/newsfirstlive-kannada/media/post_attachments/wp-content/uploads/2024/09/SCHOOL-2.jpg)
ಬೆಂಗಳೂರು: ರಾಜ್ಯ ರಾಜಧಾನಿ ಮಕ್ಕಳಿಗಾಗಿ ಇನ್ಮುಂದೆ ಸ್ಪೆಷಲ್ ಕ್ಯಾಬ್ ಓಡಾಡುತ್ತೆ. ಸ್ಕೂಲ್, ಟೂಷನ್, ಡ್ಯಾನ್ಸ್ ಕ್ಲಾಸ್ ಎಲ್ಲಿಗಾದ್ರೂ ಪಿಕ್ ಅಪ್ ಆ್ಯಂಡ್ ಡ್ರಾಪ್ ಮಾಡುತ್ತೆ. ಅಷ್ಟೇ ಅಲ್ಲ ನಿಮ್ಮ ಮಕ್ಕಳನ್ನ ಸೇಫ್ ಆಗಿ ಕರ್ಕೊಂಡು ಹೋಗಿ ಬರೋದನ್ನ ನೀವು ಲೈವ್ ಆಗಿ ಮಾನಿಟರ್ ಸಹ ಮಾಡಬಹುದು.
ಇನ್ನು, ಬೆಂಗಳೂರಿನ ಬ್ಯುಸಿ ಲೈಫ್‌ನಲ್ಲಿ ಮಕ್ಕಳನ್ನ ಶಾಲೆಗೆ ಕಳಿಸೋದು, ಶಾಲೆಯಿಂದ ಕರೆದುಕೊಂಡು ಬರೋದು ಪೋಷಕರಿಗೊಂದು ದೊಡ್ಡ ಟೆನ್ಷನ್. ಟೂಷನ್, ಡ್ಯಾನ್ಸ್ ಕ್ಲಾಸ್, ಸ್ಪೋರ್ಟ್ಸ್ ಟ್ರೈನಿಂಗ್ ಅಂತ ಏನಾದ್ರು ಇದ್ರೆ ಅವ್ರನ್ನ ಡ್ರಾಪ್ ಮಾಡಿ ಮತ್ತೆ ಪಿಕಪ್ ಮಾಡೋದಂತು ಇನ್ನೂ ಕಷ್ಟ. ಅಪಘಾತದಂತ ಘಟನೆಗಳಿಂದ ಪೋಷಕರಿಗೂ ಚಿಂತೆ ಜಾಸ್ತಿಯಾಗಿದೆ. ಪೋಷಕರ ಚಿಂತೆ ದೂರ ಮಾಡೋಕೆ ಮೆಟ್ರೋ ರೈಡ್ ಸಂಸ್ಥೆ ಮಕ್ಕಳಿಗಾಗಿ ಸ್ಪೆಷಲ್ ಕ್ಯಾಬ್ ಲಾಂಚ್ ಮಾಡ್ತಿದೆ.
ಮೆಟ್ರೋ ರೈಡ್ ಕಂಪನಿ ಮಕ್ಕಳಿಗಾಗಿ ವಿಶೇಷ ಕ್ಯಾಬ್‌ಗಳನ್ನ ಪರಿಚಯ ಮಾಡ್ತಿದೆ. ಈಗಾಗಲೇ ಹೈದರಾಬಾದ್‌ನಲ್ಲಿ ಮೆಟ್ರೋ ರೈಡ್ ಕಿಡ್ಸ್ ಕ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲೀಗ ಬೆಂಗಳೂರಿನಲ್ಲೂ ಪರಿಚಯ ಮಾಡೋಕೆ ಕಂಪನಿ ಮುಂದಾಗಿದೆ.
ಮಕ್ಕಳಿಗಾಗಿ ಮೆಟ್ರೋ ಕ್ಯಾಬ್ ರೆಡಿ
5 ರಿಂದ 16 ವರ್ಷದ ವಿದ್ಯಾರ್ಥಿಗಳಿಗಾಗಿ ಈ ಕ್ಯಾಬ್ ಸೇವೆ ಇರಲಿದೆ. ಮೂರಕ್ಕಿಂತ ಹೆಚ್ಚು ಮಕ್ಕಳನ್ನ ಕ್ಯಾಬ್‌ನಲ್ಲಿ ಕೂರಿಸುವುದಿಲ್ಲ. ಮಕ್ಕಳು ಕ್ಯಾಬ್ ಹತ್ತಿದಾಗ ಮತ್ತು ಇಳಿದಾಗ ಪೋಷಕರಿಗೆ ಮೆಸೇಜ್ ಹೋಗುತ್ತು. ಅದಲ್ಲದೇ ಮೆಟ್ರೋ ರೈಡ್ ಕಿಡ್ಸ್ ಆ್ಯಪ್ ಮೂಲಕ ಜಿಪಿಎಸ್ ಟ್ರ್ಯಾಕ್ ಮಾಡಬಹುದು. ಕ್ಯಾಬ್ ಒಳಗೆ ಸಿಸಿಟಿವಿ ಕ್ಯಾಮೆರಾ ಇರಲಿದ್ದು ಜೊತೆ ಲೈಪ್ ಅಪ್ಡೇಟ್ ಪಡೆಯಬಹುದು.
ಸದ್ಯ ಹೈದರಾಬಾದ್‌ನಲ್ಲಿ ಪೂರ್ವ ತಯಾರಿ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ಮೆಟ್ರೋ ರೈಡ್ ಕಿಡ್ಸ್ ಕ್ಯಾಬ್‌ಗಳು ಬೆಂಗಳೂರಿನ ರಸ್ತೆಗಿಳಿಯಲಿದೆ. ಬಾಡಿಗೆ ಎಷ್ಟಿರುತ್ತೆ ಅಥವಾ ಸ್ಪೆಷಲ್ ಆಫರ್ ಏನಾದರೂ ಇರುತ್ತಾ ಅನ್ನೋದಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಅದೆಷ್ಟರ ಮಟ್ಟಿಗೆ ಇದು ವರ್ಕೌಟ್ ಆಗುತ್ತೆ ನೋಡ್ಬೇಕಿದೆ.
ಇದನ್ನೂ ಓದಿ:ನ್ಯೂ ಇಯರ್ ಸೆಲೆಬ್ರೇಷನ್ ಮಾಡೋರಿಗೆ ಸರ್ಕಾರ ಬಿಗ್ ಶಾಕ್; ಈ ರೂಲ್ಸ್ ಫಾಲೋ ಮಾಡಲೇಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ