Advertisment

ದರ್ಶನ್​​ಗೆ ಬೆಳ್ಳಂಬೆಳಗ್ಗೆ ಬಳ್ಳಾರಿ ಜೈಲಿನ ದರ್ಶನ; ಜೈಲು ಸವಾರಿ ರೂಟ್ ಮ್ಯಾಪ್ ಹೇಗಿದೆ..?

author-image
Ganesh
Updated On
ದರ್ಶನ್​​ಗೆ ಬೆಳ್ಳಂಬೆಳಗ್ಗೆ ಬಳ್ಳಾರಿ ಜೈಲಿನ ದರ್ಶನ; ಜೈಲು ಸವಾರಿ ರೂಟ್ ಮ್ಯಾಪ್ ಹೇಗಿದೆ..?
Advertisment
  • ಬೆಂಗಳೂರಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಶಿಫ್ಟ್
  • 8-9 ಗಂಟೆಯೊಳಗೆ ಬಳ್ಳಾರಿ ಜೈಲಿಗೆ ತಲುಪಲಿರೋ ದರ್ಶನ್
  • ಮುಂಜಾಗ್ರತಾ ಕ್ರಮವಾಗಿ ಜೈಲು ಸುತ್ತಲು ಹೆಚ್ಚಿನ ಬಂದೋಬಸ್ತ್

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಚೇರ್ ಮೇಲೆ ಕುಳಿತು ಸಿಗರೇಟ್ ಸೇದುತ್ತಾ, ವಿಲ್ಸನ್ ಗಾರ್ಡನ್‌ ನಾಗ, ಕುಳ್ಳ ಸೀನ ಥರದ ನಟೋರಿಯಸ್ ಪಾತಕಿಗಳ ಜೊತೆಗೆ ಬಿಂದಾಸ್ ಆಗಿ ಮಾತುಕತೆ ಮಾಡುತ್ತಿದ್ದರು. ಇದು ಅವರು ಜೈಲಿನಲ್ಲಿ ಎಷ್ಟು ಆರಾಮಾಗಿ ಇದ್ದಾರೆ, ಎಷ್ಟೆಲ್ಲಾ ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಆಗಿದ್ದವು. ಇದಕ್ಕೆ ಬ್ರೇಕ್ ಹಾಕೋದಕ್ಕೆ ಅಂತಾನೆ ಬಂಧಿಖಾನೆ ಅಧಿಕಾರಿಗಳು ದರ್ಶನ್​ರನ್ನ ಬಳ್ಳಾರಿಗೆ ಶಿಫ್ಟ್ ಮಾಡುತ್ತಿದ್ದಾರೆ. ಬೆಳಗ್ಗೆ 4.30ಕ್ಕೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದೊಯ್ದಿದ್ದಾರೆ.

Advertisment

ಭದ್ರತಾ ದೃಷ್ಟಿಯಿಂದ ಬೆಳ್ಳಂಬೆಳಗ್ಗೆ ದರ್ಶನ್​ ಶಿಫ್ಟ್
ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ.. ಆದ್ರೆ ಭದ್ರತಾ ದೃಷ್ಟಿಯಿಂದ ದರ್ಶನ್​ರನ್ನು ರಾತ್ರೋ ರಾತ್ರಿ ಬಳ್ಳಾರಿಗೆ ಜೈಲಿನತ್ತ ಕರೆದೊಯ್ಯಲಾಗ್ತಿದೆ. ಜೈಲು ಸಿಬ್ಬಂದಿ ಬಂದೋಬಸ್ತ್​ನಲ್ಲಿ ಮುಂಜಾನೆ 4.30ಕ್ಕೆ ಕರೆದೊಯ್ದಿದ್ದಾರೆ.

publive-image

ರೂಟ್ ಮ್ಯಾಪ್!
ದರ್ಶನ್​ರನ್ನ ಕರ್ಕೊಂಡು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಟು ಹೊಸೂರು ಮುಖ್ಯರಸ್ತೆಗೆ ಬಳಿಕ ಹೊಸೂರು ಮುಖ್ಯ ರಸ್ತೆಯಿಂದ ನೈಸ್ ರಸ್ತೆಗೆ ಎಂಟ್ರಿಯಾಗಿ.. ನೈಸ್ ರಸ್ತೆ ಮೂಲಕ ತುಮಕೂರು ರಸ್ತೆ.. ನೆಲಮಂಗಲ ಮೂಲಕ ತುಮಕೂರು, ಶಿರಾ ತಲುಪಿ.. ಶಿರಾದಿಂದ ಹಿರಿಯೂರು.. ಬಳಿಕ ಚಳ್ಳಕೆರೆಗೆ ಎಂಟ್ರಿಯಾಗ್ತಾರೆ.. ಚಳ್ಳಕೆರೆ ಮಾರ್ಗವಾಗಿ ಹಾನಗಲ್ಲು ಹಲಕುಂದಿ ಮಾರ್ಗವಾಗಿ ಬಳ್ಳಾರಿ ಜೈಲಿಗೆ ನಟ ದರ್ಶನ್​ನನ್ನು ಸ್ಥಳಾಂತರ ಮಾಡಲಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ:Breaking: ಪರಪ್ಪನ ಅಗ್ರಹಾರ ಟು ಬಳ್ಳಾರಿ ಜೈಲು; ದರ್ಶನ್ ಕರೆದೊಯ್ದ ಪೊಲೀಸರು..!

Advertisment

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ.. ಭದ್ರತಾ ದೃಷ್ಟಿಯಿಂದ ದರ್ಶನ್ ಇದ್ದ ವಾಹನವನ್ನು ಡೈವರ್ಟ್ ಮಾಡಿದ್ದಾರೆ. ಪರಪ್ಪನ ಅಗ್ರಹಾರ-ಸಿಲ್ಕ್ ಬೋರ್ಡ್-ಮೇಖ್ರಿ ಸರ್ಕಲ್-ಹೆಬ್ಬಾಳ-ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ- ಬಾಗೇಪಲ್ಲಿ-ಪೆನಗೊಂಡ,ಅನಂತಪುರ- ಮಾರ್ಗವಾಗಿ ಬಳ್ಳಾರಿಗೆ ದರ್ಶನ್​ರನ್ನು ಕರೆದುಕೊಂಡು ಹೋಗುತ್ತಿರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment