/newsfirstlive-kannada/media/post_attachments/wp-content/uploads/2024/04/PAT-7.jpg)
ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್​ನಲ್ಲಿ ಸಖತ್ ಪ್ರದರ್ಶನ ನೀಡ್ತಿದೆ. 7 ಪಂದ್ಯಗಳನ್ನು ಆಡಿರುವ ಹೈದರಾಬಾದ್​ ತಂಡವು ಐದರಲ್ಲಿ ಗೆದ್ದು ಪಾಯಿಂಟ್ಸ್​ ಟೇಬಲ್​​ನಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡದ ಅದ್ಭುತ ಪ್ರದರ್ಶನದ ಜೊತೆಗೆ ಅವರ ಬೌಲಿಂಗ್​ ಕೂಡ ಸಾಕಷ್ಟು ಪ್ರಭಾವ ಬೀರಿದೆ.
ಇದನ್ನೂ ಓದಿ:ಐಪಿಎಲ್ ಪ್ರಿಯರಿಗೆ ಬಿಗ್ ಶಾಕ್ ನೀಡಲು ಮುಂದಾದ Jio Cinema..!
/newsfirstlive-kannada/media/post_attachments/wp-content/uploads/2024/04/PAT-5.jpg)
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ, ಹೈದರಾಬಾದ್ ತಂಡವನ್ನೂ ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗ್ತಿದ್ದಾರೆ.
ಇದನ್ನೂ ಓದಿ:ನೇಹಾ ಹಿರೇಮಠ ಕೇಸ್ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸ್ತೇವೆ -ಸುರ್ಜೇವಾಲಾ ಭರವಸೆ
/newsfirstlive-kannada/media/post_attachments/wp-content/uploads/2024/04/PAT-4.jpg)
ಕ್ಯಾಪ್ಟನ್ಸಿ ಮತ್ತು ಬೌಲಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿರುವ ಕಮ್ಮಿನ್ಸ್​, ನಿಜ ಜೀವನದಲ್ಲಿ ಸಂಗಾತಿಯ ಮನಸ್ಸು ಕದ್ದಿರುವ ಕತೆ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಕಮ್ಮಿನ್ಸ್ ಪತ್ನಿಯ ಹೆಸರು ಬೆಕಿ ಬೋಸ್ಟನ್ (Becky Boston). ಇಬ್ಬರ ಪ್ರೀತಿಯ ಕಹಾನಿ ಸಿನಿಮಾವನ್ನೂ ಮೀರಿಸುವಂತಿದೆ.
/newsfirstlive-kannada/media/post_attachments/wp-content/uploads/2024/04/PAT-2.jpg)
ಕಮ್ಮಿನ್ಸ್ ಹಾಗೂ ಬೆಕಿ 2022ರಲ್ಲಿ ಎಂಗೇಜ್ ಆದರು. ಪಿಕ್ನಿಕ್ ಸ್ಪಾಟ್​​ ಒಂದರಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಮ್ಮಿನ್ಸ್​ ತಾವು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡಿದ್ದರಂತೆ. ಇದನ್ನು ಖುದ್ದ ಬೆಕಿ ಬೋಸ್ಟನ್ ಅವರೇ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/PAT-1.jpg)
ವಾಸ್ತವವಾಗಿ, ಇಬ್ಬರು ಮದುವೆಯಾಗಲು ಬಯಸಿದ್ದರು. ಆದರೆ ಕೊರೊನಾ ವೈರಸ್ ಕಾಟದಿಂದ ಮದುವೆ ವಿಳಂಬವಾಯಿತು. ಇದೇ ಸಮಯದಲ್ಲಿ ಅವರು ಮದುವೆಗೂ ಮೊದಲೇ ಪೋಷಕರಾದರು. ಇವರಿಬ್ಬರಿಗೆ ಮುದ್ದಾದ ಮಗನಿದ್ದಾನೆ. ಬೆಕಿ ಅವರು ಇಂಗ್ಲೆಂಡ್‌ನ ಬೋಸ್ಟನ್ ನಿವಾಸಿ. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಬೆಕಿ ಬೋಸ್ಟನ್, ಕಮ್ಮಿನ್ಸ್​ಗಿಂತ ಸುಮಾರು ಎರಡೂವರೆ ವರ್ಷ ಹಿರಿಯರು.
/newsfirstlive-kannada/media/post_attachments/wp-content/uploads/2024/04/PAT.jpg)
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us