newsfirstkannada.com

ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ, ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ

Share :

Published January 26, 2024 at 11:08am

Update January 26, 2024 at 11:09am

    ದೇಶದಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ

    ಕರ್ತವ್ಯಪಥ್​​ನಲ್ಲಿ ಗಣರಾಜ್ಯೋತ್ಸವದ ಪರೇಡ್‌

    ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷರು ಭಾಗಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ಇದೀಗ ಕರ್ತವ್ಯಪಥ್​​ನಲ್ಲಿ ಗಣರಾಜ್ಯೋತ್ಸವದ ಪರೇಡ್‌ ನಡೆಯುತ್ತಿದೆ.

ವಿವಿಧ ರಾಜ್ಯಗಳ ವಿಶೇಷತೆ ಒಳಗೊಂಡ ಟ್ಯಾಬ್ಲೋಗಳ ಪ್ರದರ್ಶನ ನಡೆಯುತ್ತಿದೆ. ಫ್ರಾನ್ಸ್‌ನ 95 ಸದಸ್ಯರ ಮಾರ್ಚ್ ಸ್ಕ್ವಾಡ್ ಮತ್ತು 33 ಸದಸ್ಯರ ಬ್ಯಾಂಡ್ ಸ್ಕ್ವಾಡ್ ಸಹ ಪರೇಡ್‌ನಲ್ಲಿ ಭಾಗವಹಿಸಿವೆ. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಉಪಸ್ಥಿತರಿದ್ದಾರೆ.

ಈ ವರ್ಷ 50 ಸಾವಿರಕ್ಕೂ ಹೆಚ್ಚು ಮಂದಿ ಪರೇಡ್ ವೀಕ್ಷಿಸಲು ಕರ್ತವ್ಯ ಪಥಕ್ಕೆ ಬಂದಿದ್ದಾರೆ. ಟಿವಿ ಮತ್ತು ಇತರ ಮಾಧ್ಯಮಗಳ ಮೂಲಕ ಸಾವಿರಾರು ಜನರು ಲೈವ್ ಆಗಿ ವೀಕ್ಷಿಸುತ್ತಿದ್ದಾರೆ. ಗಣರಾಜ್ಯೋತ್ಸವ ಪ್ರಜಾ ಆಡಳಿತದ ಆಚರಣೆಯಾಗಿದೆ. ಭಾರತವು 26, ಜನವರಿ 1950 ರಂದು ಸಂವಿಧಾನವನ್ನು ಅಂಗೀಕರಿಸಿತು. ನಂತರ ಜನವರಿ 26ಅನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು.

ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ, ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ

https://newsfirstlive.com/wp-content/uploads/2024/01/FLAG.jpg

Load More