Advertisment

ಇಂದಿನಿಂದ ಮುಂಗಾರು ಅಧಿವೇಶನ.. ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಲು ರಾಹುಲ್​ ಗಾಂಧಿ ಪ್ಲಾನ್​

author-image
Veena Gangani
Updated On
ಇಂದಿನಿಂದ ಮುಂಗಾರು ಅಧಿವೇಶನ.. ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಲು ರಾಹುಲ್​ ಗಾಂಧಿ ಪ್ಲಾನ್​
Advertisment
  • ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆ
  • ಅಧಿವೇಶನದಲ್ಲಿ 6 ಹೊಸ ಮಸೂದೆಗಳ ಮಂಡನೆಗೆ ತಯಾರಿ
  • ಕನ್ವರ್​ ಯಾತ್ರೆ, ನೀಟ್​ ಪೇಪರ್​ ಲೀಕ್ ಗದ್ದಲಕ್ಕೆ ವಿಪಕ್ಷ ಸಜ್ಜು

ನವದೆಹಲಿ: ಇಂದಿನಿಂದ ಸಂಸತ್​ ಮುಂಗಾರು ಅಧಿವೇಶನ ಆರಂಭವಾಗಲಿದೆ. 20ಕ್ಕೂ ಅಧಿಕ ದಿನಗಳ ಕಾಲ ಈ ಸದನ ನಡೆಯಲಿದ್ದು ಆಡಳಿತ-ವಿಪಕ್ಷ ನಾಯಕರ ನಡುವೆ ಗದ್ದಲ-ಗಲಾಟೆ ನಡೆಯುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಇದರಲ್ಲಿ ಮುಖ್ಯ ವಿಚಾರ ಏನಂದ್ರೆ ಮಂಗಳವಾರ ಕೇಂದ್ರ ಸರ್ಕಾರ ಬಜೆಟ್​ ಮಂಡನೆ ಮಾಡಲಿದ್ದು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ರಾಜ್ಯ ವಿಧಾನಸಭೆಯಲ್ಲಿ ಅಧಿವೇಶನ ಶುರುವಾಗಿ ಗದ್ದಲ ಗಲಾಟೆಗಳ ಬೆನ್ನಲ್ಲೇ ಈಗ ಸಂಸತ್ತಿನಲ್ಲಿ ಈ ವಾಗ್ವಾದಗಳು ನಡೆಯಲು ಕ್ಷಣಗಣನೆ ಶುರುವಾಗಿದೆ.

Advertisment

ಇದನ್ನೂ ಓದಿ:PhonePe ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ? ಈ ಸಂಗತಿ ನಿಜಾನಾ?

publive-image

ಇಂದು ರಾಜನಾಥ್​ ಸಿಂಗ್​ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ

ಇಂದಿನಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಶುರುವಾಗಲಿದ್ದು, ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನು ಇಟ್ಟುಕೊಂಡು ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಆದ್ರೆ ಇಂದಿನ ಅಧಿವೇಶನಕ್ಕೂ ಮೊದಲು ನಿನ್ನೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು.

ಇದನ್ನೂ ಓದಿ: ಸಖತ್ತಾಗಿದೆ.. ಸೂಪರ್​ ಆಗಿದೆ! ಸೋಷಿಯಲ್​ ಮೀಡಿಯಾದಲ್ಲಿ ಮ್ಯಾಜಿಕ್ ಮಾಡ್ತಿದೆ ‘ದ್ವಾಪರ‘ ಸಾಂಗ್!

ಈ ವೇಳೆ ಸದನದಲ್ಲಿ ಯಾರಾದ್ರೂ ಮಾತನಾಡುವಾಗ ಬೇರೆಯವರು ಅಡ್ಡಿಪಡಿಸಬೇಡಿ ಅಂತ ಸಿಂಗ್ ಮನವಿ ಮಾಡಿದ್ರು. ಆದ್ರೆ ಸಭೆಗೆ ಟಿಎಮ್​ಸಿ ಚಕ್ಕರ್ ಹಾಕಿತ್ತು. ಅಧಿವೇಶನದಲ್ಲಿ 6 ಹೊಸ ಮಸೂದೆಗಳ ಮಂಡನೆ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಮಸೂದೆ ತಿದ್ದುಪಡಿ ಸೇರಿದಂತೆ 6 ಹೊಸ ಮಸೂದೆಗಳನ್ನು ಮಂಡನೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಅದರಲ್ಲಿ ಹಣಕಾಸು ಮಸೂದೆ, ವಿಪತ್ತು ನಿರ್ವಹಣಾ ಮಸೂದೆ, ಬಾಯ್ಲರ್​ಗಳ ಮಸೂದೆ, ಭಾರತೀಯ ವಾಯುಯಾನ ವಿಧೇಯಕ, ಕಾಫಿ ಹಾಗೂ ರಬ್ಬರ್ ಪ್ರಚಾರ ಮತ್ತು ಅಭಿವೃದ್ಧಿ ಮಸೂದೆಗಳನ್ನ ಮಂಡಿಸಲಿದೆ.

Advertisment

publive-image

ಕನ್ವರ್​ ಯಾತ್ರೆ, ನೀಟ್​ ಪೇಪರ್​ ಲೀಕ್​ ಗದ್ದಲವೆಬ್ಬಿಸಲು ವಿಪಕ್ಷ ತಯಾರಿ

ಇನ್ನು, ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಕೂಡ ಭರ್ಜರಿ ತಾಲೀಮು ನಡೆಸಿವೆ. ಅದರಲ್ಲೂ ಕನ್ವರ್ ಯಾತ್ರೆ ವೇಳೆ ಅಂಗಡಿಗಳ ಎದುರು ಮಾಲೀಕರ ನಾಮಫಲಕದ ಹೆಸರು ಪ್ರದರ್ಶಿಸುವ ಉತ್ತರಪ್ರದೇಶ ಸರ್ಕಾರದ ಆದೇಶ ವಿವಾದಕ್ಕೆ ಕಾರಣವಾಗಿದೆ. ಇದನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರದ ವಿರುದ್ಧ ಮುಗಿಬೀಳಲಿವೆ. ಇದೇ ವೇಳೆ ನೀಟ್​ ಪೇಪರ್​ ಲೀಕ್​ ವಿಷಯದ ಪ್ರಸ್ತಾಪವೂ ಆಗಲಿದೆ. ಉಪ ಸಭಾಪತಿ ಸ್ಥಾನದ ಮೇಲೆ ಕಾಂಗ್ರೆಸ್​ ಕಣ್ಣಿಟ್ಟಿದೆ. ಹೀಗಾಗಿ ಇದೆಲ್ಲ ವಿಚಾರಗಳು ಸದನದಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸುವ ಸಾಧ್ಯತೆ ಇದೆ.

publive-image

ಮಂಗಳವಾರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್

ಮುಖ್ಯ ವಿಚಾರ ಏನಂದ್ರೆ ಮಂಗಳವಾರದಂದು ಕೇಂದ್ರ ಬಜೆಟ್​ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ಬಜೆಟ್​ನಲ್ಲಿ ರೈತರಿಗೆ ಸಿಗುವ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಹೆಚ್ಚುವರಿಯಾಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಮಹಿಳೆಯರು, ಕಾರ್ಮಿಕರು ಸೇರಿದಂತೆ ಅನೇಕ ಮಧ್ಯಮ ವರ್ಗದ ಜನತೆಗೆ ಬಜೆಟ್‌ನಲ್ಲಿ ಬಂಪರ್‌ ಆಫರ್‌ ಘೋಷಣೆಯಾಗಲಿದೆ ಅಂತ ಹೇಳಲಾಗ್ತಿದ್ದು ಎಲ್ಲರ ಚಿತ್ತ ಬಜೆಟ್‌ನತ್ತ ನೆಟ್ಟಿದೆ. ಒಟ್ಟಾರೆ ಇಂದಿನಿಂದ ಸಂಸತ್ ಅಧಿವೇಶನ ನಡೆಯಲಿದೆ. ಇತ್ತೀಚೆಗೆ ನಮ್ಮ ರಾಜ್ಯ ವಿಧಾನಸಭೆ ಅಧಿವೇಶನವಾಗಲಿ ಅಥವಾ ಸಂಸತ್ ಅಧಿವೇಶನಗಳಲ್ಲಾಗಲಿ ಜನರ ಸಮಸ್ಯೆ ಬದಲು ಬರೀ ಗದ್ದಲಗಳೇ ವಿಜ್ರಂಭಿಸುತ್ತಿವೆ. ಈ ಬಾರಿಯಾದ್ರೂ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment