/newsfirstlive-kannada/media/post_attachments/wp-content/uploads/2023/06/FAT_BOY.jpg)
ಮಕ್ಕಳು ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಪೋಷಕರಿಗಂತೂ ಯಾವಾಗಲೂ ಮಕ್ಕಳದ್ದೇ ಚಿಂತೆ. ಮಗು ಏನಾದರೂ ಮಂಕಾಗಿ ಕುಳಿತು ಬಿಟ್ಟರೇ ಪೊಷಕರಿಗೆ ಯೋಚನೆ ಶುರು. ಮಗುವಿಗೆ ಜ್ವರ ಬಂದಿದಿಯೋ ಏನೋ ಡಾಕ್ಟರ್ ಬಳಿ ಹೋಗಿ ತೋರಿಸಬೇಕು. ಪದೇ ಪದೆ ಏಕೆ ಮಗು ಮಂಕಾಗಿರುತ್ತೆ ಹೀಗೆ ಹಲವಾರು ಯೋಚನೆಗಳು ಪೋಷಕರ ತಲೆಯಲ್ಲಿ ಇರುತ್ತವೆ.
ಎಲ್ಲಾ ಮಕ್ಕಳಂತೆ ನಿಮ್ಮ ಮಗು ಕೂಡ ಆರೋಗ್ಯಕರ ಆಹಾರ ಪದ್ದತಿ ಪಾಲಿಸಬೇಕು. ಈಗಿನ ಮಕ್ಕಳಂತೂ ತಿನ್ನಬೇಕಾಗಿದ್ದು ಬಿಟ್ಟು ಬೇರೆ ಎಲ್ಲವನ್ನೂ ತಿನ್ನುತ್ತಾರೆ. ಹೀಗಾಗಿ ನಿಮ್ಮ ಮಕ್ಕಳ ಆರೋಗ್ಯ ಹೇಗಿರಬೇಕು? ಹೆಲ್ತ್ ಹೇಗೆ ಸುಧಾರಿಸಬೇಕು? ಎಂದು ಕೆಲ ಅಂಶಗಳನ್ನು ಇಲ್ಲಿ ತಿಳಿದುಕೊಳ್ಳಿ.
ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೋಗುತ್ತಿರಬೇಕಾದ್ರೆ ಅಮ್ಮ ಒಳ್ಳೆಯ ತಿಂಡಿ ಮಾಡಿ ಟಿಫಿನ್ ಬಾಕ್ಸ್ನಲ್ಲಿಟ್ಟು ಕಳಿಸುತ್ತಾರೆ. ಆದ್ರೆ ಮಕ್ಕಳು ಏನು ಮಾಡ್ತಾರೆ. ಆ ಟೀಫನ್ ಬಾಕ್ಸ್ ಅನ್ನು ಓಫನ್ ಕೂಡ ಮಾಡದೇ ಹಾಗೇ ವಾಪಸ್ ಮನೆಗೆ ತಂದು ಬೀಡುತ್ತಾರೆ. ಹೋಗುವಾಗ ಅವರ ಕೈಯಲ್ಲಿ ಕೊಟ್ಟಿದ್ದ 10 ರೂಪಾಯಿಯೋ 20 ರೂಪಾಯಲ್ಲಿ ಕುರುಕುರೆ, ಚಿಪ್ಸ್ಗಳಂತಹ ತಿಂದು ಅದೇ ಆಹಾರವೆಂದು ಇದ್ದು ಬಿಡುತ್ತಾರೆ. ಇಲ್ಲಿಂದಲೇ ಮಕ್ಕಳ ಆರೋಗ್ಯ ಹದಗೆಡಲು ಪ್ರಾರಂಭವಾಗುವುದು.
ಇಂದು ಮಕ್ಕಳು ವಯಸ್ಸಿಗೂ ಮೀರಿ ದೇಹದ ತೂಕ ಬೆಳೆಸಿಕೊಂಡು ದಪ್ಪ ಆಗುತ್ತಿದ್ದಾರೆ. ಅಸಿಡಿಟಿ, ಗ್ಯಾಸ್ಟ್ರಿಕ್, ಅಲ್ಸರ್, ಆಹಾರ ಅಜೀರ್ಣದಂತ ಸಮಸ್ಯೆಗಳು ಮಕ್ಕಳಲ್ಲಿ ಹುಟ್ಟಿಕೊಳ್ಳುತ್ತಿವೆ. ಬೀದಿ ಬದಿ ಮಾರಾಟ ಮಾಡುವ ಬಜ್ಜಿ, ಸಮೋಸ, ಬೇಕರಿ ತಿನಿಸು, ಪಪ್ಸ್, ಪಾನಿಪುರಿ, ಗೋಬಿ, ನೂಡಲ್ಸ್ ಸೇರಿ ಇತರೆ ಆಹಾರಗಳೇ ಇಂದಿನ ಮಕ್ಕಳ ನಿತ್ಯದ ಭೋಜನವಾಗಿಟ್ಟಿವೆ. ಇಂತಹ ಆಹಾರ ಮಕ್ಕಳು ತಿಂದರೆ ಅವರ ಆರೋಗ್ಯದ ಮೇಲೆ ತುಂಬಾ ಅಡ್ಡ ಪರಿಣಾಮ ಬೀರುತ್ತವೆ. ಆಹಾರ ಪದ್ಧತಿ ಎನ್ನುವುದು ಮುಂದಿನ ಮಕ್ಕಳ ಜಿವನದ ಶಕ್ತಿಗಾಗಿ, ಆರೋಗ್ಯಕ್ಕಾಗಿ, ದೃಢ ಕಾಯಕ್ಕಾಗಿ, ಆಯಸ್ಸು ವೃದ್ಧಿಗಾಗಿ, ಆಹ್ಲಾದಕರ ಮನಸಿಗಾಗಿ ಸೇವಿಸುವುದು ಆಗಿದೆ.
ಮಕ್ಕಳು ಆರೋಗ್ಯಕ್ಕೆ ಏನ್ಮಾಡಬೇಕು?
- ಮಗುವಿಗೆ ನಿತ್ಯ ಒಂದು ಗ್ಲಾಸ್ ಹಾಲು ಕುಡಿಸಿರಿ.
- ನಿತ್ಯ ಒಂದು ಹಣ್ಣು ಅಥವಾ ಅದನ್ನು ಜ್ಯೂಸ್ ಮಾಡಿ ಕುಡಿಸಿರಿ. ಸಕ್ಕರೆ ಕಡಿಮೆ ಇರಲಿ.
- ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ತಿಂಡಿ, ಊಟ ನೀಡಿ. ಜೊತೆಗೆ ನೀರು ಕೂಡ ಕುಡಿಸುತ್ತಿರಬೇಕು.
- ಮೊಳಕೆ ಕಟ್ಟಿದ ಕಾಳುಗಳನ್ನು ಮಕ್ಕಳಿಗೆ ನೀಡುವುದರಿಂದ ಉಪಯೋಗ ಇದೆ. ಇವುಗಳಲ್ಲಿ ವಿಟಮಿನ್ಸ್, ಪೋಲೇಟ್ಗಳು ಹೇರಳವಾಗಿ ಸಿಗುವುದರ ಜತೆಗೆ ಕಬ್ಬಿಣಾಂಶ ಸೇರಿ ಹಲವು ಉಪಯುಕ್ತ ಗುಣಗಳು ಇರುತ್ತವೆ
- ಖನಿಜಾಂಶಗಳು ಇವೆ. ಇವೆಲ್ಲ ಆರೋಗ್ಯ ರಕ್ಷಣೆ ಮಾಡುತ್ತವೆ. ಕ್ಯಾನ್ಸರ್‌ನಂತ ಕಾಯಿಲೆಯಿಂದ ಕಾಪಾಡುತ್ತವೆ.
- ಮಕ್ಕಳಿಗೆ ಹಾಲು, ಮೊಸರು, ಮಜ್ಜಿಗೆಯನ್ನು ಒಟ್ಟಿಗೆ ತಿನ್ನಿಸಿದರೆ ಅವರ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಇದರಲ್ಲಿ ಯಾವುದಾದ್ರೂ ಒಂದನ್ನು ಹಗಲಿನಲ್ಲಿ ತಿನ್ನಿಸಬೇಕು.
- ರಾತ್ರಿ ಸಮಯದಲ್ಲಿ ಹೈನು ಆಹಾರ ನೀಡಬೇಕಾದ್ರೆ ಮಗುವಿನ ಆರೋಗ್ಯ ಗಮನಿಸಿ ಕೊಡುವುದು ಉತ್ತಮ.
- ಅಂಗಡಿ ತಿಂಡಿಯನ್ನು ನೋಡಿದ್ರೆ ಕೆಲವು ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಇದರಿಂದ ಅವರು ಅಂಗಡಿ ತಿಂಡಿಯನ್ನೇ ಹೆಚ್ಚಾಗಿ ಇಷ್ಟ ಪಡುತ್ತಾರೆ. ಅದಕ್ಕಾಗಿ ಪೋಷಕರು ಮನೆಯಲ್ಲಿ ಗೋದಿ, ಜೋಳ, ರಾಗಿ, ಅಕ್ಕಿಯಿಂದ ಮಾಡಿದ ಆಹಾರ ನೀಡಬೇಕು. ಮನೆ ಊಟಕ್ಕೆ ಮಕ್ಕಳನ್ನು ಅಭ್ಯಾಸ ಮಾಡಿಸಬೇಕು.
ತರಕಾರಿಯಿಂದ ಮಾಡಿದ ಕೆಲವು ಆಹಾರವನ್ನು ತಿನ್ನಲು ಮಕ್ಕಳು ಆದಷ್ಟು ಮಟ್ಟಿಗೆ ಹಿಂದೇಟು ಹಾಕುತ್ತಾರೆ. ಆಗ ಅವರಿಗೆ ಒಳ್ಳೆಯ ಮಾತುಗಳನ್ನು ಹೇಳಿ ತಿನ್ನಿಸಬೇಕು. ತರಕಾರಿಗಳಲ್ಲಿ ನೀರಿನ ಪ್ರಮಾಣ, ನಾರಿನ ಪ್ರಮಾಣ ಸೇರಿದಂತೆ ಹಲವಾರು ಖನಿಜಾಂಶ, ಕಬ್ಬಿಣಾಂಶಗಳು ಇರುವುದರಿಂದ ಮಕ್ಕಳಿಗೆ ಹೆಚ್ಚು ಹೆಚ್ಚು ಹೆಲ್ತ್ ಅನ್ನು ಸುಧಾರಿಸುತ್ತವೆ. ಅಜೀರ್ಣಾದಂತ ಸಮಸ್ಯೆ ಅವರಲ್ಲಿ ಕಾಡುವುದಿಲ್ಲ.
ಇದನ್ನೂ ಓದಿ:ವೈರ್ಲೆಸ್ ಚಾರ್ಜಿಂಗ್ ರಸ್ತೆಯನ್ನೇ ನಿರ್ಮಿಸಿದ ದೇಶ; EV ವಾಹನ ಸವಾರರು ನೋಡಲೇಬೇಕಾದ ಸ್ಟೋರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ