Advertisment

ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ

author-image
Bheemappa
Updated On
ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ
Advertisment
  • ಕಿಂಗಿಣಿ ಎನ್ನುವ ಗಿಣಿಯ ಅವತಾರದಿಂದ ಎಚ್ಚೆತ್ತುಕೊಂಡ ವ್ಯಕ್ತಿ
  • ಗಿಳಿ ಹೇಳಿದಂತೆ ಬೆಳಗ್ಗೆ ಇಡೀ ಊರಿಗೆ ಊರೇ ಇರಲಿಲ್ಲ
  • ಕುಟುಂಬ, ಸ್ನೇಹಿತರನ್ನು ವ್ಯಕ್ತಿ ಪಾರು ಮಾಡಿದ್ದು ಹೇಗೆ ಗೊತ್ತಾ..?

ಭೂಮಿ ಮೇಲೆ ಏನಾದರೂ ದೊಡ್ಡ ಮಟ್ಟದ ಅನಾಹುತಗಳು ಆಗುತ್ತವೆ ಎಂದರೆ ಪ್ರಾಣಿ, ಪಕ್ಷಿಗಳು ಮೊದಲೇ ಸೂಚನೆ ನೀಡುತ್ತವೆ ಎನ್ನುವುದು ನಂಬಿಕೆ. ಇಂತಹ ಸೂಚನೆಗಳು ವಿಶ್ವದಲ್ಲಿ ಕೆಲವು ಬಾರಿ ನಿಜವಾಗಿವೆ. ವಯನಾಡಿನಲ್ಲಿ ಭೀಕರ ಭೂಕುಸಿತಕ್ಕೂ ಮೊದಲೇ ಈ ಬಗ್ಗೆ ಗಿಣಿಯೊಂದು ವಾರ್ನ್​ ಮಾಡಿತ್ತಂತೆ. ಈ ಒಂದೇ ಒಂದು ಎಚ್ಚರಿಕೆಯನ್ನು ಗಮನಿಸಿದ್ದ ಅದರ ಮಾಲೀಕ ಕುಟುಂಬ ಸಮೇತ ಪ್ರಾಣ ಉಳಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್​ ಸಿಟಿ ಎಷ್ಟು ಸೇಫ್?

ವಯನಾಡಿನ ಪ್ರದೇಶಗಳಲ್ಲಿ ಮೊದಲು ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದರಿಂದ ಚುರಲ್ಮದ ನಿವಾಸಿ ಕೆ.ಎಂ ವಿನೋದ್ ಎನ್ನುವರು ತಮ್ಮ ಕುಟುಂಬದೊಂದಿಗೆ ತನ್ನ ಸಹೋದರಿ ಮನೆಗೆ ತೆರಳಿದ್ದರು. ಕಾಲೋನಿ ರಸ್ತೆಯಲ್ಲಿದ್ದ ಸಹೋದರಿ ಮನೆಗೆ ವಿನೋದ್ ಹೋಗುವಾಗ ಮನೆಯಲ್ಲಿ ಗಿಣಿ (ಕಿಂಗಿಣಿ)ಯನ್ನು ಪಂಜರದ ಸಮೇತ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಮರುದಿನ ಮತ್ತೊಂದು ದೊಡ್ಡ ಭೂಕುಸಿತವಾಗಲಿದೆ ಎಂಬುವುದರ ಮುನ್ಸೂಚನೆಯಂತೆ ಕಿಂಗಿಣಿ ಪಂಜರದಲ್ಲಿ ಜೋರು ಶಬ್ಧ ಮಾಡ್ತಿತ್ತಂತೆ.

ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?

Advertisment

publive-image

ಪಂಜರದಲ್ಲಿ ರಕ್ಕೆಗಳನ್ನು ಬಡಿದು ಜೋರು ಜೋರಾಗಿ ಸದ್ದು ಮಾಡಲು ಪ್ರಾರಂಭಿಸಿತು. ಹೀಗಾಗಿ ಚುರಲ್ಮದದಲ್ಲಿ ದೊಡ್ಡ ದುರಂತ ಸಂಭವಿಸಲಿದೆ ಎಂದು ವಿನೋದ್ ತಿಳಿದುಕೊಂಡರು. ಅದರಂತೆ ಹೊರಗಡೆ ನೋಡಿದಾಗ ಗಾಳಿ, ಮಳೆ ಹೆಚ್ಚಾಗಿ ಮಳೆ ನೀರಿನ ಜೊತೆ ಮಣ್ಣು ಸೇರಿ ದೊಡ್ಡ ಮಟ್ಟದಲ್ಲಿ ಬರುತ್ತಿತ್ತು. ಇದರಿಂದ ಗಾಬರಿಗೊಂಡ ವಿನೋದ್ ಆ ಪ್ರದೇಶ ಬಿಟ್ಟು ಬೇರೆ ಸ್ಥಳಕ್ಕೆ ಕುಟುಂಬ ಸಮೇತ ಹೋಗಿದ್ದಾರೆ. ಗ್ರಾಮದಲ್ಲಿದ್ದ ತನ್ನ ಸ್ನೇಹಿತರಾದ ಜಿಜಿನ್, ಪ್ರಶಾಂತ್ ಹಾಗೂ ಅಸ್ಕರ್​ ಎನ್ನುವರಿಗೆ ಫೋನ್ ಮಾಡಿ ತಕ್ಷಣ ಮನೆ ಬಿಟ್ಟು ಬೇರೆ ಸ್ಥಳಕ್ಕೆ ಹೋಗುವಂತೆ ಮಾಹಿತಿ ನೀಡಿದ್ದಾರೆ. ಅವರು ಬೇರೆ ಪ್ರದೇಶಕ್ಕೆ ಹೋಗಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಯ್ಯೋ ದುರಂತ!.. 18 ಫ್ಯಾಮಿಲಿ ಕಾಪಾಡಿದ್ದ ರಿಯಲ್ ಹೀರೋ.. ಕಾರು ಸಮೇತ ಕಣ್ಮುಂದೆಯೇ ಕೊಚ್ಚಿ ಹೋದ

ಕಿಂಗಿಣಿ ಮುನ್ಸೂಚನೆಯಂತೆ ದೊಡ್ಡ ಮಟ್ಟದಲ್ಲೇ ಭೀಕರ ಭೂಕುಸಿತ ಸಂಭವಿಸಿ 4 ಗ್ರಾಮಗಳು ಸಂಪೂರ್ಣವಾಗಿ ವಾಶ್​ಔಟ್ ಆಗಿವೆ. ಘಟನೆಯಲ್ಲಿ ವಿನೋದ್, ಅವರ ಸ್ನೇಹಿತರ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ವಿನೋದ್ ಅವರು ತನ್ನ ಫ್ಯಾಮಿಲಿ, ಗೆಳೆಯರನ್ನ ಉಳಿಸಿಕೊಂಡಿದ್ದು ಸದ್ಯ ಮೆಪ್ಪಾಡಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment