/newsfirstlive-kannada/media/post_attachments/wp-content/uploads/2025/06/Shefali-Jariwala1.jpg)
ಬಾಲಿವುಡ್ಗೆ ಮತ್ತೊಂದು ಬರಸಿಡಿಲು ಬಡೆದಂತಾಗಿದೆ. ಬಿಗ್ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಬೆನ್ನಲ್ಲೇ ಸ್ಟಾರ್ ನಟಿ ಕಾರ್ಡಿಯಾಕ್ ಅರೆಸ್ಟ್ಗೆ ಬಲಿಯಾಗಿದ್ದಾರೆ. ಕಾಂಟಾ ಲಗಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!
‘ಕಾಂಟಾ ಲಗಾ’ ಅಂತ 2002ರಲ್ಲಿ ಮೈಬಳುಕಿಸಿದ್ದ ಈ ಬಳುಕೋ ಬಳ್ಳಿ ಪಡ್ಡೆ ಹುಡುಗರ ನಿದ್ದೆಗೆಡೆಸಿದ್ಲು. ಬಳಿಕ ಬೋರ್ಡ್ ಇರದ ಬಸ್ ಹತ್ತಿ ಕನ್ನಡಕ್ಕೆ ಬಂದಿದ್ದ ಈ ಪಂಕಜಾ ಇಂದು ಯಾರಿಗೂ ಹೇಳದೆಯೇ ಹೃದಯ ಬಡಿತ ನಿಲ್ಲಿಸಿಬಿಟ್ಟಿದ್ದಾಳೆ. ಕಾಂಟಾ ಲಗಾ, ಪಂಕಜಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ. 42ನೇ ವಯಸ್ಸಿನಲ್ಲೇ ಶೆಫಾಲಿ ಕಾರ್ಡಿಯಾಕ್ ಅರೆಸ್ಟ್ಗೆ ಕೊನೆಯುಸಿರೆಳೆದಿದ್ದಾರೆ.
ಆದರೆ ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಏತನ್ಮಧ್ಯೆ, ಪರಾಸ್ ಛಾಬ್ರಾ ಅವರ ಯೂಟ್ಯೂಬ್ ಚಾನೆಲ್ ಆಬ್ರಾ ಕಾ ಡಬ್ರಾದಲ್ಲಿ ಸಂದರ್ಶನದ ಹಳೆಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿ, ಶೆಫಾಲಿ ಅವರ ಜಾತಕವನ್ನು ಆಧರಿಸಿ ಮಾತಾಡಿದ್ದಾರೆ. ದಿಢೀರ್ ಸಾಯುತ್ತಾರೆ ಎಂದು ಹೇಳಿರೋ ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
View this post on Instagram
ಹೌದು, ಪರಾಸ್ ಛಾಬ್ರಾ ಅವರ ಹಳೆಯ ಪಾಡ್‌ಕಾಸ್ಟ್‌ನಲ್ಲಿ ಶೆಫಾಲಿಯವರ ಜಾತಕವನ್ನು ಉಲ್ಲೇಖಿಸಿ ಅವರ ಅಕಾಲಿಕ ಮರಣದ ಬಗ್ಗೆ ಭವಿಷ್ಯ ನುಡಿದಿದ್ದರು. ಪಾಡ್‌ಕಾಸ್ಟ್‌ನಲ್ಲಿ ಪರಾಸ್, ಚಂದ್ರ, ಬುಧ ಮತ್ತು ಕೇತು ನಿಮ್ಮ 8ನೇ ಮನೆಯಲ್ಲಿದ್ದಾರೆ . ಚಂದ್ರ ಮತ್ತು ಕೇತುಗಳ ಸಂಯೋಜನೆಯು ಅತ್ಯಂತ ಕೆಟ್ಟದು. 8ನೇ ಮನೆ ನಷ್ಟ , ಹಠಾತ್ ಸಾವು, ನಿಗೂಢತೆ, ಖ್ಯಾತಿಯ ನಷ್ಟವನ್ನು ಸೂಚಿಸುತ್ತದೆ. ಚಂದ್ರ ಮತ್ತು ಕೇತುವಿನಿಂದ ನಿಮಗೆ ನಷ್ಟ ಇದೆ. ಇದರ ಜೊತೆ ಬುಧ ಕೂಡ ಇದರಲ್ಲಿ ಕುಳಿತಿದ್ದಾನೆ. ಇದು ಆತಂಕ ಮತ್ತು ತೊಂದರೆಯನ್ನು ಸೂಚಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ