರಿಯನ್ನು ನೀಡಿದ್ರೆ ಸಾಕು ಜನ ಹುಡುಕಿಕೊಂಡು ಆ ಅಂಗಡಿಗೆ ಹೋಗುತ್ತಾರೆ. ಹೀಗೆಯೇ ರುಚಿ ರುಚಿಯಾದ ಪಾನಿಪುರಿ ಮಾರಿದ ತಮಿಳುನಾಡು ವ್ಯಾಪಾರಸ್ಥನಿಗೆ ಜಿಎಸ್ಟಿ ನೋಟಿಸ್ ನೀಡಿದೆ. ಕಾರಣ ಈತ ಡಿಜಿಟಲ್ ಪೇಮೆಂಟ್ ಮೂಲಕ ಸುಮಾರು 40 ಲಕ್ಷ ರೂಪಾಯಿಗೂ ಅಧಿಕ ಹಣ ಸ್ವೀಕರಿಸಿರುವುದು.
ಕಳೆದ ಒಂದು ವರ್ಷದಲ್ಲಿ ಡಿಜಿಟಿಲ್ ಪೇಮೆಂಟ್ ಮೂಲಕ ಈತ ಸ್ವೀಕರಿಸಿದ ಒಟ್ಟು ಮೊತ್ತ 40,11,019 ರೂಪಾಯಿ ಸ್ವೀಕರಿಸಿದ್ದಾನೆ. ಸಾಮಾನ್ಯವಾಗಿ ಗೂಡಂಗಡಿಗಳು ಟ್ಯಾಕ್ಸ್ ಕಟ್ಟುವುದರಿಂದ ವಿನಾಯಿತಿ ಪಡೆದಿರುತ್ತವೆ ಕಾರಣ ಇವು ಸಣ್ಣ ಪ್ರಮಾಣದ ಉದ್ಯಮವೆಂದು. ಆದ್ರೆ ಈಗ ಫೋನ್ ಪೇ, ಗೂಗಲ್ ಪೇಯಂತಹ ಡಿಜಿಟಲ್ ವೇದಿಕೆಗಳು ಬಂದಿರುವುದರಿಂದ ಆಯಾ ವ್ಯಾಪಾರಿಗಳ ಅದಾಯಗಳ ಈಗ ಸರಳವಾಗಿ ಜಿಎಸ್ಟಿ ಪಡೆಯ ಸ್ಕಾನರ್ ಕಣ್ಣಿಗೆ ಸಿಗುತ್ತವೆ. ಅದಕ್ಕೆ ದೊಡ್ಡ ಸಾಕ್ಷಿಯೇ ತಮಿಳುನಾಡಿನ ಈ ಪಾನಿಪುರಿ ಅಂಗಡಿಯವನು. ಯುಪಿಐ ಡಿಜಿಟಲ್ ಪೇಮೆಂಟ್ ವೇದಿಕೆಯಿಂದ ಈತ ಒಂದು ವರ್ಷದಲ್ಲಿ ಸುಮಾರು 40 ಲಕ್ಷ ರೂಪಾಯಿ ಹಣ ಸ್ವೀಕರಿಸಿದ್ದು ಜಿಎಸ್ಟಿ ಅಧಿಕಾರಿಗಳಿಂದ ನೋಟಿಸ್ ಹೋಗಿದೆ.
ಇದನ್ನೂ ಓದಿ:ಡ್ರ್ಯಾಗನ್ ದೇಶದಲ್ಲಿ HMPV ವೈರಸ್ ಆರ್ಭಟ.. ಕೇಂದ್ರ ಸರ್ಕಾರದಿಂದ ಎಚ್ಚರಿಕೆ ಏನು?
ತಮಿಳುನಾಡು ಜಿಎಸ್ಟಿಯಿಂದ ಡಿಸೆಂಬರ್ 17 , 2024ರಂದು ಹೋಗಿರುವ ನೋಟಿಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೆಕ್ಷನ್ 70 ಕೇಂದ್ರ ಜಿಎಸ್ಟಿ ಆ್ಯಕ್ಟ್ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಕಳೆದ ಮೂರು ವರ್ಷಗಳವರೆಗೆ ನಡೆದಿರುವ ವ್ಯವಹಾರಗಳ ವಿವರವನ್ನು ನೀಡುವಂತೆ ಜಿಎಸ್ಟಿ ವ್ಯಾಪಾರಿಗೆ ಸೂಚನೆ ನೀಡಿದೆ. ಅದರಲ್ಲೂ ಪ್ರಮುಖವಾಗಿ 2023-24ರ ಸಾಲಿನಲ್ಲಿ ನಡೆದಿರುವ ಒಟ್ಟು ವ್ಯವಹಾರಗಳ ವಿವರ ನೀಡುವಂತೆ ಜಿಎಸ್ಟಿ ನೋಟಿಸ್ ನೀಡಿದೆ.
Pani puri wala makes 40L per year and gets an income tax notice 🤑🤑 pic.twitter.com/yotdWohZG6
— Jagdish Chaturvedi (@DrJagdishChatur)
Pani puri wala makes 40L per year and gets an income tax notice 🤑🤑 pic.twitter.com/yotdWohZG6
— Jagdish Chaturvedi (@DrJagdishChatur) January 2, 2025
">January 2, 2025
ಇದನ್ನೂ ಓದಿ:ಪ್ರಪಾತಕ್ಕೆ ಉರುಳಿ ಬಿದ್ದ ಮತ್ತೊಂದು ಸೇನಾ ವಾಹನ.. ಯೋಧರು ಹುತಾತ್ಮ
ಈ ಒಂದು ನೋಟಿಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ನಾವು ಕಾರ್ಪೋರೇಟ್ ಜಾಬ್ ಬಿಟ್ಟು ಪಾನಿಪುರಿ ಅಂಗಡಿ ಇಡುವುದೇ ಒಳ್ಳೆಯದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಯುಪಿಐ ಪೇಮೆಂಟ್ ದೇಶದಲ್ಲಿ ಜನಪ್ರಿಯತೆಯನ್ನು ಪಡೆದಿವೆ. ಚಿಕ್ಕಪುಟ್ಟ ವ್ಯಾಪಾರಸ್ಥರು ಕೂಡ ಈಗ ಕ್ಯಾಶ್ಗೆ ಬದಲು ಡಿಜಿಟಲ್ ಪೇಮೆಂಟ್ನತ್ತ ಹೊರಳಿದ್ದಾರೆ. ಇದು ಅವರ ವ್ಯಾಪಾರದ ಅಸಲಿ ಗಳಿಕೆಯನ್ನು ಗುರುತಿಸಲು ಸಹಾಯಕವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ