newsfirstkannada.com

ಪೈಲೆಟ್​​ ಮುಖಕ್ಕೆ ಗುದ್ದಿದ ಪ್ರಯಾಣಿಕ.. ವಿಮಾನದಲ್ಲೇ ಖ್ಯಾತೆ ತೆಗೆದು ಪಂಚ್ ಕೊಟ್ಟ ಕಿರಾತಕ..!

Share :

Published January 15, 2024 at 11:37am

    ದೆಹಲಿ-ಗೋವಾ IndiGo ವಿಮಾನದ ಗಲಾಟೆ

    ಪ್ರಯಾಣಿಕ ಶಶಿ ಕಟೆರಿಯಾನಿಂದ ಕಿರಿಕ್

    ಕಿರಿಕ್ ಪ್ರಯಾಣಿಕನ ವಶಕ್ಕೆ ಪಡೆದ ಪೊಲೀಸರು

ದೆಹಲಿ-ಗೋವಾ IndiGo ವಿಮಾನದ ಸಹ-ಕ್ಯಾಪ್ಟನ್​​ಗೆ ಪ್ರಯಾಣಿಕನೊಬ್ಬ ಹಲ್ಲೆ ಮಾಡಿ ರಂಪಾಟ ಮಾಡಿದ್ದಾನೆ. ಹಲ್ಲೆ ನಡೆಸಿರುವ ಪ್ರಯಾಣಿಕನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆಗಿದ್ದೇನು..?

ಚಳಿಗಾಲ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಪರಿತ ಚಳಿ ಮತ್ತು ಮಂಜು ಬೀಳುತ್ತಿದೆ. ಪರಿಣಾಮ ರೈಲು ಸಂಚಾರ, ವಿಮಾನಗಳ ಹಾರಾಟ, ವಾಹನಗಳ ಸಂಚಾರದಲ್ಲಿ ವ್ಯತ್ಯಯ ಆಗುತ್ತಿದೆ. ಅಂತೆಯೇ ಇಂಡಿಗೋ ವಿಮಾನ (6E-2175) ದೆಹಲಿಯಿಂದ ಗೋವಾಗೆ ಹೋಗೋದು ವಿಳಂಬ ಆಗಿದೆ. ಅದಾಗಲೇ ಬರೋಬ್ಬರಿ 13 ಗಂಟೆಗಳು ತಡವಾಗಿತ್ತು ಎನ್ನಲಾಗಿದೆ.

ಹವಾಮಾನ ವೈಪರಿತ್ಯದಿಂದ ವಿಮಾನದ ಹಾರಾಟ ಕಷ್ಟವಾದ ಹಿನ್ನೆಲೆಯಲ್ಲಿ 6E-2175 ವಿಮಾನದ ಪೈಲೆಟ್​, ಮಂಜಿನ ಕಾರಣ ವಿಮಾನ ಹಾರಾಟದಲ್ಲಿ ವ್ಯತ್ಯಯ ಆಗಲಿದೆ ಎಂದು ಅನೌನ್ಸ್ ಮಾಡಲು ಬಂದಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಪ್ರಯಾಣಿಕ ಪೈಲೆಟ್ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಅಲ್ಲಿದ್ದವರು ಆತನನ್ನು ತಡೆದಿದ್ದಾರೆ. ಓಡಿ ಬಂದು ಮುಖಕ್ಕೆ ಪಂಚ್ ನೀಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಶಿ ಕಟೆರಿಯಾ ಹಲ್ಲೆ ನಡೆಸಿದ ಪ್ರಯಾಣಿಕ. ಕೋ ಪೈಲಟ್ ಅನೂಪ್ ಕುಮಾರ್ ಮೇಲೆ ಹಲ್ಲೆಯಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಇತರೆ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ದೆಹಲಿಯಲ್ಲಿ ಮಂಜಿನ ಕಾರಣದಿಂದ 110 ವಿಮಾನಗಳ ಸಂಚಾರದಲ್ಲಿ ವಿಳಂಬ ಆಗಿದೆ. 79 ವಿಮಾನ ಸಂಚಾರ ರದ್ದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೈಲೆಟ್​​ ಮುಖಕ್ಕೆ ಗುದ್ದಿದ ಪ್ರಯಾಣಿಕ.. ವಿಮಾನದಲ್ಲೇ ಖ್ಯಾತೆ ತೆಗೆದು ಪಂಚ್ ಕೊಟ್ಟ ಕಿರಾತಕ..!

https://newsfirstlive.com/wp-content/uploads/2024/01/INDIGO.jpg

Load More