/newsfirstlive-kannada/media/post_attachments/wp-content/uploads/2024/08/Justin-Best.jpg)
ಅಮೆರಿಕಾದ ಸ್ಟಾರ್ ಒಲಿಂಪಿಯನ್ ಜಸ್ಟಿನ್ ಬೆಸ್ಟ್ ಅವರು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರ ಜೊತೆಗೆ ಐಫೆಲ್ ಟವರ್ ಮುಂದೆ ನಿಂತು ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡಿರೋದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಹೌದು, ಜಸ್ಟಿನ್ ಬೆಸ್ಟ್ ಅವರು ಪ್ರಿಯತಮೆ ಲೈನಿ ಒಲಿವಿಯಾ ಡಂಕನ್ಗೆ ಎಲ್ಲರ ಮುಂದೆಯೇ ಲೈವ್ ಟಿವಿ ಪ್ರಸಾರವಾಗುತ್ತಿದ್ದಾಗಲೇ ಪ್ರಪೋಸ್ ಮಾಡಿದ್ದಾರೆ.
ಇದನ್ನೂ ಓದಿ: ದಿಟ್ಟ ಹೋರಾಟಕ್ಕೆ ಸಂದ ಜಯ.. 82 ಬಾರಿ ಗೆದ್ದ ಕುಸ್ತಿಪಟುಗೆ ಮಣ್ಣು ಮುಕ್ಕಿಸಿದ ವಿನೇಶ್ ಪೋಗಟ್!
9 ವರ್ಷಗಳವರೆಗೆ ಜೊತೆಗಿದ್ದ ಗೆಳತಿಗೆ ಪ್ರಪೋಸ್ ಮಾಡಿದ್ದನ್ನೂ ನೋಡಿದ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. ಅದರಲ್ಲೂ ಜಸ್ಟಿನ್ ಬೆಸ್ಟ್, ಲೈನಿ ಒಲಿವಿಯಾ ಡಂಕನ್ಗೆ ಪ್ರಪೋಸ್ ಮಾಡಿದ ರೀತಿ ಸಾಕಷ್ಟು ಜನರ ಹೃದಯಗಳನ್ನು ಗೆದ್ದಿದೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ 60 ವರ್ಷಗಳಲ್ಲಿ ಮೊದಲ ಬಾರಿಗೆ ಜಸ್ಟಿನ್ ಬೆಸ್ಟ್ ತಂಡ USAಗೆ ಚಿನ್ನವನ್ನು ತಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊದಲು ಜಸ್ಟಿನ್ ಬೆಸ್ಟ್ ತನ್ನ ಜೇಬಿನಿಂದ ಉಂಗುರವನ್ನು ಹೊರ ತೆಗೆಯುತ್ತಾ ನೀವು ಮೊದಲ ದಿನದಿಂದ ನನ್ನೊಂದಿಗೆ ಇದ್ದೀರಿ. ನಮ್ಮ ಮೊದಲ ದಿನಾಂಕದಿಂದಲೂ ನೀವು ವಿಶೇಷ ಎಂದು ನನಗೆ ತಿಳಿದಿತ್ತು, ನಾನು ಒಲಿಂಪಿಕ್ಸ್‌ಗೆ ಹೋಗಲು ಬಯಸುತ್ತೇನೆ ಎಂದು ನಿಮಗೆ ಹೇಳಿದಾಗ ಆಗ ನೀವು ಖಂಡಿತವಾಗಿಯೂ ಹೋಗಿ ಅಂತ ಹೇಳಿದ್ದೀರಿ. ನೀವು ಅದ್ಭುತ, ಸುಂದರ ಮತ್ತು ಬುದ್ಧಿವಂತರಾಗಿದ್ದೀರಿ. ನಿಮ್ಮ ನಿಷ್ಕಲ್ಮಶ ಪ್ರೀತಿಗೆ ಮಿತಿಯಿಲ್ಲ. ನನ್ನ ಉಳಿದ ಜೀವನವನ್ನು ನಿಮ್ಮೊಂದಿಗೆ ಕಳೆಯಲು ಮತ್ತು ಕುಟುಂಬವನ್ನು ಒಟ್ಟಿಗೆ ಬೆಳೆಸಲು ನಾನು ಬಯಸುತ್ತೇನೆ. ನೀವು ನನ್ನನ್ನೂ ಮದುವೆ ಆಗ್ತೀರಾ ಅಂತ ಕೇಳಿದ್ದಾರೆ. ಅದಕ್ಕೆ ಲೈನಿ ಒಲಿವಿಯಾ ಡಂಕನ್ ಓಕೆ ಅಂತ ಹೇಳಿದ್ದಾರೆ.
View this post on Instagram
ಇನ್ನೂ ವಿಶೇಷ ಎಂದರೆ ಹತ್ತಾರು ಮಂದಿ ಹಳದಿ ಹಣ್ಣದ ಗುಲಾಬಿ ಹೂಗುಚ್ಛಗಳನ್ನು ಹಿಡಿದುಕೊಂಡು ಜಸ್ಟಿನ್ ಬೆಸ್ಟ್, ಲೈನಿ ಒಲಿವಿಯಾ ಡಂಕನ್ ಹಿಂದೆ ಬಂದು ನಿಂತುಕೊಂಡಿದ್ದರು. ಇದನ್ನು ನೋಡಿದ ಲೈನಿ ಒಲಿವಿಯಾ ಡಂಕನ್ ಫುಲ್ ಶಾಕ್ ಆಗಿದ್ದಳು. ಸುಮಾರು 2,738 ಹಳದಿ ಹಣ್ಣದ ಗುಲಾಬಿ ಹೂಗುಚ್ಛಗಳನ್ನು ಲೈನಿಗೆ ಜಸ್ಟಿನ್ ಬೆಸ್ಟ್ ಅರ್ಪಿಸಿದ್ದಾರೆ. ಈ ಬಗ್ಗೆ ಕೇಳಿದ ಜಸ್ಟಿನ್ ಬೆಸ್ಟ್ ಪ್ರತಿಯೊಂದು ಹಳದಿ ಗುಲಾಬಿಯು ನೀವು ಮತ್ತು ನಾನು ಒಟ್ಟಿಗೆ ಇರುವ ಒಂದು ದಿನವನ್ನು ಪ್ರತಿನಿಧಿಸುತ್ತದೆ. ಸ್ನ್ಯಾಪ್ ಚಾಟ್ನಲ್ಲಿ ನಮ್ಮ ಸ್ಟ್ರೀಕ್ ಇದೀಗ 2,738 ದಿನಗಳು ಆಗಿವೆ. ಆದ್ದರಿಂದ ಸ್ನ್ಯಾಪ್ ಚಾಟ್ 2,738 ಹಳದಿ ಗುಲಾಬಿಗಳು ಇಲ್ಲಿವೆ. ನಮ್ಮ ಪ್ರೀತಿ ನಿಜವಾಗಿಯೂ ಅಮರವಾಗಿದೆ. ನಾನು ತುಂಬಾ ಸಂತೋಷವಾಗಿದ್ದೇನೆ. ಇದು ನನ್ನ ಜೀವನದ ಅತ್ಯುತ್ತಮ ದಿನ ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ