Paris 2024: ಪರಂಪರೆ ಮುರಿಯಲು ಸಜ್ಜಾದ ಪ್ಯಾರಿಸ್.. ಈ ಬಾರಿಯ ಒಲಿಂಪಿಕ್ಸ್ ಉದ್ಘಾಟನೆ ಹೇಗಿದೆ ಗೊತ್ತಾ?

author-image
Gopal Kulkarni
Updated On
Paris 2024: ಪರಂಪರೆ ಮುರಿಯಲು ಸಜ್ಜಾದ ಪ್ಯಾರಿಸ್.. ಈ ಬಾರಿಯ ಒಲಿಂಪಿಕ್ಸ್ ಉದ್ಘಾಟನೆ ಹೇಗಿದೆ ಗೊತ್ತಾ?
Advertisment
  • ಒಲಿಂಪಿಕ್ಸ್ ಉದ್ಘಾಟನಾ​ ಮೆರವಣಿಗೆಯ​ ಪರಂಪರೆಯಲ್ಲಿ ಬದಲಾವಣೆ
  • ನೂತನ ರೀತಿಯ ಉದ್ಘಾಟನಾ ಸಮಾರಂಭಕ್ಕೆ ಸಜ್ಜಾದ ಪ್ಯಾರಿಸ್ ನದಿ
  • ಈ ಬಾರಿ ಟ್ರ್ಯಾಕ್​ಗಳಲ್ಲಿ ನಡೆಯಲ್ಲ ಕ್ರೀಡಾಳುಗಳು ಭರ್ಜರಿ ಪರೇಡ್!

ಪ್ಯಾರಿಸ್: ಇಡೀ ವಿಶ್ವವೇ ಎದುರು ನೋಡುತ್ತಿರುವ ಒಲಿಂಪಿಕ್ಸ್ ಹಬ್ಬಕ್ಕೆ ಇನ್ನು ಕೇವಲ ಒಂದೇ ಒಂದು ದಿನ ಬಾಕಿಯಿದೆ. ಕ್ರೀಡಾಕೂಟವನ್ನು ಕಣ್ತುಂಬಿಕೊಳ್ಳಲು ಪ್ಯಾರಿಸ್ ಅಂಗಳಕ್ಕೆ ಜನಸಾಗರವೇ ಹರಿದು ಬರಲಿದೆ. ಒಲಿಂಪಿಕ್ಸ್ ಅಂದ್ರೆ ಪ್ರತಿ ವರ್ಷವೂ ಯಾವ ದೇಶದಲ್ಲಿ ಆಯೋಜಿಸಲಾಗುತ್ತದೆಯೋ ಆ ದೇಶ ಈ ಹಿಂದಿನಿಂದ ನಡೆದು ಬಂದ ಪರಂಪರೆಯನ್ನು ಪಾಲಿಸುತ್ತಲೇ ಬಂದಿದೆ. ಉದ್ಘಾಟನಾ ಸಮಾರಂಭದಿಂದ ಹಿಡಿದು, ಕ್ರೀಡಾಕೂಟದ ಮುಕ್ತಾಯ ಸಮಾರಂಭದವರೆಗೂ ಒಂದು ಪದ್ಧತಿಯನ್ನು ಜಾರಿಯಲ್ಲಿಟ್ಟುಕೊಂಡೇ ಬಂದಿದೆ. ಆದ್ರೆ ಈ ಬಾರಿ ಪ್ಯಾರಿಸ್​ನಲ್ಲಿ ಒಂದು ಪರಂಪರೆ ಬದಲಾಗಿದೆ. ಇದೇ ಮೊದಲ ಬಾರಿಗೆ ಉದ್ಘಾಟನೆಯ ಸಮಾರಂಭ ಬೇರೆ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಹಾಗಿದ್ರೆ ಈ ಬಾರಿ ಉದ್ಘಾಟನಾ ಸಮಾರಂಭದಲ್ಲಿ ಬದಲಾಗಲಿರುವ ಆ ಪರಂಪರೆಯೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 60 ಲಕ್ಷ ಇಲಿಗಳ ಕಾಟ.. ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

publive-image

ಕ್ರೀಡಾಂಗಣದಲ್ಲಿ ನಡೆಯೋದಿಲ್ಲ ಉದ್ಘಾಟನಾ ಸಮರಾಂಭ
ಪ್ಯಾರಿಸ್​ನಲ್ಲಿ ನಡೆಯಲಿರುವ ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಹೊಸವಾಕ್ಯ ಬರೆಯಲು ಫ್ರಾನ್ಸ್​ನ ಪ್ರೇಮಿಗಳ ನಗರಿ ಸಿದ್ಧತೆ ನಡೆಸಿದೆ. ಇತಿಹಾಸದಲ್ಲಿ ಮೊದಲ ಬಾರಿ ಕ್ರೀಡಾಂಗಣದ ಆಚೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಾಂಭಕ್ಕೆ ಸಾಕ್ಷಿಯಾಗಲಿದೆ ಪ್ಯಾರಿಸ್. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿ ಪ್ಯಾರಿಸ್​ನಲ್ಲಿ ಕ್ರೀಡಾಂಗಣದಾಚೆ ಉದ್ಘಾಟನೆ ಸಮಾರಂಭ ನಡೆಯಲಿದೆ. ಕ್ರೀಡಾಂಗಣದಿಂದ ಫ್ರಾನ್ಸ್ ರಾಜಧಾನಿಯ ಐಕಾನಿಕ್ ಥಿಯೇಟರ್​ನಲ್ಲಿ ಈ ಬಾರಿ ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಪ್ರಿಯರಿಗೆ ಗಣ್ಯರಿಗೆ ಅವಕಾಶ ಮಾಡಲಾಗಿದೆ. ಪ್ರತಿ ಬಾರಿ ಒಲಿಂಪಿಕ್ಸ್​ನಲ್ಲಿ ನಡೆಯುತ್ತಿದ್ದ ಕ್ರೀಡಾಂಗಣದ ಟ್ರ್ಯಾಕ್ ಮೇಲೆ ನಡೆಯುತ್ತಿದ್ದ ತಂಡಗಳ ಮೆರವಣಿಗೆಯಲ್ಲಿಯೂ ಕೂಡ ಬದಲಾವಣೆಯಾಗಲಿದೆ. ಈ ಬಾರಿ ಪ್ಯಾರಿಸ್​ನ ಸೈನ್ ನದಿಯಲ್ಲಿ ಬೋಟ್​ಗಳಲ್ಲಿ ಕ್ರೀಡಾಳುಗಳು ಉದ್ಘಾಟನೆಯ ಪರೇಡ್ ನಡೆಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಲಿದ್ದಾರೆ. ಅತಿಥಿಗಳು ಗಣ್ಯರಿಗೆ ಈ ಅದ್ದೂರಿ ಮೆರವಣಿಗೆಯನ್ನು ನೋಡಲು ಫ್ರಾನ್ಸ್ ರಾಜಧಾನಿಯ ಹೃದಯ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.

publive-image

ಇದನ್ನೂ ಓದಿ: ರಂಭದಲ್ಲೇ ಗಂಭೀರ್​ ಬಿಗಿ ಹಿಡಿತ.. ಪಾಂಡ್ಯ, ಪಂತ್​​, ಸಂಜುಗೆ ಪ್ರಾಕ್ಟಿಸ್​​ ಸೆಷನ್​ನಲ್ಲಿ ಕ್ಲಾಸ್..!

ಒಟ್ಟು 100 ಬೋಟ್​ 10,500 ಕ್ರೀಡಾಳುಗಳಿಂದ ಒಲಿಂಪಿಕ್ಸ್ ಮೆರವಣಿಗೆ

ಪ್ರತಿ ಬಾರಿ ಒಲಿಂಪಿಕ್ಸ್ ಉದ್ಘಾಟನೆಯ ವೇಳೆ ಆಯಾ ದೇಶದ ಕ್ರೀಡಾಳುಗಳು ತಮ್ಮ ದೇಶದ ರಾಷ್ಟ್ರಧ್ವಜವನ್ನು ಹಿಡಿದು ಉದ್ಘಾಟನೆಗೆ ನೇಮಿಸಲಾಗಿದ್ದ ಕ್ರೀಡಾಂಗಣದಲ್ಲಿ ಮೆರವಣಿಗೆ ಹೊರಟು ಬರುತ್ತಿದ್ದಿದ್ದು ಪರಂಪರೆಯ ಒಂದು ಭಾಗವಾಗಿ ನಮಗೆ ಕಾಣಸಿಗುತ್ತಿತ್ತು. ಆದ್ರೆ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಇದು ಬದಲಾವಣೆ ಆಗುತ್ತಿದೆ. ಈಗಾಗಲೇ ಹೇಳಿದಂತೆ ಸೈನ್​ ನದಿಯಲ್ಲಿ ನಡೆಯಲಿರುವ ಉದ್ಘಾಟನೆಗೆ ಈಗಾಗಲೇ ನೂರು ಬೋಟ್​​ಗಳು ಸಜ್ಜಾಗಿವೆ. ಒಟ್ಟು 10,500 ಕ್ರೀಡಾಳುಗಳು ಬೋಟ್​ನಲ್ಲಿ ಕುಳಿತು, ತಮ್ಮ ದೇಶದ ರಾಷ್ಟ್ರಧ್ವಜವನ್ನು ಹಿಡಿದು ಸೈನ ನದಿಯ ತೀರದಲ್ಲಿ ಮೆರವಣಿಗೆಗೆ ಹೊರಡಲು ವೇದಿಕೆಯೊಂದು ಸಿದ್ಧವಾಗಿದೆ. ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಲಿರುವ ಪ್ರತಿಯೊಬ್ಬ ಕ್ರೀಡಾಳು ಅಂದು ತಮ್ಮ ಜೀವನದ ವಿಶೇಷ ಸವಾರಿಯೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಪರೇಡ್​ ದೃಶ್ಯದ ಸೆರೆಗಾಗಿ ಮಾಡಬೇಕಾಗಿರುವ ಕ್ಯಾಮೆರಾ ವ್ಯವಸ್ಥೆಗಳನ್ನು ಅವುಗಳನ್ನು ಇಡಬೇಕಾದ ಜಾಗವನ್ನು ಕೂಡ ಆಯೋಜಕರು ನಿರ್ಧರಿಸಿದ್ದಾರೆ. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೇರೆಯದ್ದೇ ರೀತಿಯ ಉದ್ಘಾಟನಾ ಸಮಾರಂಭಕ್ಕೆ ಇಡೀ ಜಗತ್ತು ಮೊದಲ ಬಾರಿ ಸಾಕ್ಷಿಯಾಗಲಿದೆ.

ಉದ್ಘಾಟನೆ ಯಾವಾಗ? 
ಭಾರತೀಯ ಕಾಲಮಾನದ ಪ್ರಕಾರ ಜುಲೈ 26 ರಾತ್ರಿ 11ಕ್ಕೆ ಪ್ಯಾರಿಸ್‌ ನಗರದ ಸೈನ್ ನದಿಯಲ್ಲಿ 2024ರ ಒಲಿಂಪಿಕ್ಸ್‌ನ ಉದ್ಘಾಟನೆ ನೆರವೇರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment