/newsfirstlive-kannada/media/post_attachments/wp-content/uploads/2024/05/heat-wave.jpg)
ಇದು ಮಾರ್ಚ್ ತಿಂಗಳು ಕೊನೆ ತಿಂಗಳು. ಪ್ರತಿ ವರ್ಷದಂತೆ ಈ ಬಾರಿ ಕೂಡ ಮಾರ್ಚ್ ತಿಂಗಳ ಕೊನೆಯಲ್ಲಿ ಬಿಸಲಿನ ತಾಪ ಹೆಚ್ಚಾಗಿದೆ. ಬಿಸಿಗಾಳಿ ಮತ್ತು ಬೇಸಿಗೆಗೆ ಜನ ತತ್ತರಿಸಿ ಹೋಗಿದ್ದು, ಇದು ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಗಾಗಿ ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ಮಕ್ಕಳ ಆರೈಕೆ ಬಗ್ಗೆ ಕಾಳಜಿ ಇರಲಿ.
ಇದನ್ನೂ ಓದಿ:ಈ ದೇಶದಲ್ಲಿ ಸಮೋಸಾ ತಿನ್ನೋದು ಕಾನೂನು ಬಾಹಿರ.. ಅಪ್ಪಿ ತಪ್ಪಿ ತಯಾರಿಸಿದರೆ, ಸೇವಿಸಿದರೆ ಶಿಕ್ಷೆ ಫಿಕ್ಸ್!
ಹೌದು, ಬೇಸಿಗೆಯಲ್ಲಿ ಮಕ್ಕಳ ಚರ್ಮದ ಮೇಲೆ ಸಣ್ಣ ದದ್ದು ಕಂಡುಬರುವುದು ಸಾಮಾನ್ಯ. ಈ ಸಂದರ್ಭಗಳಲ್ಲಿ ಸಾಕಷ್ಟು ಪೋಷಕರು ಹೆಚ್ಚಾಗಿ ಜಾಹೀರಾತುಗಳಲ್ಲಿ ತೋರಿಸಲಾಗುವ ಉತ್ಪನ್ನಗಳ ಮೊರೆ ಹೋಗ್ತಾರೆ. ಆ ಉತ್ಪನ್ನಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆಯೇ ವಿವಿಧ ರೀತಿಯ ಕ್ರೀಮ್ಗಳನ್ನು ಮಕ್ಕಳ ಚರ್ಮಕ್ಕೆ ಹಚ್ಚುವುದರಿಂದ ಹಾನಿಯಾಗಬಹುದು. ಹೀಗಾಗಿ ಉತ್ತಮ ಹಾಗೂ ಸುರಕ್ಷಿತೆಯ ಕ್ರೀಮ್ಗಳನ್ನ ಬಳಸಿದರೆ ಉತ್ತಮ. ಜೊತೆಗೆ ಮಗು ಇರುವ ಕೋಣೆಯ ತಾಪಮಾನ 24 ಡಿಗ್ರಿಗಳಿಂದ 28 ಡಿಗ್ರಿಗಳ ನಡುವೆ ಇರಿಸಲು ಪ್ರಯತ್ನಿಸಿ.
ಮಗುವನ್ನು ಬಿಸಿಯಿಂದ ರಕ್ಷಿಸಲು ಎಸಿ ಮತ್ತು ಪ್ಯಾನ್ಗಳನ್ನು ಬಳಸಬಹುದು, ಅದಲ್ಲದೆ ಕೂಲರ್ಗಳನ್ನು ಮನೆಯಲ್ಲಿ ಬಳಕೆ ಮಾಡಬಹುದು. ಆದರೆ ಯಾವುದೇ ಗಾಳಿ ನೇರವಾಗಿ ಮಗುವಿನ ಮುಖಕ್ಕೆ ಬರದಂತೆ ನೋಡಿಕೊಳ್ಳಬೇಕು. 6 ತಿಂಗಳಿಗಿಂತ ಮೇಲ್ಪಟ್ಟ ಮಗುವಿಗೆ ಅನೇಕ ಬಾರಿ ನೀರು ನೀಡುವುದು ಸೂಕ್ತ. ವೈದ್ಯರ ಪ್ರಕಾರ, ಮಗುವಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ನೀಡಬಹುದು. ಇದು ಮಗುವಿನ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಎಳನೀರು, ಮಜ್ಜಿಗೆ ಮತ್ತು ನಿಂಬೆ ರಸವನ್ನು ಕೂಡ ಸ್ವಲ್ಪ ಪ್ರಮಾಣದಲ್ಲಿ ನೀಡಬಹುದು. ಆದರೆ ಮಕ್ಕಳಿಗೆ ಯಾವುದೇ ಕಾರಣಕ್ಕೂ ತಂಪು ಪಾನೀಯಗಳು ನೀಡಬೇಡಿ.
ಉರಿ ಬಿಸಿಲಿನಿಂದ ಆರೋಗ್ಯ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು ಏನು?
1. ಯಾವಾಗಲೂ ಸಡಿಲವಾದ, ತೆಳು ಬಣ್ಣದ ಹತ್ತಿ ಬಟ್ಟೆ ಧರಿಸಬೇಕು
2. ಸಾಧ್ಯವಾಷ್ಟು ನೀರು ಕುಡಿದು ದೇಹವನ್ನು ತಣ್ಣಗಿಡಲು ಯತ್ನಿಸಬೇಕು
3. ದಿನಕ್ಕೆ ಮೂರು ಬಾರಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು
4. ಹಣ್ಣಿನ ರಸ, ಮಜ್ಜಿಗೆ, ಜ್ಯೂಸ್, ಲೀಟರ್ಗಟ್ಟಲೇ ನೀರು, ಪಾನಕ ಕುಡಿಯಬೇಕು
5. ಹೊರಗೆ ಹೋಗಿ ಮನೆ ಬಂದ ಕೂಡಲೇ ಟಿಶ್ಯೂ ಕರವಸ್ತ್ರದಿಂದ ಬೆವರು ಒರೆಸಬೇಕು
6. ನೀರು, ಮಜ್ಜಿಗೆ, ಎಳೆನೀರು ಜೊತೆಗೆ ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಬೇಕು
7. ಮಧ್ಯಾಹ್ನ ಹೆಚ್ಚು ಬಿಸಿಲು ಇರೋ ಕಾರಣ ಮನೆಯಿಂದ ಹೊರಗೆ ಹೋಗಲೇಬಾರದು
8. ಮನೆಯಿಂದ ಹೊರಗೆ ಹೋಗುವಾಗ ಶುದ್ಧ ಕುಡಿಯುವ ನೀರು ತೆಗೆದುಕೊಂಡು ಹೋಗಬೇಕು
9. ಚರ್ಮ ಕೆಂಪಾದ್ರೆ, ಬೆವರು ಕಡಿಮೆಯಾದ್ರೆ, ದೇಹದ ಉಷ್ಣತೆ ಜಾಸ್ತಿಯಾದ್ರೆ ಆಸ್ಪತ್ರೆಗೆ ಹೋಗಬೇಕು
10. ದೀರ್ಘವಾದ ತೀರ್ವ ಉಸಿರಾಟವಿದ್ದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕ ಮಾಡಲೇಬೇಕು
11. ಬೇಸಿಗೆಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಬೇಧಿ ಹೆಚ್ಚಳದ ಬಗ್ಗೆ ಎಚ್ಚರ ಇರಬೇಕು
12. ಕೈಗಳನ್ನು ಸಾಬೂನು ಬಳಸಿ 45 ಸೆಕೆಂಡ್ ತೊಳೆದ ನಂತರ ಆಹಾರ ಸೇವನೆ ಮಾಡಬೇಕು
13. ಸುರಕ್ಷಿತ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಅಡುಗೆ ತಿನ್ನಬೇಕು!
14. ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್ ಬಟ್ಟೆ ಧರಿಸಬಾರದು, ಸೋಡಾ ಇತ್ಯಾದಿ ಕುಡಿಯಬಾರದು
15. ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬಾರದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ