ಟ್ರಿಪ್​ ಕ್ಯಾನ್ಸಲ್​ ಮಾಡದ್ದಕ್ಕೆ ಪ್ರಯಾಣಿಕನ ಮೇಲೆ ಆಟೋ ಚಾಲಕನಿಂದ ಹಲ್ಲೆ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

author-image
Harshith AS
Updated On
ಟ್ರಿಪ್​ ಕ್ಯಾನ್ಸಲ್​ ಮಾಡದ್ದಕ್ಕೆ ಪ್ರಯಾಣಿಕನ ಮೇಲೆ ಆಟೋ ಚಾಲಕನಿಂದ ಹಲ್ಲೆ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
Advertisment
  • ಬುಕ್ಕಿಂಗ್​ ಕ್ಯಾನ್ಸಲ್​​ ಮಾಡು ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ
  • ತಾಯಿಯ ಮುಂದೆಯೇ ಮಗನಿಗೆ ಹೊಡೆದ ಆಟೋ ಚಾಲಕ
  • ಸಿಸಿಟಿವಿ ದೃಶ್ಯದ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿದ ಪ್ರಯಾಣಿಕ

ಬೆಂಗಳೂರು: ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಬಳಿಕ ಪ್ರಯಾಣಿಕನ ಮೇಲೆಯೇ ಆಟೋ ಚಾಲಕ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಏನಿದು ಘಟನೆ?

ಪ್ರಯಾಣಿಕನೋರ್ವ ತನ್ನ ತಾಯಿಯ ಜೊತೆಗೆ ಆನ್​ಲೈನ್ ನಲ್ಲಿ ಆಟೋ ಬುಕ್ ಮಾಡಿದ್ದಾನೆ. ಆದರೆ ಆಟೋ ಚಾಲಕ ಬುಕ್ಕಿಂಗ್​ ಕ್ಯಾನ್ಸಲ್ ಮಾಡಿ ಆಫ್​ಲೈನ್ ಬರುವಂತೆ ಕೇಳಿದ್ದಾನೆ. ಅದಕ್ಕೆ ಪ್ರಯಾಣಿಕ ಆಫ್​ಲೈನ್ ಆಗಲ್ಲ ಎಂದಿದ್ದಕ್ಕೆ ಆಟೋ ಚಾಲಕ ಆತನ ಜೊತೆ ಗೂಂಡಾವರ್ತನೆ ತೋರಿಸಿದ್ದಾನೆ. ಮಾತ್ರವಲ್ಲದೆ, ಪ್ರಯಾಣಿಕ ಇದ್ದ ಸ್ಥಳಕ್ಕೆ ಬಂದು ಆಟೋದಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ.

ಪ್ರಯಾಣಿಕನಿಗೆ ಹಲ್ಲೆ

ಪ್ರಯಾಣಿಕ ತನ್ನ ತಾಯಿಯ ಜೊತೆಗೆ ಆಟೋ ರಿಕ್ಷಾಗೆ ಕಾದಿದ್ದಾನೆ. ಆದರೆ ಆಫ್​ಲೈನ್​ನಲ್ಲಿ ಬರುವ ವಿಚಾರಕ್ಕೆ ಸಂಭಂದಿಸಿ ಚಾಲಕ ತಾಯಿ ಮುಂದೆಯೇ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಾನೆ. ಇನ್ನು ಆಟೋ ಚಾಲಕನ ಗೂಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೇ ದೃಶ್ಯವನ್ನಿಟ್ಟುಕೊಂಡು ಪ್ರಯಾಣಿಕ ಟ್ವೀಟ್​​ ಮಾಡಿದ್ದಾನೆ. ಟ್ವೀಟ್​ನಲ್ಲಿ ನಗರ ಪೊಲೀಸರಿಗೆ ಪ್ರಯಾಣಿಕನ ದೂರು ಸಲ್ಲಿಸಿದ್ದಾನೆ. ಆಟೋ ಸಂಖ್ಯೆ ನಮೂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment