ಭಾರತೀಯ ಸೇನೆಗೆ ವಿದೇಶಿ ಕ್ರಿಕೆಟಿಗರಿಂದ ವಿಶೇಷ ಗೌರವ.. ದಿಗ್ಗಜ ಸ್ಟಾರ್​ಗಳಿಂದ ಸೆಲ್ಯೂಟ್..!

author-image
Ganesh
Updated On
ಭಾರತೀಯ ಸೇನೆಗೆ ವಿದೇಶಿ ಕ್ರಿಕೆಟಿಗರಿಂದ ವಿಶೇಷ ಗೌರವ.. ದಿಗ್ಗಜ ಸ್ಟಾರ್​ಗಳಿಂದ ಸೆಲ್ಯೂಟ್..!
Advertisment
  • ಇಂದಿನಿಂದ ಐಪಿಎಲ್-2025 ಪುನರ್ ಆರಂಭ ಆಗಿದೆ
  • ಭಾರತೀಯ ಸೇನೆಗೆ ಸೆಲ್ಯೂಟ್ ಹೊಡೆದ ವಿದೇಶಿ ಕ್ರಿಕೆಟಿಗರು
  • ಭಾರತ-ಪಾಕ್ ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಂದ್ಯ ಸಸ್ಪೆಂಡ್

9 ದಿನಗಳ ವಿರಾಮದ ನಂತರ ಐಪಿಎಲ್ 2025 ಮತ್ತೆ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಪಂದ್ಯಾವಳಿ ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ನಿಗದಿಯಂತೆ ಇಂದು ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್​ಸಿಬಿ ಪಂದ್ಯ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ವಿಳಂಬ ಆಗಿದೆ.

ಐಪಿಎಲ್ ಪುನರ್ ಆರಂಭ ಹಿನ್ನೆಲೆಯಲ್ಲಿ ಎಲ್ಲಾ ಹತ್ತು ತಂಡಗಳು ಮತ್ತೆ ಒಂದಾಗಿವೆ. ಈ ಮಧ್ಯೆ ವಿದೇಶಿ ಆಟಗಾರರು ಭಾರತೀಯ ಸೇನೆಗೆ ಗೌರವ ಸಲ್ಲಿಸುತ್ತಿದ್ದಾರೆ. ಯುದ್ಧದಂತಹ ಪರಿಸ್ಥಿತಿ ಉದ್ಭವಿಸಿದ ಕೆಲವು ದಿನಗಳ ನಂತರ ಐಪಿಎಲ್ 2025 ಮತ್ತೆ ಪ್ರಾರಂಭವಾಗುವ ಹಿಂದಿನ ಶಕ್ತಿಯೇ ಭಾರತೀಯ ಸೇನೆ. ಅದಕ್ಕೆ ವಿದೇಶಿ ಆಟಗಾರರು ಭಾರತೀಯ ಸೇನೆಗೆ ಧನ್ಯವಾದ ಹೇಳ್ತಿದ್ದಾರೆ.

ಇದನ್ನೂ ಓದಿ: ಆರ್​ಸಿಬಿಯಲ್ಲಿ ಈಗ ಮತ್ತೊಬ್ಬ ಕನ್ನಡಿಗ.. ಬ್ಯಾಟಿಂಗ್​ ವಿಭಾಗಕ್ಕೆ ಬಂದಿದೆ ಸೂಪರ್ ಪವರ್​..!

ಇಂಗ್ಲೆಂಡ್‌ನ ದಂತಕಥೆ ಕ್ರಿಕೆಟಿಗ ಕೆವಿನ್ ಪೀಟರ್ಸನ್.. ಐಪಿಎಲ್-2025ರ ಎಲ್ಲಾ ತಂಡ ನಾಯಕರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಉತ್ಸಾಹ ಇಂದಿನಿಂದ ಮತ್ತೆ ಪ್ರಾರಂಭವಾಗಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಅದೇ ಚಿತ್ರವನ್ನು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ನೀಡಲಾದ ಸಂದೇಶವೆಂದರೆ, ‘ಇಂದು ಒಂದು ಶತಕೋಟಿ ಜನರು ಮತ್ತೆ ಒಂದಾಗಿದ್ದಾರೆ. ನಿಮ್ಮ ಶೌರ್ಯದಿಂದ ನಮಗೆಲ್ಲರಿಗೂ ಸ್ಫೂರ್ತಿ ನೀಡಿದ್ದಕ್ಕಾಗಿ ಭಾರತೀಯ ಸೇನೆಗೆ ಧನ್ಯವಾದಗಳು ಅಂತಾ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: 30 ಲಕ್ಷ ರೂ ಮೇಲ್ಪಟ್ಟ ಆಸ್ತಿ‌ ಖರೀದಿ‌ ಮೇಲೆ ಇನ್ಮುಂದೆ IT ಕಣ್ಣು.. ಈ ವಿಚಾರ ನಿಮಗೆ ಗೊತ್ತಿರಲಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment