newsfirstkannada.com

ಒಂದು ದಿನದ ಶಿಶುವನ್ನು ರಸ್ತೆಯಲ್ಲೇ ಬಿಟ್ಟೋದ ಕ್ರೂರಿಗಳು.. ಅಳುವ ಕಂದನ ಬಳಿ ಸುತ್ತುವರಿದ ನಾಯಿ! ಮುಂದೇನಾಯ್ತು?

Share :

Published January 26, 2024 at 8:49am

Update January 26, 2024 at 8:52am

    ಬೆಂಗಳೂರಲ್ಲೊಂದು ಬೆಳಕಿಗೆ ಬಂದ ವಿಚಿತ್ರ ಘಟನೆ

    ಮಗುವನ್ನು ರಸ್ತೆಯಲ್ಲೇ ಬಿಸಾಕಿ ಹೋದ ಪಾಪಿ ತಂದೆ-ತಾಯಿ

    ಮಗುವಿನ ಬಳಿ ಸುತ್ತುವರಿದ ಬೀದಿ ಶ್ವಾನ.. ಮುಂದೇನಾಯ್ತು?

ಬೆಂಗಳೂರು: ಹೆಣ್ಣು ಮನೆಯ ಕಣ್ಣು. ಆದರೆ ಇಲ್ಲೊಬ್ಬ ಪೋಷಕರು ಹುಟ್ಟಿದ ಒಂದು ದಿನದ ಮಗುವನ್ನು ರಸ್ತೆಯಲ್ಲಿ ಬಿಸಾಡಿ ಹೋದ ನೀಚ ಘಟನೆ ಇಂದಿರಾಗಾಂಧಿ ಆಸ್ಪತ್ರೆ ಬಳಿ ಬೆಳಕಿಗೆ ಬಂದಿದೆ. ಹೆಣ್ಣು ಮಗು ಎಂದು ಕಟುಕ ತಂದೆ ತಾಯಿ ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಮೂರು ದಿನದ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಗುವಿನ ಸುತ್ತಾ ನಾಯಿ ಸುತ್ತುವರಿದಿರೋದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರಿಂದ ಮಗುವಿನ ರಕ್ಷಣೆ ಮಾಡಿದ್ದಾರೆ.

ಘಟನೆ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ದಿನದ ಶಿಶುವನ್ನು ರಸ್ತೆಯಲ್ಲೇ ಬಿಟ್ಟೋದ ಕ್ರೂರಿಗಳು.. ಅಳುವ ಕಂದನ ಬಳಿ ಸುತ್ತುವರಿದ ನಾಯಿ! ಮುಂದೇನಾಯ್ತು?

https://newsfirstlive.com/wp-content/uploads/2023/09/NewBornBaby.jpg

Load More