newsfirstkannada.com

PHD ವಿದ್ಯಾರ್ಥಿಗೆ ಸರ್ಕಾರದಿಂದ ಅನ್ಯಾಯ; ಮಗಳ ಫೀಸ್​ಗಾಗಿ ಕಿಡ್ನಿ ಮಾರಲು ಮುಂದಾದ ಪೋಷಕರು

Share :

Published July 25, 2024 at 6:19am

    ‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನ ರದ್ದು

    ಮಗಳ ವಿದ್ಯಾಭ್ಯಾಸಕ್ಕಾಗಿ ಕಿಡ್ನಿದಾನಕ್ಕೆ ಮುಂದಾದ ಪೋಷಕರು

    ಆಫಿಸ್​ನಿಂದ ಆಫಿಸ್​ಗೆ ಸುತ್ತಿದ್ರು ಸಿಕ್ತಿಲ್ಲ ಈ ವಿದ್ಯಾರ್ಥಿಗೆ ನೆರವು

ಬೆಂಗಳೂರು: ಕಣ್ಣಿಗೆ ಕಾಣೋ ದೇವರು ಅಂದ್ರೆ ಅದು ಜನ್ಮ ಕೊಟ್ಟ ಅಪ್ಪ-ಅಮ್ಮ, ತಮ್ಮ ಮಕ್ಕಳಿಗಾಗಿ ಇಡೀ ಜೀವನವನ್ನೇ ಸವಿಸಿಬಿಡ್ತಾರೆ. ಆದ್ರೆ ಈ ಸ್ಟೋರಿಯಲ್ಲಿ ಸರ್ಕಾರದ ವಿರುದ್ಧ ಸಮರ ಸಾರಿರೋ ಪೋಷಕರು ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಕಿಡ್ನಿಯನ್ನೇ ಮಾರೋಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ನಡುರೋಡಲ್ಲಿ ಹರಿದ ನೆತ್ತರು.. ಆನೇಕಲ್ ಪುರಸಭೆ ಸದಸ್ಯ ಸ್ಕ್ರಾಪ್ ರವಿ ಬರ್ಬರ ಹತ್ಯೆ; ಕಾರಣವೇನು?

ನಮ್ಮ ಕಿಡ್ನಿ ಮಾರಾಟ ಮಾಡೋ ನಿರ್ಧಾರ ಮಾಡಿದ್ದೀವಿ

ಹೆಸರು ನೇಹಾ.. ಇವರು ವಿದೇಶದಲ್ಲಿ PHD ಮಾಡಿ ಡಾಕ್ಟರೇಟ್​ ಪಡೆಯೋ ಕನಸು ಕಂಡಿದ್ದಾಕೆ. ಕೆಲ ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ತನ್ನ ಹಕ್ಕಿಗಾಗಿ ಹೋರಾಡ್ತಿದ್ದಾರೆ. ಖುದ್ದು ಸಂಬಂಧಪಟ್ಟ ಮಿನಿಸ್ಟರ್​ನ ಭೇಟಿಯಾದ್ರೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಮಗಳ ಕನಸಿಗೆ ಸಾಥ್​ ಕೊಟ್ಟಿರೋ ಪೋಷಕರು ಕಿಡ್ನಿ ಮಾರೋದಕ್ಕೆ ಮುಂದಾಗಿದ್ದಾರೆ. ಸಮಾಜ ಎಷ್ಟೇ ಮುಂದುವರೆದಿದ್ರೂ ಈಗಲೂ ಹೆಣ್ಣು ಮಕ್ಕಳಿಗ್ಯಾಕೆ ಬೇಕು ವಿದ್ಯಾಬ್ಯಾಸ ಅನ್ನೋ ಮನಸ್ಥಿತಿಗಳ ಮಧ್ಯೆ. ತನ್ನ ಮಗಳ ಶಿಕ್ಷಣಕ್ಕಾಗಿ ಈ ಪೋಷಕರು ಜೀವವನ್ನೇ ಪಣಕ್ಕಿಡಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: ಗೋವಿಂದ, ಗೋವಿಂದ.. ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ, ಜೆಡಿಎಸ್‌ ಸದಸ್ಯರ ಹಂಗಾಮ; ಫೋಟೋಗಳಲ್ಲಿ ನೋಡಿ!

ಎದುರಾಗಿರೋ ಸಮಸ್ಯೆ ಏನು? 

‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನ ರದ್ದುಗೊಳಿಸಲಾಗಿದೆ. ಪ್ರಬುದ್ಧ ಯೋಜನೆ ಪರಿಶಿಷ್ಟ ಜಾತಿ ಹಾಗೂ ಪಂಗಡದ PHD ವಿದ್ಯಾರ್ಥಿಗಳಿಗಿರೋ ಸ್ಕೀಮ್​​. ಈ ಯೋಜನೆಯಡಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಹಾಯಧ‌‌ನ ನೀಡಲಾಗುತ್ತೆ. ಈ ಸ್ಕಾಲರ್​ ಶಿಪ್ ಅಡಿ ಎಷ್ಟು ವರ್ಷ ಓದುತ್ತಾರೋ ಅಷ್ಟು ವರ್ಷದ ಟ್ಯೂಷನ್ ಫೀಸ್, ಅಕಮಡೇಷನ್ ಫೀಸ್​, ಹೀಗೆ ಉಚಿತ ಬುಕ್ಸ್ ಕೂಡ ಈ ಪ್ರಬುದ್ಧ ಯೋಜನೆಯಡಿ ಸಿಗುತ್ತೆ. ಬಟ್ ಈ ಸಹಾಯಧನವನ್ನ ಸರ್ಕಾರ ದಿಢೀರ್​ ರದ್ದು ಮಾಡಿದೆ. ಇದರಿಂದ ವಿದೇಶದಲ್ಲಿ PHD ಮಾಡಲು ಮುಂದಾಗಿದ್ದವರಿಗೆ ಶಾಕ್ ಎದುರಾಗಿದೆ.

ನೇಹಾಗೆ ಈಗಾಗಲೇ ಟಾಪ್ ಯೂನಿವರ್ಸಿಟಿಯಲ್ಲಿ ಸೀಟ್​ ಸಿಕ್ಕಿದ್ದು ಸ್ಕಾಲರ್​ಶಿಪ್​ಗೆ ಅಪ್ಲೈ ಮಾಡಲು ಹೋದಾಗ ವಿಚಾರ ಗೊತ್ತಾಗಿದೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌.ಸಿ ಮಹದೇವಪ್ಪ ಯೋಜನೆ ಮರುಜಾರಿ ಮಾಡ್ತೀವೆಂದು ಭರವಸೆ ಕೊಟ್ಟಿದ್ದಾರಂತೆ. ಬಟ್ ಸ್ಕಾಲರ್ ಶಿಪ್ PHD ಮಾಡೋರಿಗೆ ಸಿಗುತ್ತಾ ಅನ್ನೋ ಗೊಂದಲವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHD ವಿದ್ಯಾರ್ಥಿಗೆ ಸರ್ಕಾರದಿಂದ ಅನ್ಯಾಯ; ಮಗಳ ಫೀಸ್​ಗಾಗಿ ಕಿಡ್ನಿ ಮಾರಲು ಮುಂದಾದ ಪೋಷಕರು

https://newsfirstlive.com/wp-content/uploads/2024/07/kgf-10.jpg

Load More