RCB ಪಂದ್ಯದಂತೆ ನಮ್ಮ ತಂಡದ ಮ್ಯಾಚ್ ಸ್ಥಳಾಂತರ ಮಾಡಿ.. ಹೀಗೆ ಕೇಳಿದ್ದು ಯಾಕೆ?

author-image
Bheemappa
Updated On
IPL 6ನೇ ಟ್ರೋಫಿ ಮೇಲೆ ಕಣ್ಣು.. ಈ ಬಲಿಷ್ಠ ಪ್ಲೇಯರ್​ ಬಂದ ಮೇಲೆ ತಂಡದ ಲಕ್ ಬದಲಾಯ್ತಾ?
Advertisment
  • ಒಂದು ವೇಳೆ ಪಂದ್ಯ ಸ್ಥಗಿತಗೊಂಡರೆ ಯಾವ ತಂಡಕ್ಕೆ ಹೆಚ್ಚು ಲಾಭ..?
  • ಮಹತ್ವದ ಪಂದ್ಯವನ್ನು ಸ್ಥಳಾಂತರ ಮಾಡುವಂತೆ ಬಿಸಿಸಿಐಗೆ ಮನವಿ
  • ಬೆಂಗಳೂರಲ್ಲಿ ನಡೆಯಬೇಕಿದ್ದ ಮ್ಯಾಚ್​ ಎಲ್ಲಿಗೆ ಸ್ಥಳಾಂತರ ಮಾಡಿದೆ?

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್​ ನಡುವಿನ ಐಪಿಎಲ್​ನ ಪಂದ್ಯ ಮಳೆಯಿಂದ ರದ್ದಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಬೇರೆ ನಗರಕ್ಕೆ ಪಂದ್ಯವನ್ನು ಸ್ಥಳಾಂತರ ಮಾಡುವಂತೆ ಬಿಸಿಸಿಐಗೆ, ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಾಲೀಕ ಪಾರ್ಥ ಜಿಂದಾಲ್ ಅವರು ಪತ್ರ ಬರೆದಿದ್ದಾರೆ.

ಪ್ಲೇ ಆಫ್​ ದೃಷ್ಟಿಯಿಂದ ಎರಡು ತಂಡಗಳಿಗೂ ಇಂದು ಸಂಜೆ ನಡೆಯುವ ಪಂದ್ಯ ಅತ್ಯಂತ ಮುಖ್ಯವಾಗಿದೆ. ಮುಂಬೈ ಗೆದ್ರೆ ಪ್ಲೇ ಆಫ್​ಗೆ ಅರ್ಹತೆ ಪಡೆಯುತ್ತೆ, ಒಂದು ವೇಳೆ ಡೆಲ್ಲಿ ಜಯ ಸಾಧಿಸಿದರೆ ಪ್ಲೇ ಆಫ್ ಕನಸು ಜೀವಂತ ಆಗಿರುತ್ತದೆ. ಮುಂಬೈ ಮತ್ತು ಡೆಲ್ಲಿ ಲೀಗ್​​ನ ಕೊನೆ ಪಂದ್ಯ ಪಂಜಾಬ್ ವಿರುದ್ಧ ಆಡಲಿವೆ. ಇದರಿಂದ ಇಂದಿನ ಪಂದ್ಯ ಮಳೆಯಿಂದ ರದ್ದು ಆದ್ರೆ ತಲಾ ಒಂದೊಂದು ಅಂಕ ಪಡೆದರೂ ಡೆಲ್ಲಿ ಕ್ಯಾಪಿಟಲ್ಸ್​ಗೆ ಹೆಚ್ಚಿನ ನಷ್ಟ ಆಗುತ್ತದೆ.

ಏಕೆಂದರೆ ಈಗಾಗಲೇ ಪಾಯಿಂಟ್ ಪಟ್ಟಿಯಲ್ಲಿ ಡೆಲ್ಲಿ 13 ಅಂಕ ಪಡೆದಿದ್ರೆ ಮುಂಬೈ 14 ಅಂಕಗಳನ್ನು ಪಡೆದಿದೆ. ಮಳೆಯಿಂದ ಮ್ಯಾಚ್ ನಿಂತರೆ ತಲಾ ಒಂದೊಂದು ಅಂಕದಿಂದ ಮುಂಬೈಗೆ ಹೆಚ್ಚಿನ ಲಾಭ ಇದೆ. ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಈ ಎರಡು ತಂಡಗಳೂ ಸೋತರೂ, ಗೆದ್ದರೂ ಮುಂಬೈಗೆ ಅದೃಷ್ಟ ಕುಲಾಯಿಸುತ್ತದೆ. ಈ ಕಾರಣದಿಂದಲೇ ಪಾರ್ಥ ಜಿಂದಾಲ್ ಅವರು ಬಿಸಿಸಿಐಗೆ​​ ಇ-ಮೇಲ್​ ಮಾಡಿದ್ದಾರೆ.

ಇದನ್ನೂ ಓದಿ: ಡು ಆರ್ ಡೈ ಮ್ಯಾಚ್​; ಸೋತರೇ.. ಡೆಲ್ಲಿ, ಮುಂಬೈ ತಂಡಗಳಲ್ಲಿ One Life Line ಯಾರಿಗಿದೆ?

publive-image

ಈ ಬಗ್ಗೆ ಪತ್ರ ಬರೆದಿರುವ ಡೆಲ್ಲಿ ಮಾಲೀಕ ಪಾರ್ಥ ಜಿಂದಾಲ್ ಅವರು, ಮುಂಬೈಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರಿಂದ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಕಾರಣದಿಂದ ಹೈದ್ರಾಬಾದ್ ವಿರುದ್ಧದ ಆರ್​ಸಿಬಿ ಪಂದ್ಯವನ್ನು ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಮಾಡಲಾಗಿದೆ. ಅದರಂತೆ ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯವನ್ನು ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದಾರೆ.

ಡೆಲ್ಲಿ ಹಾಗೂ ಮುಂಬೈ ನಡುವಿನ ಪಂದ್ಯ ಅತ್ಯಂತ ಮುಖ್ಯವಾಗಿರುತ್ತದೆ. ಮುಂಬೈನಲ್ಲಿ ಕಳೆದ 6 ದಿನಗಳಿಂದ ವಾತಾವರಣ ಹೇಗಿದೆ ಎಂದು ನಮಗೆ ಗೊತ್ತಿದೆ. ಮೇ 21 ರಂದು ಕೂಡ ಭರ್ಜರಿ ಮಳೆಯಾಗುವ ಸಂಭವವಿದೆ. ಹೀಗಾಗಿ ಪಂದ್ಯ ಬೇರೆ ಸ್ಥಳಕ್ಕೆ ವರ್ಗಾಯಿಸಬೇಕು. ಇದರಿಂದ ತಂಡಗಳಿಗೆ ಅನುಕೂಲವಾಗುತ್ತದೆ. ನಿರ್ದಿಷ್ಟ ಫಲಿತಾಂಶ ಹೊರ ಬೀಳುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment