/newsfirstlive-kannada/media/post_attachments/wp-content/uploads/2025/02/PERVESH-VERMA.jpg)
ಬಿಜೆಪಿಯ ಪರ್ವೇಶ್ ವರ್ಮಾ ಎರಡೆರಡು ಬಾರಿ ರಾಷ್ಟ್ರೀಯ ಚುನಾವಣೆಗಳನ್ನು ಗೆದ್ದಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಪರ್ವೇಶ್ 2025ರಲ್ಲಿ ಹೊಸ ಬಿರುಗಾಳಿಯನ್ನೇ ದೆಹಲಿಯಲ್ಲಿ ಸೃಷ್ಟಿಸಿದರು. ಕಳೆದ ಒಂದು ದಶಕದಿಂದ ದೆಹಲಿಯನ್ನಾಳುತ್ತಿದ್ದ ಮಾಜಿ ಸಿಎಂ ಕೇಜ್ರಿವಾಲ್ ಅವರನ್ನ ಅವರದ್ದೇ ಅಖಾಡದಲ್ಲಿ ಸೋಲಿಸಿ ಮಣ್ಣು ಮುಕ್ಕಿಸಿ ಜನರಿಂದ ದೈತ್ಯ ವಿಜಯಿ, ದೈತ್ಯ ಭಂಜಕ ಎಂಬ ಹೆಸರನ್ನೆಲ್ಲಾ ಪಡೆಯುತ್ತಿದ್ದಾರೆ. ಈ ಮೂಲಕ ದೆಹಲಿಯ ಸಿಎಂ ನಾನೇ ಎಂಬ ಸೂಚನೆಯನ್ನು ಕೂಡ ನೀಡುತ್ತಿದ್ದಾರೆ.
ವರ್ಮಾ ಸಾಧನೆಗಳಿಗಿಂತ ವಿವಾದಗಳಿಗೆ ಹೆಚ್ಚು ಖ್ಯಾತಿ ಪಡೆದವರು. ಈ ಬಾರಿ ನವದೆಹಲಿಯ ಚುನಾವಣೆಯಲ್ಲಿ ಕೇಜ್ರಿವಾಲ್ರನ್ನು 4000ಕ್ಕೂ ಅಧಿಕ ವೋಟುಗಳಿಂದ ಸೋಲಿಸಿ ಹೊಸ ಇತಿಹಾಸ ಬರೆದಿದ್ದಾರೆ. ಗೆಲುವಿನ ಹೊಸ ಇತಿಹಾಸ ಬರೆದ ವರ್ಮಾ ದೆಹಲಿಯಲ್ಲಿನ್ನೂ ಡಬಲ್ ಇಂಜಿನ್ ಸರ್ಕಾರ ಚಲಾವಣೆಗೆ ಬರಲಿದೆ. ಪ್ರಧಾನಿ ಮೋದಿ ಹಾಗೂ ನಮ್ಮ ಪಕ್ಷ ಸೇರಿ ದೆಹಲಿಗೆ ಹೊಸ ಆಕಾರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸೋಲಿಸಿದ್ದು ಬಿಜೆಪಿನಾ? ಕಾಂಗ್ರೆಸಾ? 10 ಕಾರಣಗಳು ಇಲ್ಲಿದೆ!
ಇನ್ನು ಚುನಾವಣೆಯಲ್ಲಿ ತಾವು ಗೆದ್ದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಜೈ ಶ್ರೀರಾಮ ಎಂದು ಬರೆದುಕೊಂಡಿದ್ದಾರೆ ಪರ್ವೇಶ್ ವರ್ಮಾ. ಒಂದು ಮೂಲಗಳ ಪ್ರಕಾರ ದೆಹಲಿಯ ಬಿಜೆಪಿ ಸಿಎಂ ಆಗಿ ಅಧಿಕಾರವಹಿಸಿಕೊಳ್ಲೂವುದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.
ನವದೆಹಲಿಯಲ್ಲಿ ವಿಜಯೋತ್ಸವದ ಬಳಿಕ ಮಾತನಾಡಿದ ಪರ್ವೇಶ್ ವರ್ಮಾ, ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಯಾವುದೇ ಕೆಲಸ ಆಗಿರಲಿಲ್ಲ. ನಾನು ದೆಹಲಿ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ಮೋದಿಯವರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಇನ್ನು ಮಾಧ್ಯಮದವರು ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸದೇ ಪರ್ವೇಶ್ ವರ್ಮಾ ತೆರಳಿದ್ದಾರೆ.
ಇದನ್ನೂ ಓದಿ:ದೆಹಲಿ ಸಿಎಂ ರೇಸ್ನಲ್ಲಿ ಯಾರ್ ಯಾರ್ ಇದ್ದಾರೆ? ಬಿಜೆಪಿಯಿಂದ ಅಚ್ಚರಿ ಹೆಸರು ಘೋಷಣೆ ಆಗುತ್ತಾ?
ಈಗಾಗಲೇ ಹೇಳಿದಂತೆ ದೆಹಲಿಯ ಸಿಎಂ ಗದ್ದುಗೆ ಏರಲು ಹಲವರು ರೇಸ್ನಲ್ಲಿದ್ದಾರೆ. ರಮೇಶ್ ಬಿಧುರಿ, ಬನ್ಸುರಿ ಸ್ವರಾಜ್, ಸ್ಮೃತಿ ಇರಾನಿ ಹೀಗೆ ಸಾಲು ಸಾಲು ಹೆಸರುಗಳು ಕೇಳಿ ಬರುತ್ತಿವೆ. ಆದ್ರೆ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸ್ಥಳೀಯ ನಾಯಕರು ಕಾರ್ಯಕರ್ತರು ಹಾಗೂ ಶಾಸಕರೊಂದಿಗೆ ಮಾತುಕತೆ ನಡೆಸಿ ಸಿಎಂ ಆಯ್ಕೆಯನ್ನು ಮಾಡಲಿದ್ದಾರೆ ಬಿಜೆಪಿ ವರಿಷ್ಠರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ