/newsfirstlive-kannada/media/post_attachments/wp-content/uploads/2025/06/air-india9.jpg)
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಮಾತ್ರ ಬದುಕಿ ಬಂದಿದ್ದಾರೆ.
ಇದನ್ನೂ ಓದಿ:ಬರೀ ‘‘MAYDAY.. MAYDAY’ ಅಲ್ಲ.. ಪತನದ ಕೊನೆ ಕ್ಷಣದಲ್ಲಿ ಪೈಲಟ್ ಹೇಳಿದ್ದೇನು? ಥ್ರಸ್ಟ್ ಅಂದರೇನು..?
ಇನ್ನೂ, ವಿಮಾನ ದುರಂತದ ನಿಖರ ಕಾರಣವನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಿದೆ. ಏರ್ ಇಂಡಿಯಾ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದು, 25 ಲಕ್ಷ ರೂ ಹೆಚ್ಚು ಮಾಡಿದೆ. ಈ ದುರಂತ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ದುಬೈನಿಂದ ಜೈಪುರದವರೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಹೋಗುತ್ತಿರೋ ನೂರಾರು ಪ್ರಯಾಣಿಕರು ಪ್ರಾಣ ಭಯದಲ್ಲಿದ್ದಾರೆ.
View this post on Instagram
ಹೌದು, ಏರ್ ಇಂಡಿಯಾ ವಿಮಾನ 1x196 ವಿಮಾನದ ಸಿಬ್ಬಂದಿ ಬೇಜವಬ್ದಾರಿಯಿಂದ ನೂರಾರು ಪ್ರಯಾಣಿಕರು ಪ್ರಾಣ ಭಯದಲ್ಲಿದ್ದಾರೆ. ವಿಮಾನ ಹಾರಾಟ ಆರಂಭಿಸಿ 5 ಗಂಟೆ ಕಳೆದರೂ ಎಸಿ (Air Conditioner) ಆನ್ ಆಗಿಲ್ಲ. ಆಕಾಶದಲ್ಲಿ ಹಾರಾಟ ನಡೆಸುವಾಗ ನೂರಾರು ಪ್ರಯಾಣಿಕರು ಬೆವರಿನಲ್ಲೇ ಮುಳುಗಿದ್ದರು. ಸೆಕೆ ತಾಳಲಾರದೆ ಬುಕ್, ಬಟ್ಟೆಯ ಮೊರೆ ಹೋಗಿದ್ದರು. ಅಷ್ಟೇ ಅಲ್ಲದೇ ಸಹಾಯಕ್ಕೆ ಏರ್ ಇಂಡಿಯಾ ಸಿಬ್ಬಂದಿಯನ್ನು ಕರೆದರು ಅವರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಹಿಳೆಯೊಬ್ಬರು ವಿಡಿಯೋ ಮಾಡುವ ಮೂಲಕ ತನ್ನ ಅಳಲನ್ನ ತೋಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ