SRHಗೆ ಅರ್ಧದಲ್ಲೇ ಕೈಕೊಟ್ರಾ ಕ್ಯಾಪ್ಟನ್..? ಸಂಚಲನ ಸೃಷ್ಟಿಸಿದ ಕಮ್ಮಿನ್ಸ್​ ಪತ್ನಿಯ ಪೋಸ್ಟ್..!

author-image
Ganesh
Updated On
SRH ತಂಡಕ್ಕೆ ಕ್ಯಾಪ್ಟನ್​ ಯಾರಾಗ್ತಾರೆ.. ನಾಯಕ ಕಮಿನ್ಸ್​ ದಿಢೀರ್​ ಅಂತ ತವರಿಗೆ ಹೋಗಿ ಬಿಟ್ರಾ?
Advertisment
  • ಐಪಿಎಲ್​ ಸೆಕೆಂಡ್ ಹಾಫ್ ಆಡಲ್ವಾ ಪ್ಯಾಟ್ ಕಮಿನ್ಸ್​?
  • ತವರಿಗೆ ಹಾರಿದ್ರಾ ಸನ್​ರೈಸರ್ಸ್ ಹೈದ್ರಾಬಾದ್​ ಕ್ಯಾಪ್ಟನ್?
  • ಪತ್ನಿ ರೆಬೆಕಾ ನಿಗೂಢ ಪೋಸ್ಟ್​ ಹಿಂದಿನ ಮರ್ಮವೇನು?

ಸತತ ಸೋಲುಗಳಿಂದ ಕಂಗ್ಗಟ್ಟಿರುವ ಸನ್ ರೈಸರ್ಸ್ ಹೈದ್ರಾಬಾದ್, ಫ್ಲೇ ಆಫ್​​​ ಎಂಟ್ರಿಗೆ ದಾರಿಯ ಹುಡುಕಾಟದಲ್ಲಿದೆ. ಇದ್ರ ನಡುವೆ ಸನ್ ರೈಸರ್ಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್​, ಪತ್ನಿ ಮಾಡಿರೋ ಒಂದು ಒಂದು ಪೋಸ್ಟ್ ಆರೆಂಜ್ ಆರ್ಮಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಫ್ಯಾನ್ಸ್​ ವಲಯದಲ್ಲಿ ಯಾರ್ ಆಗ್ತಾರೆ ಹೈದ್ರಾಬಾದ್ ಕ್ಯಾಪ್ಟನ್ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಗುಡ್​ ಬೈ ಇಂಡಿಯಾ’

ಗುಡ್​ ಬೈ ಇಂಡಿಯಾ.. ನಾವು ಈ ಅದ್ಭುತ ದೇಶಕ್ಕೆ ಮತ್ತೊಮ್ಮೆ ಭೇಟಿ ನೀಡಲು ಇಷ್ಟಪಡುತ್ತೇವೆ-ರೆಬೆಕಾ ಕಮಿನ್ಸ್​ , ಕಮಿನ್ಸ್ ಪತ್ನಿ
ಪ್ಯಾಟ್ ಕಮಿನ್ಸ್​ ಪತ್ನಿ ರೆಬೆಕಾ ಮಾಡಿರೋ ಈ ಒಂದು ಪೋಸ್ಟ್ ಸನ್​ರೈಸರ್ಸ್​ ಹೈದ್ರಾಬಾದ್ ಅಭಿಮಾನಿಗಳ ವಲಯವನ್ನ ತಲ್ಲಣಗೊಳಿಸಿದೆ. ಮುಂಬೈನ ಏರ್​​ಪೋರ್ಟ್​ನಲ್ಲಿ ನಿಂತು ರೆಬೆಕಾ ಈ ಪೋಸ್ಟ್​ ಹಾಕಿದ್ದಾರೆ. ​ಈ ಪೋಸ್ಟ್​ನಲ್ಲಿ ಪ್ಯಾಟ್​ ಕಮಿನ್ಸ್​ ಕೂಡ ಕಾಣಿಸಿಕೊಂಡಿದ್ದಾರೆ. ಐಪಿಎಲ್​ ಟೂರ್ನಿ ಮಧ್ಯೆ ಹಾಕಿರೋ ಈ ಗುಡ್​ ಬೈ ಪೋಸ್ಟ್​ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಆರ್​ಸಿಬಿ ಸೋಲಿಗೆ 5 ಪ್ರಮುಖ ಕಾರಣ.. ಕೊಹ್ಲಿ ಒಬ್ಬರೇ ಅಲ್ಲ..!

ರೆಬೆಕಾ ನಿಗೂಢ ಪೋಸ್ಟ್​ ಹಿಂದಿನ ಮರ್ಮವೇನು?

ಫಸ್ಟ್ ಹಾಫ್​ನಲ್ಲಿ ತಂಡವನ್ನು ಮುನ್ನಡೆಸಿದ್ದ ಪ್ಯಾಟ್ ಕಮಿನ್ಸ್​, ತವರಿಗೆ ವಾಪಾಸ್ಸಾಗ್ತಿದ್ದಾರಾ ಎಂಬ ಚರ್ಚೆ ಕ್ರಿಕೆಟ್​ ವಲಯದಲ್ಲಿ ನಡೀತಿದೆ. ಉಳಿದ 7 ಪಂದ್ಯಗಳನ್ನ ಆಡಲ್ವಾ? ಐಪಿಎಲ್​ನಿಂದ ದೂರ ಸರಿಯುತ್ತಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳು ಕಾಡ್ತಿವೆ. ಏರ್​​ಪೋರ್ಟ್​ನಲ್ಲಿ ಪ್ಯಾಟ್​ ಕಮಿನ್ಸ್​ ಕಾಣಿಸಿಕೊಂಡಿರೋದು, ಪತ್ನಿ ಗುಡ್​ ಬೈ ಪೋಸ್ಟ್​ ಹಾಕಿರೋದು ಅದ್ರಲ್ಲಿ ನಾವು ಎಂದು ಮೆನ್ಷನ್​ ಮಾಡಿರೋದು ಈ ಚರ್ಚೆಗಳಿಗೆ ಕಾರಣವಾಗಿರೋದು.

ಬೇಸರದಲ್ಲಿ ಹೊರ ನಡೆದ್ರಾ?

ಈ ಸೀಸನ್​ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​ ತಂಡ ಅತ್ಯಂತ ಹೀನಾಯ ಪರ್ಫಾಮೆನ್ಸ್​ ನೀಡಿದೆ. ಕಳೆದ ಸೀಸನ್​​ನಲ್ಲಿ ಅಬ್ಬರಿಸಿದ್ದ ಹೈದ್ರಾಬಾದ್​​, ರನ್ನರ್​ಅಪ್​ ಆಗಿ ಹೊರಹೊಮ್ಮಿತ್ತು. ಆದ್ರೆ, ಈ ಸೀಸನ್​ನಲ್ಲಿ ಗೆಲುವಿಗಾಗಿ ತಿಣುಕಾಡ್ತಿದೆ. ಆಬ್​ ಕಿ ಬಾರ್​ ತೀನ್ ​ಸೋ ಪಾರ್​ ಎಂದು ಸೀಸನ್​ ಆರಂಭಿಸಿ 100 ರನ್​ಗಳ ಗಡಿ ದಾಟೋದಕ್ಕೂ ತಿಣುಕಾಡ್ತಿದೆ. ತಂಡದ ಈ ಫ್ಲಾಪ್​ ಶೋನಿಂದ ಬೇಸರಗೊಂಡು ಪ್ಯಾಟ್​ ಕಮಿನ್ಸ್​ ಟೂರ್ನಿಯ ಮಧ್ಯವೇ ತವರಿಗೆ ವಾಪಾಸ್ಸಾದ್ರಾ ಅನ್ನೋ ಚರ್ಚೆಯೂ ನಡೀತಿದೆ.

ಇದನ್ನೂ ಓದಿ: 7 ಇನ್ನಿಂಗ್ಸ್​​ನಲ್ಲಿ ಈ ಸ್ಟಾರ್​ ಬ್ಯಾಟ್​​ನಿಂದ ಬಂದ ಸ್ಕೋರ್ ಜಸ್ಟ್ 24 -ಭಾರೀ ಆಕ್ರೋಶ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment