ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ

author-image
AS Harshith
Updated On
ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ
Advertisment
  • ಬೆಳಗ್ಗಿನ ಜಾವ ಕುಸಿದ ಬೆಟ್ಟ.. ಸಾವಿರಾರು ಜನರು ಸಮಾಧಿ
  • ಭೂಕುಸಿತದಿಂದ ಹಳ್ಳಿ, ಮನೆ, ಹೊಲ, ಶಾಲೆ ಎಲ್ಲವೂ ನೆಲಸಮ
  • ಮುಂಗಾಲೋ ಪರ್ವತದ ಒಂದು ಭಾಗ ಶುಕ್ರವಾರ ಮುಂಜಾನೆ ಕುಸಿತ

ಪಪುವಾ ನ್ಯೂಗಿನಿ ಅಕ್ಷರಶಃ ಸ್ಮಶಾನ ಮೌನವಾಗಿದೆ. ಇದ್ದಕ್ಕಿದ್ದಂತೆಯೇ ಬೆಟ್ಟವೊಂದು ಭೂಕುಸಿದು ಎಲ್ಲರೂ ನೆಲಸಮವಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 2 ಸಾವಿರಕ್ಕೂ ಅಧಿಕ ಜನರು ನೆಲ ಸಮಾಧಿಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

publive-image

ಪಪುವಾ ನ್ಯೂಗಿನಿ ಹಳ್ಳಿಯೊಂದರ ಚಿತ್ರಣವೇ ಬದಲಾಗಿದೆ. ಬೆಟ್ಟವೊಂದರ ಕುಸಿತದಿಂದ ಹಳ್ಳಿ, ಮನೆ, ಹೊಲ, ಶಾಲೆ ಎಲ್ಲವೂ ನೆಲಸಮವಾಗಿದೆ. ಸದ್ಯ ಸಮಾಧಿಯಾದವರ ಮೃತದೇಹವನ್ನು ಹೊರತೆಗೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಅಲ್ಲಿ ಬೀಡುಬಿಟ್ಟು ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಕುಚಿಕು ಸ್ನೇಹಿತೆಗಾಗಿ ಹೈಡ್ರಾಮಾ.. 10 ಲಕ್ಷದ ಬಂಗಾರ ಕದ್ದಿದ್ದಾರೆಂದು ಕಥೆ ಕಟ್ಟಿದ ಪುಣ್ಯಾತಗಿತ್ತಿಯರು ಕೊನೆಗೂ ಸಿಕ್ಕಿಬಿದ್ರು!

publive-image

ಎಂಗಾ ಪ್ರಾಂತ್ಯದ ದೂರದ ಗುಡ್ಡಗಾಡಿನ ಮುಂಗಾಲೋ ಪರ್ವತದ ಒಂದು ಭಾಗ ಕುಸಿದಿದೆ. ಶುಕ್ರವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಆ ಭಾಗದಲ್ಲಿ ವಾಸಿಸುತ್ತಿದ್ದ ಬಹುತೇಕ ಜನರು ಸಮಾಧಿಯಾಗಿದ್ದಾರೆ. ಸದ್ಯ 200ಒ ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment