Advertisment

Update; ಚಲಿಸುತ್ತಿದ್ದ ರೈಲಿನಿಂದ ಜಂಪ್.. 12 ಪ್ರಯಾಣಿಕರ ಜೀವ ಘೋರ ಅಂತ್ಯ

author-image
Bheemappa
Updated On
Update; ಚಲಿಸುತ್ತಿದ್ದ ರೈಲಿನಿಂದ ಜಂಪ್.. 12 ಪ್ರಯಾಣಿಕರ ಜೀವ ಘೋರ ಅಂತ್ಯ
Advertisment
  • ಚಲಿಸುತ್ತಿರುವ ರೈಲಿನಲ್ಲಿ ಬಿಸಿ ಗಾಳಿ ಬಂದಿರುವುದು ಹೇಗೆ?
  • ರೈಲಿನಿಂದ ಜಿಗಿದು ಮತ್ತೊಂದು ಹಳಿಗೆ ಬಿದ್ದ ಪ್ರಯಾಣಿಕರು
  • ಪ್ರಾಣ ಕಳೆದುಕೊಂಡ ಪ್ರಯಾಣಿಕರಿಗೆ ಸರ್ಕಾರದಿಂದ ಪರಿಹಾರ

ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಪುಷ್ಪಕ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಡಿತು. ಇದರಿಂದ ಆತಂಕಗೊಂಡ ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಂಪ್ ಮಾಡಿದ್ದಾರೆ. ಜಂಪ್ ಮಾಡಿದವರ ಪೈಕಿ 12 ಪ್ರಯಾಣಿಕರ ದೇಹಗಳು ಛಿದ್ರಗೊಂಡಿವೆ.

Advertisment

ಆಗ್ ಲಗ್ ಗಯಿ, ಆಗ್ ಲಗ್ ಗಯಿ. ಬೆಂಕಿ ಬಿದ್ದಿದೆ, ಬೆಂಕಿ ಬಿದ್ದಿದೆ ಎಂಬ ಸುಳ್ಳು ಮಾತಿನಿಂದ ರೈಲು ಪ್ರಯಾಣಿಕರು ಬಲಿಯಾಗಿದ್ದಾರೆ. ಸಂಜೆ 5 ಗಂಟೆ, ಪುಷ್ಪಕ್‌ ಎಕ್ಸ್‌ಪ್ರೆಸ್, ಉತ್ತರ ಪ್ರದೇಶದ ಲಕ್ನೋದಿಂದ ಮುಂಬೈಗೆ ಬಂದು ಸೇರಬೇಕಿತ್ತು. ಮಹಾರಾಷ್ಟ್ರ ಜಲಗಾಂವ್​ಗೆ ತಲುಪುತ್ತಿದ್ದಂತೆ ರೈಲಿನಿಂದ ಬಿಸಿ ಗಾಳಿ ಬಂದಿದೆ. ಈ ಬಿಸಿಗಾಳಿಯನ್ನೇ ಪ್ರಯಾಣಿಕರು ಬೆಂಕಿ ಎಂದು ಭಾವಿಸಿ ಚೈನ್‌ ಎಳೆದು ರೈಲು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಅಪಾಯದಿಂದ ಪಾರಾಗಲು ರೈಲಿನಿಂದ ಕೆಳಕ್ಕೆ ಜಿಗಿದವರು ಸೀದ ಯಮಲೋಕಕ್ಕೆ ಹೋಗಿ ಸೇರಿದ್ದಾರೆ.

publive-image

ಬೆಂಕಿ ವದಂತಿ, ಭಯದಲ್ಲಿ ಜಿಗಿದವರ ಮೇಲೆ ಹರಿದ ಟ್ರೇನ್

ಮೊದಲು ಪುಷ್ಪಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಿಸಿ ಗಾಳಿ ಕಾಣಿಸಿದೆ. ‘ಹಾಟ್ ಆಕ್ಸಲ್’ ಅಥವಾ ‘ಬ್ರೇಕ್-ಬೈಂಡಿಂಗ್’ ಜಾಮಿಂಗ್​ನಿಂದಾಗಿ ಕಿಡಿ ಹೊತ್ತಿರುವುದು ಕಂಡುಬಂದಿದೆ. ಇದನ್ನೇ ಕೆಲ ಪ್ರಯಾಣಿಕರು ರೈಲಿಗೆ ಬೆಂಕಿ ಬಿದ್ದಿದೆ ಅಂತ ಭಾವಿಸಿ ಚೈನ್‌ ಎಳೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಅಪಾಯದಿಂದ ಪಾರಾಗಲು ರೈಲಿನಿಂದ ಕೆಳಕ್ಕೆ ಜಿಗಿದು ಮತ್ತೊಂದು ಹಳಿಗೆ ಬಂದಿದ್ದಾರೆ. ಬಳಿಕ ನಡೆದಿದ್ದು, ಯಾರೂ ಊಹಿಸದ ಅಪಘಾತ.

ಮುಂಬೈನಿಂದ 400 ಕಿ.ಮೀ ದೂರದಲ್ಲಿರುವ ಪಚೋರಾ ಬಳಿಯ ಮಹೇಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತ ತಪ್ಪಿಸಲು ಎರಡೂ ರೈಲುಗಳ ಲೋಕೋ ಪೈಲಟ್​ ಪ್ರಯತ್ನಿಸಿದ್ದಾರೆ. ಪುಷ್ಪಕ್‌ ಎಕ್ಸ್‌ಪ್ರೆಸ್​​ನ ಲೋಕೋ ಪೈಲಟ್​​ ನಿಯಮದ ಪ್ರಕಾರ ಪ್ಲಾಷರ್​ ಲೈಟ್​ ಆನ್​ ಮಾಡಿದ್ದಾರೆ. ಪ್ಲಾಷರ್​ ಲೈಟ್​ ನೋಡಿದ ಕೂಡಲೇ ಕರ್ನಾಟಕ ಎಕ್ಸ್​ಪ್ರೆಸ್​ನ ರೈಲಿನ ಲೋಕೋ ಪೈಲಟ್​​ ಬ್ರೇಕ್​ ಹಾಕಿದ್ದಾರೆ. ಆದ್ರೆ, ಟ್ರ್ಯಾಕ್​ ತಿರುವು ಇದ್ದ ಕಾರಣ ರೈಲಿನ ವೇಗ ಕಡಿಮೆ ಆಗಿಲ್ಲ. ಪರಿಣಾಮ ಟ್ರ್ಯಾಕ್​ನ ಮೇಲೆ ಇದ್ದರ ಮೇಲೆ ಕರ್ನಾಟಕ ಎಕ್ಸ್​ಪ್ರೆಸ್​ ರೈಲು ಹರಿದಿದೆ. ಈ ಅವಘಡದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 12ಕ್ಕೆ ಏರಿಕೆ ಆಗಿದ್ದು, ಹಲವು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisment

ಈ ಅಪಘಾತದಲ್ಲಿ ಕಣ್ಮುಚ್ಚಿದ ವ್ಯಕ್ತಿಗಳ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ. ಅಷ್ಟೇ ಅಲ್ಲದೆ ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನ ಸರ್ಕಾರ ಭರಿಸಲಿದೆ ಅಂತಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ತಿಳಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಈ ಘಟನೆಯಲ್ಲಿ ಬದುಕುಳಿದ ಪ್ರತ್ಯಕ್ಷದರ್ಶಿ ವಿಶಾಲ್ ಜಾದವ್ ಮಾತನಾಡಿ, ನಡೆದ ಭೀಕರ ದುರಂತದ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: BJP ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ.. ಪಕ್ಷಕ್ಕೆ ಗುಡ್​ಬೈ ಹೇಳ್ತಾರಾ ಮಾಜಿ ಸಚಿವ ಶ್ರೀರಾಮುಲು?

publive-image

ಬ್ರೇಕ್ ಹಾಕಿದಾಗ ರೈಲಿನ ಚಕ್ರಗಳಿಂದ ಕಿಡಿಗಳು ಹಾರುತ್ತಿದ್ದವು. ಬೆಂಕಿ ಬಿದ್ದಿದೆ, ಬೆಂಕಿ ಬಿದ್ದಿದೆ ಎಂಬ ವದಂತಿ ಹರಡಿತು. ಬಳಿಕ 10 ರಿಂದ 15 ಜನ ಪ್ರಯಾಣಿಕರು ಭಯಭೀತರಾಗಿ ಹಳಿಗಳ ಮೇಲೆ ರೈಲಿನಿಂದ ಜಿಗಿಯಲು ಪ್ರಾರಂಭಿಸಿದರು. ಇದೇ ವೇಳೆ ಅನೇಕರು ಪ್ರಾಣ ಕಳೆದುಕೊಂಡರು.

ವಿಶಾಲ್ ಜಾದವ್, ಪ್ರತ್ಯಕ್ಷದರ್ಶಿ

Advertisment

ಕಣ್ಮುಚ್ಚಿದವರ ದೇಹವನ್ನ ಜೋಡಿಸೋದಕ್ಕೆ ವೈದ್ಯರು ಪರದಾಡುತ್ತಿದ್ದಾರೆ. ಕುಟುಂಬಸ್ಥರನ್ನ ಕಳೆದುಕೊಂಡ ಸಂಬಂಧಿಕರ ಆಕ್ರಂದನ ಹೇಳತೀರದಾಗಿದೆ. ಅದ್ಹೇನೆ ಹೇಳಿ ವದಂತಿಗೆ ಭಯ ಬಿದ್ದು 12 ಜನ ಪ್ರಾಣ ಕಳೆದುಕೊಂಡಿರುವುದು ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment