/newsfirstlive-kannada/media/post_attachments/wp-content/uploads/2024/12/TEA.jpg)
ಬೆಂಗಳೂರು: ಚಳಿ ಮತ್ತು ಮಳೆ! ಬೆಂಗಳೂರಿಗರನ್ನ ಬಿಟ್ಟೂ ಬಿಡದೇ ಕಾಡ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಹುತೇಕ ಮಂದಿ ಕಾಫಿ, ಟೀ ಮೊರೆ ಹೋಗ್ತಾರೆ. ಸಣ್ಣ ಬಿಡುವು ಮಾಡ್ಕೊಂಡು ಬಿಸಿಬಿಸಿ ಚಹಾ, ಕಾಫಿ ಹೀರಿ ಕೆಲಸ ಕಾರ್ಯಕ್ಕೆ ಮುಂದಾಗ್ತಾರೆ. ಹೀಗೆ, ಚಹಾ, ಕಾಫಿ, ಬೂಸ್ಟ್ ಕುಡಿಯುತ್ತಿರೋ ಮಂದಿಗೆ ಆರೋಗ್ಯ ಇಲಾಖೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.
ಸಿಟಿಯಲ್ಲಿರುವ ಬಹುತೇಕ ಮಂದಿ ಹೋಟೆಲ್, ಟೀ ಸ್ಟಾಲ್, ಆಫೀಸ್ ಸೆರಿದಂತೆ ಹಲವು ಕಡೆ ಪೇಪರ್ ಕಪ್ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ನೀವು ಏನಾದರೂ ಯದ್ವಾ-ತದ್ವಾ ಕಾಫಿ, ಟೀ ಕುಡಿಯುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ. ಯಾಕೆಂದ್ರೆ ಆ ಪೇಪರ್ ಗ್ಲಾಸ್ ನಿಮ್ಮ ಪ್ರಾಣ ತೆಗೆದರೂ ಅಚ್ಚರಿ ಇಲ್ಲ.
ಇದನ್ನೂ ಓದಿ:ಪವಾಡ ಎಂಬಂತೆ ಕ್ಯಾನ್ಸರ್ ಗೆದ್ದ ಮಗಳು.. 1500 Km ದೂರದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ತಂದೆ
ಪ್ರಯೋಗಾಲದಲ್ಲಿ ಆಹಾರ ಇಲಾಖೆ ನಡೆಸಿದ ಟೆಸ್ಟ್ ಒಂದರಲ್ಲಿ ಇದು ದೃಢವಾಗಿದೆ. ಪರೀಕ್ಷೆ ವೇಳೆ ಕ್ಯಾನ್ಸರ್ ತರುವ ಅಂಶ ಪತ್ತೆಯಾಗಿದೆ. ಪೇಪರ್ ಗ್ಲಾಸ್ನಲ್ಲಿ ಶೆಕಡಾ 20ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗ್ತಿದೆ. ಇದರಿಂದ ಜನರಲ್ಲಿ ಕ್ಯಾನ್ಸರ್ ಹರಡುವ ಭೀತಿ ಹೆಚ್ಚಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಪ್ಲಾಸ್ಟಿಕ್ ಮಿಕ್ಸ್ ಇಲ್ಲದ ಕಪ್ ಬಳಸಲು ಸೂಚನೆ ನೀಡಿದೆ. ಯಾವುದೇ ಕಡೆ ಪ್ಲಾಸ್ಟಿಕ್ ಮಿಕ್ಸ್ ಇರೋ ಕಪ್ನಲ್ಲಿ ಟೀ, ಕಾಫಿ ಕೊಟ್ಟರೆ ಕುಡಿಯದೇ ಇರೋದು ಬೆಸ್ಟ್. ಇನ್ನು ಆರೋಗ್ಯ ಇಲಾಖೆ ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ ಬ್ಯಾನ್ ಮಾಡಲು ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:Air pollution: ಬೆಂಗಳೂರಲ್ಲಿ ಹೆಚ್ಚಾದ ಕಲುಷಿತ ಗಾಳಿ.. ಸಿಟಿಯ ಈ ಏರಿಯಾಗಳಲ್ಲಿ ಮಾಸ್ಕ್ ಧರಿಸಲೇಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ