newsfirstkannada.com

ಕಾಲಲ್ಲಿ ಬೌಲಿಂಗ್​, ಕೈ ಇಲ್ಲದಿದ್ದರೂ ಬ್ಯಾಟಿಂಗ್! ಪ್ಯಾರಾ ಕ್ರಿಕೆಟ್ ತಂಡದ ನಾಯಕನ ಕತೆ ಎಲ್ಲರಿಗೂ ಸ್ಫೂರ್ತಿ

Share :

Published January 13, 2024 at 11:48am

Update January 13, 2024 at 11:49am

    ಸಾಧನೆ ಮಾಡಲು ಹೊರಟವರಿಗೆ ಈತ ಸ್ಫೂರ್ತಿ

    8 ವರ್ಷದವನಾಗಿದ್ದಾಗ ಕೈಗಳನ್ನ ಕಳೆದುಕೊಂಡರು

    ಈಗ ಈ ಕಾಶ್ಮೀರಿ ಪ್ಯಾರಾ ಕ್ರಿಕೆಟ್ ತಂಡದ ನಾಯಕ

ಸಾಧನೆಗೆ ಅಂಗವೈಕಲ್ಯತೆ ಅಡ್ಡಿಯಾಗಲ್ಲ ಎಂಬ ಮಾತನ್ನ ಜಮ್ಮು ಕಾಶ್ಮೀರ ಮೂಲದ ವಾಘಮಾ ಗ್ರಾಮದ ಅಮೀರ್ ಹುಸೈನ್ ನಿಜವಾಗಿಸಿದ್ದಾರೆ. ಎರಡೂ ಕೈಗಳು ಇಲ್ಲದಿದ್ದರೂ ಕಾಲಿನಿಂದ ಬೌಲಿಂಗ್​ ಹಾಗೂ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಸಹಜವಾಗಿಯೇ ಹುಟ್ಟಿದ್ದ ಅಮೀರ್, 8 ವರ್ಷದವನಾಗಿದ್ದಾಗ ಕೈಗಳನ್ನ ಕಳೆದುಕೊಂಡರು. ಆದರೆ, ಕ್ರಿಕೆಟ್​ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಗೆಳೆಯರೊಂದಿಗೆ ಕ್ರಿಕೆಟ್​ ಆಡಲು ಆರಂಭಿಸಿದರು. ಹೀಗೆ ಹಂತ ಹಂತವಾಗಿ ಕ್ರಿಕೆಟ್​ ಕೌಶಲವನ್ನು ಹೆಚ್ಚಿಸಿಕೊಂಡ ಅಮೀರ್, ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.

34 ವರ್ಷ ಅವರು ಭುಜ ಮತ್ತು ಕತ್ತಿನ ನಡುವೆ ಬ್ಯಾಟ್​ ಹಿಡಿದುಕೊಂಡು ಬ್ಯಾಟಿಂಗ್​ ಮಾಡುತ್ತಾರೆ. ಕಾಲುಗಳು ಮೂಲಕ ಚೆಂಡು ಎಸೆಯುತ್ತಾರೆ. ಇವರ ಆಟ ಎಲ್ಲರಿಗೂ ಸ್ಫೂರ್ತಿ ನೀಡಿದೆ.

ಸವಾಲುಗಳನ್ನು ಎದುರಿಸಿ ನಿಂತ ಅಮೀರ್​

ಅಮೀರ್​ ಈ ಬಗ್ಗೆ ಮಾತನಾಡಿದ್ದು, ‘ನಾನು ಅಪಘಾತದ ನಂತರ, ಭರವಸೆ ಕಳೆದುಕೊಳ್ಳಲಿಲ್ಲ ಮತ್ತು ಕಷ್ಟಪಟ್ಟು ಕೆಲಸ ಮಾಡಿದೆ. ನಾನೇ ಎಲ್ಲವನ್ನೂ ಮಾಡಬಲ್ಲೆ. ನಾನು ಯಾರ ಮೇಲೂ ಅವಲಂಬಿತನಲ್ಲ. ನನ್ನ ಅಪಘಾತದ ನಂತರ ಯಾರೂ ನನಗೆ ಸಹಾಯ ಮಾಡಲಿಲ್ಲ. ಸರ್ಕಾರ ಕೂಡ ನನಗೆ ಬೆಂಬಲ ನೀಡಲಿಲ್ಲ, ಆದರೆ ನನ್ನ ಕುಟುಂಬ ಯಾವಾಗಲೂ ನನ್ನೊಂದಿಗೆ ಇತ್ತು’ ಎಂದು ಹೇಳಿದ್ದಾರೆ

ನಂತರ ಮಾತನಾಡಿದ ಅಮೀರ್​, ‘ನನ್ನ ಆಟಕ್ಕಾಗಿ ನಾನು ಎಲ್ಲೆಡೆ ಗುರುತಿಸಿಕೊಳ್ಳುವುದರ ಜೊತೆಗೆ ಪ್ರಶಂಸೆ ಗಿಟ್ಟಿಸಿಕೊಂಡಿದ್ದೇನೆ. ನನ್ನ ಕಠಿಣ ಪರಿಶ್ರಮವು ದೇವರಿಂದ ಫಲ ನೀಡಿತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕಾಲುಗಳಿಂದ ಬೌಲಿಂಗ್ ಮಾಡುವುದು ನಿಜವಾಗಿಯೂ ಕಷ್ಟಕರ. ಆದರೆ ನಾನು ಎಲ್ಲಾ ಕೌಶಲ್ಯ ಮತ್ತು ತಂತ್ರಗಳನ್ನು ಕಲಿತಿದ್ದೇನೆ. ನಾನು ಪ್ರತಿ ಕೆಲಸವನ್ನು ಮಾಡುತ್ತೇನೆ ಯಾರನ್ನೂ ಅವಲಂಬಿಸಿಲ್ಲ,” ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಲಲ್ಲಿ ಬೌಲಿಂಗ್​, ಕೈ ಇಲ್ಲದಿದ್ದರೂ ಬ್ಯಾಟಿಂಗ್! ಪ್ಯಾರಾ ಕ್ರಿಕೆಟ್ ತಂಡದ ನಾಯಕನ ಕತೆ ಎಲ್ಲರಿಗೂ ಸ್ಫೂರ್ತಿ

https://newsfirstlive.com/wp-content/uploads/2024/01/Amir-Hussain-Lone.jpg

Load More