/newsfirstlive-kannada/media/post_attachments/wp-content/uploads/2025/05/rakshit-shetty1.jpg)
ಉಡುಪಿ: ಸ್ಯಾಂಡಲ್ವುಡ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಚಿತ್ರ ರಿಚರ್ಡ್ ಆಂಟೋನಿ, ಮಿಥ್ಯ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ತನ್ನ ಕುಟುಂಬದ ಹರಕೆಯ ನೇಮೋತ್ಸವದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದಾರೆ.
ರಕ್ಷಿತ್ ಅಲೆಯೂರು ದೊಡ್ಡ ಮನೆ ಕುಟುಂಬಕ್ಕೆ ಸೇರಿದ್ದು, ಇಲ್ಲಿ ಹರಕೆಯ ನೇಮೋತ್ಸವ ನಡೆಯುತ್ತಿದೆ. ಮೂಲ ಮೈಸಂದಾಯ, ಸಾವಿರಾಳು ಜುಮಾದಿ, ಜೋಡು ಪಂಜುರ್ಲಿ ದೈವಗಳ ನೇಮೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ನಡೆದಿದೆ.
ದೈವದ ಯಾವುದೇ ಕಾರ್ಯಕ್ರಮಗಳನ್ನು ತಪ್ಪಿಸದ ನಟ ರಕ್ಷಿತ್ ಶೆಟ್ಟಿ, ಕುಟುಂಬ ಸಮೇತರಾಗಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. ನಡುರಾತ್ರಿ ನೇಮೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ. ದೈವದ ಭಂಡಾರ ಹೊರಡುವಾಗಲೂ ರಕ್ಷಿತ್ ಶೆಟ್ಟಿ, ತಂದೆ ತಾಯಿಯ ಜೊತೆ ಭಾಗವಹಿಸಿದ್ದರು. ಕುಟುಂಬದ ದೈವಕ್ಕೆ ವಿಶೇಷವಾಗಿ ನಡೆದುಕೊಳ್ಳುವ ನಟ, ಹೆಸರಿಗೆ ತಕ್ಕಂತೆ ಕುಟುಂಬ, ಪರಿಸರ, ಮನೆ ವಾತಾವರಣದಲ್ಲೂ ಸಿಂಪಲ್ಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ