newsfirstkannada.com

×

ಫೀಲ್ಡಿಂಗ್​ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್​​ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್​..!

Share :

Published April 6, 2024 at 9:25am

    ಚೆನ್ನೈ ಮತ್ತು ಹೈದ್ರಾಬಾದ್ ತಂಡಗಳ ನಡುವೆ ಐಪಿಎಲ್ ಪಂದ್ಯ

    ಎಸ್​ಆರ್​ಹೆಚ್​ ವಿರುದ್ಧ ಹೀನಾಯವಾಗಿ ಸೋತ ಸಿಎಸ್​​ಕೆ

    19ನೇ ಓವರ್​ನಲ್ಲಿ ಜಡೇಜಾ, ಕಮ್ಮಿನ್ಸ್ ವಿವಾದ ಏನು..?

ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​, ಸನ್​ ರೈಸರ್ಸ್​​ ಹೈದ್ರಾಬಾದ್​ ವಿರುದ್ಧ ಸೋಲನ್ನು ಕಂಡಿದೆ. ಟಾಸ್​ ಸೋತು ಬ್ಯಾಟ್​ ಮಾಡಿದ್ದ ಸಿಎಸ್​​ಕೆ ನಿಗದಿತ ಓವರ್​ಗಳಲ್ಲಿ 165 ರನ್​​ ನೀಡಿತ್ತು. ಶಿವಂ ದುಬೆ ಅವರು 24 ಬಾಲ್​​ನಲ್ಲಿ 45 ರನ್​​ ಸಿಡಿಸಿ ಚೆನ್ನೈ ಸೂಪರ್​ ಕಿಂಗ್ಸ್​​ನ ಮಾನ ಕಾಪಾಡಿದರು. ಇನ್ನು ಅಜಿಂಕ್ಯ ರಹಾನೆ 30 ಬಾಲ್​ನಲ್ಲಿ 35 ರನ್​​ ಬಾರಿಸಿದರು. ಇವರಿಬ್ಬರು 65 ರನ್​ಗಳ ಜೊತೆಯಾಟ ಆಡಿದರು.

ಇನ್ನು ಸಿಎಸ್​ಕೆ ತಂಡದ ಆಲ್​​ರೌಂಡರ್​​ ರವೀಂದ್ರ ಜಡೇಜಾ 23 ಬಾಲ್​ನಲ್ಲಿ 31 ರನ್​ಗಳಿಸಿ ನಾಟೌಟ್ ಆಗಿ ಉಳಿದರು. ವಿಚಾರ ಏನೆಂದರೆ ಪಂದ್ಯದ ವೇಳೆ ನಡೆದ ಒಂದು ಘಟನೆಯಿಂದ ಸರ್ ರವೀಂದ್ರ ಜಡೇಜಾ ಹೆಡ್​​ಲೈನ್ ಆಗ್ತಿದ್ದಾರೆ. ಎಸ್​ಆರ್​ಹೆಚ್​ ತಂಡದ 19ನೇ ಓವರ್ ಅನ್ನು ಭುವಿ ಮಾಡುತ್ತಿದ್ದರು. ಭುವಿ ಎಸೆದ ಬಾಲ್​ ಅನ್ನು ಜಡೇಜಾ ಲೆಗ್​ಸೈಡ್​ನಲ್ಲಿ ಹೊಡೆಯಲು ಪ್ರಯತ್ನಿಸಿದರು. ಆದರೆ ಅದು ಬ್ಯಾಟ್​ಗೆ ಸರಿಯಾಗಿ ತಾಗದ ಕಾರಣ ಬೌಲರ್​ ಭುವಿ ಕೈಗೆ ಹೋಯಿತು. ಈ ವೇಳೆ ರನ್ ಕದಿಯುವ ಆತುರದಲ್ಲಿ ಜಡೇಜಾ ಓಡಲು ಪ್ರಯತ್ನಿಸುತ್ತಾರೆ. ಆಗ ಭುವನೇಶ್ವರ್ ಕುಮಾರ್​ ರನೌಟ್ ಮಾಡಲು ಸ್ಟಂಪ್​​ನತ್ತ ಬಾಲ್ ಎಸೆಯುತ್ತಾರೆ. ಆಗ, ಜಡೇಜಾ ವಿಕೆಟ್ ಉಳಿಸಿಕೊಳ್ಳಲು ಹಿಂದೆ ವಾಪಸ್ ಹೋಗುತ್ತಾರೆ. ಈ ವೇಳೆ ಭುವಿ ಎಸೆದ ಬಾಲ್, ಜಡೇಜಾ ಮೈಗೆ ತಾಗಿದೆ. ಪರಿಣಾಮ ಬಾಲ್ ಸ್ಟಂಪ್​​ಗೆ ಬಡಿಯಲಿಲ್ಲ.

ಈ ಮೂಲಕ ಜಡೇಜಾ ಅವರು ಫೀಲ್ಡಿಂಗ್​ ಅಡ್ಡಿ ಪಡಿಸಿದ್ದಾರೆ ಅನ್ನೋದು ಕ್ರಿಕೆಟ್ ವಿಶ್ಲೇಷಕರ ವಾದ. ಇದೇ ಸಂದರ್ಭದಲ್ಲಿ ಎಸ್​ಆರ್​ಹೆಚ್​​ ತಂಡದ ನಾಯಕ ಪ್ಯಾಟ್​ ಕಮ್ಮಿನ್ಸ್​, ಫೀಲ್ಡಿಂಗ್​ ಅಡ್ಡಿ ಪಡಿಸಿದ್ದಾರೆಂದು, ಅಂಪೈರ್​ಗೆ ಮನವಿ ಮಾಡಬಹುದಿತ್ತು. ಔಟ್​ ಎಂದು ಮನವಿ ಮಾಡಲು ವಿಕೆಟ್ ಕೀಪರ್ ಕ್ಲಾಸೆನ್ ಕೂಡ ಕಮ್ಮಿನ್ಸ್​​ಗೆ ಸಿಗ್ನಲ್ ನೀಡಿದ್ದರು. ಆದರೆ, ಕಮ್ಮಿನ್ಸ್​ ಹಾಗೆ ಮಾಡಲಿಲ್ಲ. ಕಮ್ಮಿನ್ಸ್​ ಅವರು ಅಪೀಲ್ ಮಾಡದಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಒಂದು ವೇಳೆ ಎಸ್​ಆರ್​ಹೆಚ್​ ತಂಡದ ನಾಯಕ ಅಪೀಲ್ ಮಾಡಿದ್ದರೆ ಮೂರನೇ ಅಂಪೈರ್ ಪರಿಶೀಲಿಸಿ ತೀರ್ಪು ನೀಡುತ್ತಿದ್ದರು. ನಿಯಮದ ಪ್ರಕಾರ, ಫೀಲ್ಡಿಂಗ್ ಮಾಡುವ ಬ್ಯಾಟರ್ ಅಡ್ಡಿ ಪಡಿಸಿದರೆ ಔಟ್ ಎಂದು ತೀರ್ಪು ನೀಡಲಾಗುತ್ತದೆ. ಸಿಎಸ್​ಕೆ ನೀಡಿದ 165 ರನ್​ಗಳ ಗುರಿಯನ್ನು ಹೈದ್ರಾಬಾದ್ 4 ವಿಕೆಟ್ ಕಳೆದುಕೊಂಡು 18.1ನೇ ಓವರ್​ನಲ್ಲಿ ಮುಟ್ಟಿತು. ಈ ಮೂಲಕ ಸಿಎಸ್​ಕೆ ಎರಡು ಸತತ ಸೋಲುಗಳನ್ನ ಅನುಭವಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಫೀಲ್ಡಿಂಗ್​ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್​​ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್​..!

https://newsfirstlive.com/wp-content/uploads/2024/04/JADEJA-1.jpg

Load More