/newsfirstlive-kannada/media/post_attachments/wp-content/uploads/2024/08/vinesh-phogat-3.jpg)
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024 ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅದ್ಭುತ ಪ್ರದರ್ಶನ ನೀಡಿ ಪದಕದತ್ತ ಮುನ್ನುಗ್ಗುತ್ತಿದ್ದಾರೆ. 50 ಕೆಜಿ ಕುಸ್ತಿ ವಿಭಾಗದಲ್ಲಿ ಇದುವರೆಗೂ ಸೋಲನ್ನು ಅನುಭವಿಸದ ಜಪಾನ್ ದೇಶದ ವರ್ಲ್ಡ್ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸುವ ಮೂಲಕ ಸೆಮಿ ಫೈನಲ್‌ಗೆ ವಿನೇಶ್ ಪೋಗಟ್ ಎಂಟ್ರಿ ಕೊಟ್ಟಿದ್ದಾರೆ. ಹರಿಯಾಣದ ಈ ಕುಸ್ತಿಪಟು ವಿನೇಶ್ ಫೋಗಟ್ ಅವರು ಸೇವಿಸುವ ದೇಸಿ ಆಹಾರ ಪದ್ಧತಿ ತುಂಬಾ ವಿಶೇಷವಾಗಿದೆ.
/newsfirstlive-kannada/media/post_attachments/wp-content/uploads/2024/08/Vinesh-Phogat4.jpg)
ಇದನ್ನೂ ಓದಿ:ದಿಟ್ಟ ಹೋರಾಟಕ್ಕೆ ಸಂದ ಜಯ.. 82 ಬಾರಿ ಗೆದ್ದ ಕುಸ್ತಿಪಟುಗೆ ಮಣ್ಣು ಮುಕ್ಕಿಸಿದ ವಿನೇಶ್ ಪೋಗಟ್!
ವಿನೇಶ್ ಫೋಗಟ್ ಅವರು ಶುದ್ಧವಾದ ಹರ್ಯಾನ್ವಿ ಆಹಾರವನ್ನು ಸೇವಿಸುತ್ತಾರೆ. ಹರ್ಯಾನ್ವಿ ಆಹಾರವು ಹೆಚ್ಚಾಗಿ ಡೈರಿ, ಗೋಧಿ ಮತ್ತು ಸ್ಥಳೀಯವಾಗಿ ಬೆಳೆದ ತರಕಾರಿಗಳಲ್ಲಿ ಸಮೃದ್ಧವಾಗಿದೆ. ಪ್ರಧಾನ ಆಹಾರಗಳಲ್ಲಿ ರೋಟಿ, ದಾಲ್​ ಮತ್ತು ಮೊಸರು ಮತ್ತು ತುಪ್ಪದಂತಹ ಡೈರಿ ಉತ್ಪನ್ನಗಳನ್ನು ಒಳಗೊಂಡ ಪೌಷ್ಟಿಕಾಂಶದ ಮೌಲ್ಯದ ಆಹಾರ ಸೇವಿಸುತ್ತಾರೆ. ಅದರಲ್ಲೂ ಮನೆಯಲ್ಲಿ ತಯಾರಿಸಿದ ಖೀರ್, ಚುರ್ಮಾ, ಆಲೂಗಡ್ಡೆ ಪರಾಠಗಳು, ದಾಲ್, ತರಕಾರಿಗಳು ಮತ್ತು ರೊಟ್ಟಿಯನ್ನು ಮಾತ್ರ ತಿನ್ನುತ್ತಾರೆ.
/newsfirstlive-kannada/media/post_attachments/wp-content/uploads/2024/08/Vinesh-Phogat5.jpg)
ಮನೆಯಲ್ಲಿ ತಯಾರಿಸಿದ ಆಹಾರ ಮಾತ್ರ ಸೇವನೆ
ವಿನೇಶ್ ಫೋಗಟ್ ಅವರು ಹೊರಗಡೆ ತಿನ್ನಲು ಇಷ್ಟವಿಲ್ಲ ಪಡುವುದಿಲ್ಲ. ಮನೆಯಿಂದಲೇ ಊಟ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಅವರ ಜೊತೆಗೆ ಇರುವ ಕೆಲವು ಸ್ಪರ್ಧೆಗಳಿಗೂ ತನ್ನದೇ ಊಟವನ್ನು ನೀಡುತ್ತಾರೆ.
ಹಾಲಿನ ಉತ್ಪನ್ನಗಳು
ವಿನೇಶ್ ಫೋಗಟ್ ಅವರು ಬೆಳಗ್ಗೆ ನಾಲ್ಕೈದು ಲೀಟರ್​ ಹಾಲನ್ನು ಕುಡಿಯುತ್ತಾರೆ. ಭಾನುವಾರದಂದು ಬೆಳಗಿನ ಉಪಾಹಾರಕ್ಕಾಗಿ ದೇಸಿ ತುಪ್ಪದೊಂದಿಗೆ ಆಲೂ ಪರಾಠವನ್ನು ತಿನ್ನುತ್ತಾರೆ.
/newsfirstlive-kannada/media/post_attachments/wp-content/uploads/2024/08/Vinesh-Phogat6.jpg)
ದ್ವಿದಳ ಧಾನ್ಯಗಳು ಮತ್ತು ಹಸಿರು ತರಕಾರಿಗಳು
ವಿನೇಶ್ ಫೋಗಟ್ ಪ್ರತಿದಿನ ಬೇಳೆಕಾಳುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನುತ್ತಾರೆ. ಊಟದ ನಂತರ ತಿನ್ನುವ ಮೊಸರು ಮತ್ತು ಬೆಣ್ಣೆಯೊಂದಿಗೆ ಆಹಾರವನ್ನು ಪೂರ್ಣಗೊಳಿಸುತ್ತಾರೆ.
ಡ್ರೈ ಫ್ರೂಟ್ಸ್ ಅತ್ಯಗತ್ಯ
ವಿನೇಶ್ ಫೋಗಟ್ ಅವರು ಕುಸ್ತಿಗಾಗಿ ಅದೆಷ್ಟೇ ಕಸರತ್ತು ಮಾಡಿದರೂ, ಅತ್ತೆ ಸರೋಜ ದೇವಿ ಅವರಿಗೆ ಬಾದಾಮಿ, ವಾಲ್‌ನಟ್ಸ್ ಮತ್ತು ಗೋಡಂಬಿಯನ್ನು ಕಳುಹಿಸುತ್ತಾರಂತೆ. ವಿನೇಶ್‌ಗೆ ಚುರ್ಮಾ ಕೆ ಲಡ್ಡೂಸ್ (Churma ke laddu) ಎಂದರೆ ತುಂಬಾ ಇಷ್ಟ. ಪ್ರತಿ ದಿನ ಊಟದ ಮುಗಿಸಿದ ನಂತರ ಚುರ್ಮಾ ಕೆ ಲಡ್ಡೂಸ್ ತಿನ್ನುತ್ತಾರೆ. ಇದರ ಜೊತೆಗೆ ಮಾಲ್ಪುವಾಗಳನ್ನು (Malpua) ತಿನ್ನುತ್ತಾರೆ.
ಸದ್ಯ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತೀಯ ಆಟಗಾರರು ಪದಕದ ಭರವಸೆ ಮೂಡಿಸಿದ್ದಾರೆ. ಕುಸ್ತಿಯಲ್ಲಿ ವಿನೇಶ್ ಪೋಗಟ್ ಹಾಗೂ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us