newsfirstkannada.com

ಪದಕದ ಕನಸು ಇನ್ನೂ ಜೀವಂತ; ವಿನೇಶ್​ಗೆ ಬೆಳ್ಳಿ ಪದಕ ಕೊಡಿಸಲು ಬಂದ ಭಾರತದ ಅಗ್ರಮಾನ್ಯ ವಕೀಲ..

Share :

Published August 9, 2024 at 1:20pm

Update August 9, 2024 at 1:50pm

    ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹ

    ಅನರ್ಹತೆ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿರುವ ವಿನೇಶ್ ಫೋಗಟ್

    ಅನರ್ಹಗೊಂಡರೂ ಪದಕದ ಕನಸು ಇನ್ನೂ ಜೀವಂತವಾಗಿದೆ

ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡ ನಂತರ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ನೀಡುವಂತೆ ಸಿಎಎಸ್​ (Court of Arbitration for Sport)ಗೆ ಮನವಿ ಮಾಡಲಾಗಿದೆ. ಫೋಗಟ್ ಮನವಿಯನ್ನು ಸ್ವೀಕರಿಸಿರುವ ಕೋರ್ಟ್ ಅದರ ವಿಚಾರಣೆಯು ಇಂದು ಮಧ್ಯಾಹ್ನ 1.30ರಿಂದ ಆರಂಭ ಆಗಲಿದೆ.

ವಿನೇಶ್ ಪರ ವಕೀಲರು ಯಾರು?
ಸಿಎಎಸ್ ವಿನೇಶ್ ಫೋಗಟ್ ಮನವಿಯನ್ನು ಸ್ವೀಕರಿಸಿದ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಕುಸ್ತಿಪಟುಗೆ ಸಂಪೂರ್ಣ ಬೆಂಬಲ ನೀಡಿರುವ ಕೇಂದ್ರ ಸರ್ಕಾರ ಖ್ಯಾತ ವಕೀಲರ ಬಳಿ ವಾದ ಮಂಡಿಸುವಂತೆ ಕೇಳಿಕೊಂಡಿದೆ. ಅದರಂತೆ ದೇಶದ ಅಗ್ರಮಾನ್ಯ ವಕೀಲ ಹರೀಶ್ ಸಾಳ್ವೆ ಅವರು ವಿನೇಶ್ ಫೋಗಟ್ ಪರ ವಾದ ಮಂಡಿಸಲಿದ್ದಾರೆ. ಇನ್ನು ಕೋರ್ಟ್​, ಭಾರತೀಯ ಕಾಲಮಾನ ಗುರುವಾರ ರಾತ್ರಿ 9:30ರೊಳಗೆ ವಕೀಲರನ್ನು ನೇಮಿಸುವಂತೆ ಕೇಳಿಕೊಂಡಿತ್ತು.

ಇದನ್ನೂ ಓದಿ:ವಿನೇಶ್ ಫೋಗಟ್ ವಿವಾದಕ್ಕೆ ಹೊಸ ಟ್ವಿಸ್ಟ್; ನಿವೃತ್ತಿ ಘೋಷಣೆ ನಂತರವೂ ಪದಕದ ಭರವಸೆ ಮತ್ತೆ ಚಿಗುರಿದೆ..!

ವಿನೇಶ್ ಫೋಗಟ್ ಕೋರ್ಟ್ ಮುಂದೆ 2 ಮೇಲ್ಮನವಿ ಸಲ್ಲಿಸಿದ್ದರು. ಮೊದಲ ಮೇಲ್ಮನವಿಯಲ್ಲಿ ಗುರುವಾರ (ನಿನ್ನೆ) ನಡೆಯಲಿರುವ ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿಯ ಫೈನಲ್‌ನಲ್ಲಿ ಭಾಗವಹಿಸಲು ಅವಕಾಶ ಕೋರಿದ್ದರು. ಈ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಎರಡನೇ ಮನವಿಯಲ್ಲಿ 50 ಕೆಜಿ ವಿಭಾಗದ ಮಹಿಳೆಯರ ಕುಸ್ತಿಯಲ್ಲಿ ಜಂಟಿಯಾಗಿ ಬೆಳ್ಳಿ ಪದಕ ವಿಜೇತರೆಂದು ಘೋಷಣೆ ಮಾಡುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ:ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪದಕದ ಕನಸು ಇನ್ನೂ ಜೀವಂತ; ವಿನೇಶ್​ಗೆ ಬೆಳ್ಳಿ ಪದಕ ಕೊಡಿಸಲು ಬಂದ ಭಾರತದ ಅಗ್ರಮಾನ್ಯ ವಕೀಲ..

https://newsfirstlive.com/wp-content/uploads/2024/08/VINESH-PHOGAT-9.jpg

Load More