/newsfirstlive-kannada/media/post_attachments/wp-content/uploads/2025/01/KL_RAHUL_PANT-1.jpg)
ನಾಳೆಯಿಂದಲೇ ಟೀಮ್​​​ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ 4-1 ಅಂತರದಲ್ಲಿ ಗೆದ್ದು ಬೀಗಿದ ಟೀಮ್​ ಇಂಡಿಯಾ ಒನ್​ ಡೇ ಸೀರೀಸ್​ನಲ್ಲೂ ಇಂಗ್ಲೆಂಡ್​ ತಂಡವನ್ನು ಬಗ್ಗುಬಡಿಯಲು ಸಜ್ಜಾಗಿದೆ. ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಮ್​ ಇಂಡಿಯಾದಲ್ಲಿ ರಿಷಬ್​​ ಪಂತ್​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಇವರಿಗೆ ಟೀಮ್​ ಇಂಡಿಯಾ ಪ್ಲೇಯಿಂಗ್​​ ಎಲೆವೆನ್​​ನಲ್ಲಿ ಚಾನ್ಸ್​​ ಸಿಗುತ್ತಾ? ಇಲ್ಲವಾ? ಅನ್ನೋ ಚರ್ಚೆ ಜೋರಾಗಿದೆ.
ಪಂತ್​​ ಬದಲಿಗೆ ರಾಹುಲ್​​ಗೆ ಅವಕಾಶ
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಂತ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್​ ಬ್ಯಾಟರ್​ ಆಗಿ ಆಯ್ಕೆ ಮಾಡಲಾಗಿದೆ. ಕೆ.ಎಲ್​ ರಾಹುಲ್​​ ವಿಕೆಟ್​ ಕೀಪರ್​ ಬ್ಯಾಟರ್​ ಆಗಿ ಆಯ್ಕೆ ಆಗಿರೋ ಕಾರಣ ಪಂತ್​​ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​​​ನಲ್ಲಿ ಆಡೋದು ಡೌಟ್​ ಆಗಿದೆ. ಹೀಗಾಗಿ ಪಂತ್​ ಅವರನ್ನು ಏಕೆ ಕಣಕ್ಕಿಳಿಸಬೇಕು ಅನ್ನೋದು ಹಲವು ಕಾರಣಗಳು ಹೀಗಿವೆ.
/newsfirstlive-kannada/media/post_attachments/wp-content/uploads/2023/06/RISHAB_PANT-1.jpg)
ಹೆಚ್ಚುವರಿ ಬ್ಯಾಟರ್​ ಆಗಿ ಪಂತ್​​
ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​​ನಲ್ಲಿ ರಿಷಬ್​ ಪಂತ್​ ಹೆಚ್ಚುವರಿ ಬ್ಯಾಟರ್​ ಆಗಿ ಕಾಣಿಸಿಕೊಳ್ಳಬೇಕು. ಸ್ಟಾರ್​ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 3ನೇ ವೇಗದ ಬೌಲರ್​ ಆಗಿ ಕಾಣಿಸಿಕೊಂಡರೆ ಇದಕ್ಕೆ ಅವಕಾಶ ಇದೆ.
ಬೌಲಿಂಗ್​​ ಮಾಡಲಿರೋ ಪಂತ್​​
ಭಾರತ ತಂಡದ ಆಟಗಾರರು ಕಳಪೆ ಫಾರ್ಮ್​​ನಲ್ಲಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾ, ಶುಭ್ಮನ್​​ ಗಿಲ್​​, ವಿರಾಟ್​ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಯಾವಾಗ ಬೇಕಾದ್ರೂ ಕೈ ಕೊಡಬಹುದು. ಹಾಗಾಗಿ ಪಂತ್​​ ತಂಡದಲ್ಲಿ ಹೆಚ್ಚುವರಿ ಬ್ಯಾಟರ್​ ಆಗಿದ್ರೆ, ಟೀಮ್​ ಇಂಡಿಯಾಗೆ ಆನೆಬಲ ಇದ್ದಂಗೆ. ಅಗತ್ಯ ಬಿದ್ದರೆ ಪಂತ್​​​ ಬೌಲಿಂಗ್​​ ಕೂಡ ಮಾಡಬಲ್ಲರು.
ಟಾಪ್ ಆರ್ಡರ್​ ಬ್ಯಾಟಿಂಗ್​​ ವೈಫಲ್ಯ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಭಾರತ ತಂಡದ ಅನೇಕ ಬ್ಯಾಟರ್ಸ್​​ ಕಳಪೆ ಫಾರ್ಮ್​ ಎದುರಿಸುತ್ತಿದ್ದಾರೆ. ಕೆಎಲ್ ರಾಹುಲ್ ಪ್ರದರ್ಶನ ಕೂಡ ಅಷ್ಟಕಷ್ಟೇ. ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟಿಂಗ್ ಕಳಪೆ ಆಗಿತ್ತು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಂತ್ ಹೆಚ್ಚುವರಿ ಬ್ಯಾಟರ್​ ಆಗಿ ಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us