VIDEO; ಪ್ರಯಾಗರಾಜ್​ಗೆ ಹೊರಟಿದ್ದ ವಿಶೇಷ ರೈಲಿಗೆ ಕಲ್ಲಿನಿಂದ ಹೊಡೆದ ಪ್ರಯಾಣಿಕ; ಕಾರಣವೇನು?

author-image
Gopal Kulkarni
Updated On
VIDEO; ಪ್ರಯಾಗರಾಜ್​ಗೆ ಹೊರಟಿದ್ದ ವಿಶೇಷ ರೈಲಿಗೆ ಕಲ್ಲಿನಿಂದ ಹೊಡೆದ ಪ್ರಯಾಣಿಕ; ಕಾರಣವೇನು?
Advertisment
  • ಪ್ರಯಾಗರಾಜ್​​ ವಿಶೇಷ ರೈಲಿಗೆ ರೊಚ್ಚಿಗೆದ್ದ ಪ್ರಯಾಣಿಕನಿಂದ ಕಲ್ಲೆಸೆತ
  • ಏಕಾಏಕಿ ನಡೆದ ಹಲ್ಲೆಯಿಂದ ಗಾಬರಿಗೊಂಡ ಪ್ರಯಾಣಿಕರಿಂದ ಕಿರುಚಾಟ
  • ಪ್ಲಾಟ್​ಫಾರ್ಮ್​ಗೆ ಬಂದ ರೈಲಿನ ಮೇಲೆ ಕಲ್ಲು ಎಸೆದಿದ್ದು ಏಕೆ ಪ್ರಯಾಣಿಕ?

ಜಾನ್ಸಿಯಿಂದ ಪ್ರಯಾಗರಾಜ್​ಗೆ ಹೊರಟಿದ್ದ ವಿಶೇಷ ರೈಲಿನ ಮೇಲೆ ಪ್ರಯಾಣಿಕನೊಬ್ಬ ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದಾನೆ. ಈ ಒಂದು ಘಟನೆ ಹರ್ಪಲ್​ಪುರ್ ರೇಲ್ವೆ ಸ್ಟೇಷನ್​ನಲ್ಲಿ ನಡೆದಿದೆ. ಪ್ರಯಾಗರಾಜ್​ಗೆ ಹೊರಟಿದ್ದ ರೈಲಿಗಾಗಿ ಪ್ಯಾಸೆಂಜರ್​ ಪ್ಲಾಟ್​ಫಾರ್ಮ್​​ನಲ್ಲಿ ಕಾಯುತ್ತಿದ್ದ ಈ ವೇಳೆ ಟ್ರೈನ್ ಬಂದರು ಕೂಡ ಅದರ ಬಾಗಿಲುಗಳು ಬಂದ್ ಆಗಿದ್ದವು ಇದರಿಂದ ರೊಚ್ಚಿಗೆದ್ದ ಪ್ರಯಾಣಿಕ ಕಲ್ಲಿನಿಂದ ರೈಲಿನ ಡೋರ್​​ಗೆ ಹೊಡೆದಿದ್ದಾನೆ. ಇದರಿಂದ ಒಳಗಿದ್ದ ಪ್ರಯಾಣಿಕರೆಲ್ಲರು ಬೆಚ್ಚಿ ಬಿದ್ದಿದ್ದಾರೆ.

ಸದ್ಯ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಯಾಣಿಕರು ಹೇಳುವ ಪ್ರಕಾರ ನಿನ್ನೆ ಜಾನ್ಸಿಯಿಂದ ಪ್ರಯಾಗರಾಜ್​ನತ್ತ ವಿಶೇಷ ರೈಲು ರಾತ್ರಿ 8 ಗಂಟೆಗೆ ಹೊರಟಿತ್ತು. ಯಾವಾಗ ಹರ್ಪಲ್​ಪುರ್​ಕ್ಕೆ ಟ್ರೈ ನ್​ ತಲುಪಿತೋ ಅಲ್ಲಿ ಕಲ್ಲು ತೂರಾಟ ನಡೆಯಿತು. ಕಲ್ಲಿನಿಂದ ಟ್ರೈನ್​ ಹೊಡೆದು ರೈಲಿಗೆ ಹಾನಿ ಮಾಡಿದ. ಅವರು ಪ್ರಯಾಣಿಕರನ್ನು ಕೊಲ್ಲಲು ಪ್ರಯತ್ನ ಮಾಡಿದರು. ಒಳಗಡೆ ಮಕ್ಕಳು ಮಹಿಳೆಯರು ಇದ್ದರು. ಕಲ್ಲು ಎಸೆತ ಶುರುವಾದ ಕೂಡಲೇ ಎಲ್ಲರೂ ಕಿಟಕಿಯ ಡೋರ್​ಗಳನ್ನು ಮುಚ್ಚಿಕೊಂಡರು ಎಂದು ಹೇಳಲಾಗಿದೆ.

ಇದನ್ನೂ ಓದಿ:ಮೌನಿ ಅಮವಾಸ್ಯೆ ಪ್ರಯುಕ್ತ ದಶದಿಕ್ಕುಗಳಿಂದ ಭಕ್ತರ ಆಗಮನ; ರೈಲ್ವೆ ಇಲಾಖೆಯಿಂದ ವ್ಯವಸ್ಥೆಯಾದ ಟ್ರೈನ್​ಗಳ ಸಂಖ್ಯೆಯಷ್ಟು?

ಆದರೆ ವರದಿಯ ಪ್ರಕಾರ ಹರ್ಪಲ್​ಪುರ್ ರೈಲ್ವೆ ಸ್ಟೇಷನ್​ನಲ್ಲಿ ಪ್ರಯಾಗರಾಜ್​ ರೈಲಿಗಾಗಿ ಅನೇಕ ಪ್ರಯಾಣಿಕರು ಕಾಯುತ್ತಿದ್ದರು. ಟ್ರೈನ್ ಬಂದ ವೇಳೆ ಎಲ್ಲರಿಗೂ ಒಳಗೆ ಹೋಗುವ ಅವಸರವಿತ್ತು. ಆದ್ರೆ ಟ್ರೈನ್​​ನ ಬಾಗಿಲುಗಳು ಲಾಕ್ ಆಗಿದ್ದ ಕಾರಣ ವ್ಯಕ್ತಿಯೊಬ್ಬ ಸಹನೆ ಕಳೆದುಕೊಂಡು ಕಲ್ಲಿನಿಂದ ಟ್ರೈನ್​ನ ಬಾಗಿಲಿಗೆ ಹೊಡೆದಿದ್ದಾನೆ. ಆಗ ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಕೂಗಾಟ, ಚೀರಾಟ ನಡೆಸಿದ್ದಾರೆ. ಕೂಡಲೇ ಕಿಟಕಿಯ ಬಾಗಿಲುಗಳನ್ನು ಕ್ಲೋಸ್ ಮಾಡಿಕೊಂಡಿದ್ದಾರೆ.


">January 28, 2025

ಇನ್ನು ಹರ್ಪಲ್​ಪುರ್​​ದ ರೈಲ್ವೆ ವಿಭಾಗದ ವಕ್ತಾರ ಹೇಳುವ ಪ್ರಕಾರ, ನಡುರಾತ್ರಿ 2 ಗಂಟೆಗೆ ರೈಲು ಹರ್ಪಲ್​ಪುರ ಬಂದು ತಲುಪಿತು. ಟ್ರೈನ್ ಒಳಗೆ ಹೋಗಲೆಂದು ಪ್ರಯಾಣಿಕರು ಪ್ರಯತ್ನಿಸಿದ್ದಾರೆ. ಈ ವೇಳೆ ಟ್ರೈನ್ ಡೋರ್​ಗಳು ಲಾಕ್ ಆಗಿದ್ದ ಕಾರಣ ರೊಚ್ಚಿಗೆದ್ದ ವ್ಯಕ್ತಿಯಿಂದ ಈ ಘಟನೆ ನಡೆದಿದೆ. ಕೂಡಲೇ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಶಾಂತಗೊಳಿಸಿ ಅವರ ಪ್ರಯಾಣಕ್ಕೆ ಆಗಬೇಕಾದ ವ್ಯವಸ್ಥೆ ಮಾಡಿದ್ದಾರೆ. ಕೆಲವೊಮ್ಮೆ ಇಂತಹ ಸಮಸ್ಯೆಗಳು ಆಗುತ್ತವೆ. ದಯವಿಟ್ಟ ಪ್ರಯಾಣಿಕರು ಆದಷ್ಟು ಶಾಂತರೀತಿಯಿಂದ ಇದ್ದು ಸರಳವಾದ ಪ್ರಯಾಣ ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ವಕ್ತಾರ ಮನೋಜ್ ಸಿಂಗ್ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment