/newsfirstlive-kannada/media/post_attachments/wp-content/uploads/2025/03/rcb-fans3.jpg)
ಐಪಿಎಲ್ ಅಖಾಡದಲ್ಲಿ ಸೌತ್ ಇಂಡಿಯನ್ ಡರ್ಬಿಗೆ ಕೌಂಟ್ಡೌನ್ ಶುರುವಾಗಿದೆ. ಮುಂಬೈ ಇಂಡಿಯನ್ಸ್ ಎದುರು ಗೆದ್ದು ಬೀಗಿರುವ ಚೆನ್ನೈ ಕಿಂಗ್ಸ್ ಮುಂದಿನ ಪಂದ್ಯದಲ್ಲಿ ಆರ್ಸಿಬಿ ಎದುರು ಗೆಲುವಿನ ಜಪ ಮಾಡ್ತಿದೆ.
ಇದನ್ನೂ ಓದಿ:ಬಾಹುಬಲಿ ನಟನಿಗೆ ಕಂಕಣ ಭಾಗ್ಯ.. ಉದ್ಯಮಿ ಮಗಳ ಜೊತೆ ಪ್ರಭಾಸ್ ಮದುವೆ..?
ಇತ್ತ, ಮೊದಲ ಪಂದ್ಯದಲ್ಲಿ ಕೋಲ್ಕತ್ತ ವಿರುದ್ಧ ಗೆದ್ದಿರುವ ರಜತ್ ಪಡೆ, ಗೆಲುವಿನ ಅಭಿಯಾನ ಮುಂದುವರಿಸುವ ಪಕ್ಕಾ ಪ್ಲಾನ್ನಲ್ಲಿದೆ. ಇದರ ಮಧ್ಯೆ ಆರ್ಸಿಬಿ ಫ್ಯಾನ್ಸ್ಗೆ ಗಿಳಿ ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ.
ಹೌದು, ಜ್ಯೋತಿಷ್ಯ ನುಡಿಯುವ ಗಿಳಿಯು ಆರ್ಸಿಬಿ ಗೆಲ್ಲುತ್ತಾ ಅಥವಾ ಸಿಎಸ್ಕೆ ಜಯಭೇರಿ ಭಾರಿಸುತ್ತಾ ಅಂತ ಭವಿಷ್ಯ ನುಡಿದಿದೆ. ಗಿಳಿ ಜ್ಯೋತಿಷ್ಯರು ಚೆನ್ನೈ ಹಾಗೂ ಬೆಂಗಳೂರು ಮ್ಯಾಚ್ ನಡೆಯುತ್ತೆ. ಇದರಲ್ಲಿ ಯಾವ ತಂಡ ಗೆಲ್ಲುತ್ತೆ ಅಂತ ನೋಡೋಣ ಎಂದು ಹೇಳುತ್ತಾರೆ. ಆಗ ಮೊದಲು CSK ಫೋಟೋವನ್ನು ಹಿಡಿದುಕೊಂಡು ಬಲಗಡೆ ಇದೆ, RCB ಕೂಡ ಬಲಗಡೆ ಇದೆ. ಇದರಲ್ಲಿ ಯಾರ ತಂಡ ಗೆಲ್ಲುತ್ತದೆ ಅಂತ ಗಿಳಿ ಭವಿಷ್ಯ ನುಡಿಯುತ್ತದೆ ಎಂದು ಹೇಳುತ್ತಾರೆ. ಆಗ ಗಿಳಿ ಒಂದು ಫೋಟೋವನ್ನು ತೆಗೆದು ಅವರ ಕೈಗೆ ಇಡುತ್ತದೆ. ಅದರಲ್ಲಿ RCB ಫೋಟೋ ಇರುತ್ತದೆ. ಆಗ ಜ್ಯೋತಿಷ್ಯ RCB ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ