/newsfirstlive-kannada/media/post_attachments/wp-content/uploads/2025/04/Pat_Cummins_WIFE.jpg)
ಸನ್ರೈಸರ್ಸ್ ಹೈದ್ರಾಬಾದ್ ತಂಡ ಈ ವರ್ಷದ ರಾಜಸ್ಥಾನ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ 286 ರನ್ ಗಳಿಸಿ ದಾಖಲೆ ಬರೆದಿತ್ತು. ಆದರೆ ಇದಾದ ಮೇಲೆ ಆಡಿದ ಪಂದ್ಯಗಳಲ್ಲಿ ತೀರ ಹೀನಾಯ ಸ್ಥಿತಿಗೆ ತಲುಪಿದೆ. ಏಕೆಂದರೆ ಈಗಾಗಲೇ ಟೂರ್ನಿಯಲ್ಲಿ 7 ಪಂದ್ಯ ಆಡಿದ ಎಸ್ಆರ್ಹೆಚ್ 5 ಪಂದ್ಯಗಳಲ್ಲಿ ಸೋತಿದೆ. ಪರಿಸ್ಥಿತಿ ಹೀಗಿರುವಾಗಲೇ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ತವರಿಗೆ ಮರಳಿದ್ದಾರೆ ಎನ್ನಲಾಗುತ್ತಿದೆ.
ಹೈದ್ರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ಅವರ ಹೆಂಡತಿ ಜೊತೆ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಐಪಿಎಲ್ನಲ್ಲಿ 7 ಪಂದ್ಯಗಳನ್ನು ಆಡಿರುವ ಹೈದ್ರಾಬಾದ್ ಇನ್ನು 7 ಪಂದ್ಯಗಳನ್ನು ಆಡಬೇಕಿದೆ. ಆದ್ರೆ ತಂಡದ ನಾಯಕನಾಗಿದ್ದ ಕಮಿನ್ಸ್ ಅವರು ತವರಿಗೆ ಹೋದ್ರೆ, ತಂಡದ ನಾಯಕ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ
ಪ್ಯಾಟ್ ಕಮಿನ್ಸ್ ಸನ್ ರೈಸರ್ಸ್ ತಂಡದ ಸಕ್ಸಸ್ಫುಲ್ ಕ್ಯಾಪ್ಟನ್. ನಾಯಕತ್ವದ ಚುಕ್ಕಾಣಿ ಹಿಡಿದ ಮೊದಲ ಸೀಸನ್ನಲ್ಲೇ ತಂಡವನ್ನ ರನ್ನರ್ಅಪ್ ಮಾಡಿದ ಹೀರೋ. ಈ, ಯಶಸ್ವಿ ನಾಯಕನೇ ತಂಡದಿಂದ ದೂರ ನಡೆದ್ರೆ, ಯಾರು ಕ್ಯಾಪ್ಟನ್ ಆಗ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಕಾಡ್ತಿದೆ. ಟಿ20 ಸ್ಪೆಷಲಿಸ್ಟ್ ಹೆನ್ರಿಚ್ ಕ್ಲಾಸೆನ್ ಹೆಸರು ಮುನ್ನಲೆಗೆ ಬಂದಿದೆ. ಯುವ ಆಲ್ರೌಂಡರ್ ನಿತಿಶ್ ಕುಮಾರ್ ರೆಡ್ಡಿ, ಇಶನ್ ಕಿಶನ್ ಹೆಸರು ಕೂಡ ಚರ್ಚೆಯಲ್ಲಿದೆ.
ಪ್ಯಾಟ್ ಕಮಿನ್ಸ್ ತವರಿಗೆ ವಾಪಾಸ್ಸಾಗಿದ್ದಾರೋ, ತಂಡದ ಜೊತೆಯಲ್ಲೇ ಉಳಿದಿದ್ದಾರೋ ಅನ್ನೋದರ ಬಗ್ಗೆ ಈವರೆಗೆ ಯಾವುದೇ ಕ್ಲಾರಿಟಿ ಸಿಕ್ಕಿಲ್ಲ. ಆದ್ರೆ, ಪ್ಯಾಟ್ ಪತ್ನಿ ಹಂಚಿಕೊಂಡ ಪೋಸ್ಟ್ ಮಾತ್ರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮುಂದಿನ ಪಂದ್ಯದೊಳಗೆ ಈ ಸುದ್ದಿಗೆ ಅಧಿಕೃತ ಉತ್ತರ ಸಿಗಲಿದೆ.
‘ಗುಡ್ ಬೈ ಇಂಡಿಯಾ’
ಗುಡ್ ಬೈ ಇಂಡಿಯಾ.. ನಾವು ಈ ಅದ್ಭುತ ದೇಶಕ್ಕೆ ಮತ್ತೊಮ್ಮೆ ಭೇಟಿ ನೀಡಲು ಇಷ್ಟಪಡುತ್ತೇವೆ- ರೆಬೆಕಾ ಕಮಿನ್ಸ್ , ಪ್ಯಾಟ್ ಕಮಿನ್ಸ್ ಹೆಂಡತಿ.
ಪ್ಯಾಟ್ ಕಮಿನ್ಸ್ ಪತ್ನಿ ರೆಬೆಕಾ ಮಾಡಿರುವ ಈ ಒಂದು ಪೋಸ್ಟ್ ಸನ್ರೈಸರ್ಸ್ ಹೈದ್ರಾಬಾದ್ ಅಭಿಮಾನಿಗಳ ವಲಯವನ್ನ ತಲ್ಲಣಗೊಳಿಸಿದೆ. ಮುಂಬೈ ಏರ್ಪೋರ್ಟ್ನಲ್ಲಿ ನಿಂತು ರೆಬೆಕಾ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಪ್ಯಾಟ್ ಕಮಿನ್ಸ್ ಕೂಡ ಇದ್ದಾರೆ. ಹೀಗಾಗಿ ಕಮಿನ್ಸ್ ತಮ್ಮ ದೇಶಕ್ಕೆ ವಾಪಸ್ ಹೋಗಿದ್ದಾರೋ, ಇಲ್ವೋ ಎನ್ನುವುದು ಸ್ಪಷ್ಟವಾಗಿಲ್ಲ. ಐಪಿಎಲ್ ಟೂರ್ನಿ ಮಧ್ಯೆ ಹಾಕಿರುವ ಈ ಗುಡ್ ಬೈ ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ