ಟೈಟಾನಿಕ ಮಾದರಿಯಲ್ಲೇ ಮತ್ತೊಂದು ದುರಂತ.. 280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ; VIDEO

author-image
Veena Gangani
Updated On
ಟೈಟಾನಿಕ ಮಾದರಿಯಲ್ಲೇ ಮತ್ತೊಂದು ದುರಂತ.. 280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ; VIDEO
Advertisment
  • ಉತ್ತರ ಸುಲವೇಸಿಯದ ತಾಲಿಸ್ ದ್ವೀಪದ ಬಳಿ ನಡೆದ ದುರಂತ
  • ಕೆಎಂ ಬಾರ್ಸಿಲೋನಾ ವಿಎ ಎಂಬ ಹಡಗಿನಲ್ಲಿ ಏಕಾಏಕಿ ಬೆಂಕಿ
  • ರಕ್ಷಣಾ ತಂಡ, ಮೀನುಗಾರರ ಸಹಾಯದಿಂದ 150 ಮಂದಿ ಸೇಫ್​​​

ಟೈಟಾನಿಕ್​ ಸಿನಿಮಾ ಮಾದರಿಯ ದುರಂತವೊಂದು ಇಂಡೋನೇಷಿಯಾದಲ್ಲಿ ನಡೆದಿದೆ. 280 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹಗಡು ಬೆಂಕಿಗಾಹುತಿ ಆಗಿದೆ. ಇದರಿಂದ ಜೀವ ಉಳಿಸಿಕೊಳ್ಳಲು ಜನರು ಸಮುದ್ರಕ್ಕೆ ಹಾರಿದ್ದು, ಐವರು ಜೀವಬಿಟ್ಟಿದ್ದಾರೆ.

ಇದನ್ನೂ ಓದಿ: ಬಿಂದಾಸ್​ ಬ್ಯೂಟಿ ದಾಂಪತ್ಯದಲ್ಲಿ ಬಿರುಕು.. ಪತಿಯಿಂದ ದೂರವಾಗಿ ಹನ್ಸಿಕಾ ಪ್ರತ್ಯೇಕ ವಾಸ!

publive-image

ಉತ್ತರ ಸುಲಾವೇಸಿಯಲ್ಲಿ 280 ಪ್ರಯಾಣಿಕರಿದ್ದ ಕೆಎಂ ಬಾರ್ಸಿಲೋನಾ 5 ಎಂಬ ಹಡಗು, ಅಗ್ನಿ ಅವಘಡಕ್ಕೆ ತುತ್ತಾಗಿದೆ. ಬೆಂಕಿ ಕಾಣಿಸಿದ ಹಿನ್ನಲೆ ಹಡಗಿನ ಡೆಕ್‌ಗಳಲ್ಲಿ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡ್ತಿದ್ದಂತೆ ಡಕ್​ನ ಮುಂಭಾಗದಲ್ಲಿ ಬೆಂಕಿಯು ಸ್ಫೋಟಗೊಂಡಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.

publive-image

ಹಡಗಿನಲ್ಲಿ ಬೆಂಕಿ ಕಾಣಿಸಿಕ್ತೊದ್ದಂತೆ ಭಯಭೀತರಾದ ಜನರು ಲೈಫ್​ ಜಾಕೆಟ್​​ ಹಾಕಿಕೊಡು ಸಮುದ್ರಕ್ಕೆ ನಗೆಯುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ. 300 ಪ್ರಯಾಣಿಕರಿದ್ದ ಹಡಗಿನಲ್ಲಿ 150 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ನಡೀತಿದೆ. ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.


">July 20, 2025

ಇನ್ನು, ಪುಟ್ಟು ಮಗುವನ್ನು ರಕ್ಷಣೆ ಮಾಡುವ ದೃಶ್ಯ ರೋಚಕವಾಗಿದೆ. ನೀರಿನ ಮಧ್ಯೆ ಮಹಿಳೆಯನ್ನ ಹಿಡಿದುಕೊಂಡು ಪುಟ್ಟ ಮಗು ಪರದಾಡ್ತಿದ್ದ ದೃಶ್ಯ ಮನ ಕಲಕುವಂತಿದೆ. ಇನ್ನೂ, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ರಕ್ಷಣಾ ತಂಡದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 20 ಮಂದಿ ನಾಪತ್ತೆ ಆದವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಕತ್ತಲಾದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment