/newsfirstlive-kannada/media/post_attachments/wp-content/uploads/2024/12/Plane-Crash.jpg)
ಕಜಕಿಸ್ತಾನದ ಅಕಟು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರಂತ ಸಂಭವಿಸಿದೆ. 67 ಮಂದಿ ಪ್ರಯಾಣಿಕರಿದ್ದ ಅಜರ್ ಬೈಜಾನ್ ಏರ್‌ಲೈನ್ಸ್ J2-8243 ವಿಮಾನ ಪತನವಾಗಿದ್ದು, 38 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮವಾಗಿದ್ದಾರೆ. ವಿಮಾನ ಪತನವಾಗುವ ಕೊನೇ ಕ್ಷಣದ ದೃಶ್ಯ ಸೆರೆಯಾಗಿದ್ದು, ಮೈ ಜುಮ್ಮೆನ್ನಿಸುವಂತಿದೆ.
ಅಜರ್ ಬೈಜಾನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಕಜಕಿಸ್ತಾನದ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನ್ಯ್ ಹೋಗುತ್ತಿತ್ತು. ಮಂಜು ಕವಿದ ವಾತಾವರಣದ ಹಿನ್ನೆಲೆಯಲ್ಲಿ ಮಾರ್ಗಬದಲಾವಣೆ ಮಾಡಲಾಗಿತ್ತು. ಪೈಲಟ್ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಮನವಿ ಮಾಡಿದ್ದಾರೆ. ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಮನವಿ ಮಾಡಿದ ಕೆಲವೇ ಹೊತ್ತಿನಲ್ಲಿ ವಿಮಾನ ಪತನವಾಗಿದೆ.
ಪವಾಡ ಸದೃಶ್ಯ ರೀತಿ 29 ಪ್ರಯಾಣಿಕರು ಬಚಾವ್
ವಿಮಾನ ಅಪಘಾತಗಳಲ್ಲಿ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಆದರೆ ಕಜಕಿಸ್ತಾನದ ಈ ವಿಮಾನ ಪತನದ ಬಳಿಕ 29 ಪ್ರಯಾಣಿಕರು ಪ್ರಾಣಾಪಾಯದಿಂದ ಬದುಕಿರೋದು ಪವಾಡವೇ ಎನ್ನಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಆಗ್ನೇಯ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ.. SSLC, PUC ಅಭ್ಯರ್ಥಿಗಳಿಗೆ ಅವಕಾಶ
ಈ ವಿಮಾನದಲ್ಲಿ ಒಟ್ಟು 67 ಪ್ರಯಾಣಿಕರಿದ್ದರು. ವಿಮಾನ ಪತನವಾಗಿವುದಕ್ಕೂ ಕೆಲವೇ ಕ್ಷಣಗಳ ಮುನ್ನ ವಿಮಾನದೊಳಿಗೆ ಪರಿಸ್ಥಿತಿ ಹೇಗಿತ್ತು ಅನ್ನೋದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಆಕ್ಸಿಜನ್ ಮಾಸ್ಕ್ಗಳು ಓಪನ್ ಆಗಿದ್ದು, ಎಲ್ಲರೂ ಆತಂಕದಿಂದ ಚೀರಾಡುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ಕಜಕಿಸ್ತಾನದ ಭಯಾನಕ ವಿಮಾನ ದುರಂತಕ್ಕೆ ಇಂದು ಇಡೀ ವಿಶ್ವವೇ ಮರುಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಕೂಟ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:VIDEO: ಹೆಂಡ್ತಿ ಜೀವ ಉಳಿಸಲು VRS ತೆಗೆದುಕೊಂಡ ಗಂಡ; ರಿಟೈರ್ಮೆಂಟ್ ಪಾರ್ಟಿಯಲ್ಲೇ ಘೋರ ದುರಂತ
The final moments of the Azerbaijan Airlines plane before its crash in Kazakhstan were captured by a passenger onboard.
Aftermath also included in the footage. pic.twitter.com/nCRozjdoUY— Clash Report (@clashreport) December 25, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ