ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?

author-image
AS Harshith
Updated On
330ಕ್ಕೂ ಹೆಚ್ಚು ಸಾವು, ನೂರಾರು ಜನರು ಕಣ್ಮರೆ.. ಥರ್ಮಲ್​ ಸ್ಕ್ಯಾನರ್​ ಬಳಸಿ ಶೋಧ ನಡೆಸುತ್ತಿರೋ ಭಾರತೀಯ ಸೇನೆ
Advertisment
  • ಒಂದೊಂದು ನೋವಿನ ಕತೆ ಹೇಳುತ್ತಿದೆ ‘ವಯನಾಡು ದುರಂತ’
  • ಎಸ್ಟೇಟ್​​ನಲ್ಲಿ ದುಡಿದು ಮಗಳನ್ನು ವಿದೇಶಕ್ಕೆ ಕಳುಹಿಸಿಕೊಟ್ಟ ಪೋಷಕರು
  • ಈಗ ಪೋಷಕರೇ ಇಲ್ಲ.. ಎಲ್ಲರನ್ನು ಸರ್ವನಾಶ ಮಾಡಿದ ಭಯಾನಕ ಭೂಕುಸಿತ

ಎಂಥಾ ದುರ್ವಿಧಿ. ಮಗಳನ್ನು ಕಷ್ಟಪಟ್ಟು ಓದಿಸಿ ಕೊನೆಗೆ ಉದ್ಯೋಗಕ್ಕೆ ವಿದೇಶಕ್ಕೆ ಕಳುಹಿಸಿದ ತಂದೆ-ತಾಯಿ ಇಬ್ಬರು ವಯನಾಡಿದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ. ಮುಂಡಕ್ಕೈ ದುರಂತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಅತ್ತ ಯುಕೆಯಲ್ಲಿರುವ ಮಗಳು ತನ್ನವರಿಗಾಗಿ ಹುಡುಕಾಡುತ್ತಿದ್ದಾಳೆ. ಜೀವಿತ ಅವಧಿಯಲ್ಲಿ ಎಸ್ಟೇಟ್​ನಲ್ಲಿ ದುಡಿದು ಮಗಳನ್ನು ವಿದೇಶಕ್ಕೆ ಕಳುಹಿಸಿ, ಆದರೀಗ ಪೋಷಕರಿಲ್ಲದೆ ಮಗಳು ಕಂಗಾಲಾಗಿದ್ದಾಳೆ.

publive-image

ವಯನಾಡಿನ ಭೂಕುಸಿತದಲ್ಲಿ 290ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 200 ಜನರು ನಾಪತ್ತೆಯಾಗಿದ್ದಾರೆ. ಸದ್ಯ ಸ್ಥಳದಲ್ಲಿ ಶೋಧಕಾರ್ಯ ನಡೆಯುತ್ತಿದೆ. ಸಾಕಷ್ಟು ಕುಟುಂಬಗಳು ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದರಂತೆಯೇ ಯುಕೆಯಲ್ಲಿ ಉದ್ಯೋಗದಲ್ಲಿದ್ದ ಮಗಳನ್ನು ತನ್ನ ತಂದೆ-ತಾಯಿಗಾಗಿ ಕಣ್ಣೀರು ಹಾಕುತ್ತಿದ್ದಾಳೆ. ದೇವರಿಗೆ ಹಿಡಿಶಾಪ ಹಾಕುತ್ತಿದ್ದಾಳೆ.

ಇದನ್ನೂ ಓದಿ: ಪಡ್ಡೆ ಹುಡುಗರೇ ಹುಷಾರ್.. ಜಸ್ಟ್‌ ಕೈ ಹಿಡಿದು ‘I LOVE YOU’ ಅಂದಿದ್ದಕ್ಕೆ ಜೈಲು ಶಿಕ್ಷೆ; ಎಷ್ಟು ವರ್ಷ?

publive-image

ಮುಂಡಕ್ಕೈಯಲ್ಲಿ ಕುಟುಂಬವೊಂದು ಅಲ್ಲಿನ ಎಸ್ಟೇಟ್​​ನಲ್ಲಿ ದುಡಿದು, ಮಗಳನ್ನು ಚೆನ್ನಾಗಿ ಓದಿಸಿ, ಕೊನೆಗೆ ಉದ್ಯೋಗಕ್ಕಾಗಿ ಯುಕೆಗೆ ಕಳುಹಿಸುತ್ತಾರೆ. ಅಪ್ಪ-ಅಮ್ಮನ ಆಸೆಯಂತೆ ಮಗಳು ಒಳ್ಳೆಯ ಉದ್ಯೋಗವನ್ನು ಗಿಟ್ಟಿಸುತ್ತಾಳೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ.. ಮಕ್ಕಳನ್ನು ಆಟ ಆಡಲು ಬಿಟ್ಟು ಯಾಮಾರಿದ್ರೆ ಅಪಾಯ; ಈ ವಿಡಿಯೋ ನೋಡಿ!

publive-image

ಮಗಳ ವಿದೇಶ ಉದ್ಯೋಗದಿಂದ ಕುಟುಂಬ ಸಂತೋಷದಿಂದ ಜೀವನ ಕಳೆಯುತ್ತಿತ್ತು. ಅಷ್ಟೇ ಏಕೆ ಕಳೆದ ತಿಂಗಳು ತಂದೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಂದೆಗೆ ಯುಕೆಯಿಂದ ಒಂದೂವರೆ ಪವನ್ ಚಿನ್ನವನ್ನು ಗಿಫ್ಟ್​ ಕೂಡ ನೀಡಿದ್ದಳು. ಆದರೀಗ ಅವರೆಲ್ಲರೂ ಕಣ್ಣರೆಯಾಗಿದ್ದಾರೆ. ಮುಂಡಕ್ಕೈ ದುರಂತದಿಂದ ತಂದೆ-ತಾಯಿ, ಆಕೆಯ ಸಹೋದರ ಎಲ್ಲರೂ ಸಾವನ್ನಪ್ಪಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದಾಗ ಆಕೆಯ ನೋವು, ಬೇಸರ ಆಲಿಸಲು ಕುಟುಂಬವೇ ಇಲ್ಲದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment