/newsfirstlive-kannada/media/post_attachments/wp-content/uploads/2024/08/Newsfirst-Kannada.jpg)
ತಾಯಿತನ ಅನ್ನೋದಿದ್ಯಲ್ಲ.. ಅದೊಂದು ಸಂಭ್ರಮ.. ಬದುಕಿನೊಳಗೆ ಹೊಸ ಅತಿಥಿಯನ್ನ ಸ್ವಾಗತಿಸೋ ಖುಷಿ. ಹೆತ್ತವರಾಗೋದು ಎಷ್ಟೋ ಜನರ ಕನಸು. ಆದ್ರೆ ಎಷ್ಟೋ ಮಂದಿಗೆ ಈ ವಿಚಾರದಲ್ಲಿ ಸಾವಿರ ಸಮಸ್ಯೆ ಇರುತ್ತೆ. ಸಾವಿರಾರು ಪ್ರಶ್ನೆಗಳು ಇರುತ್ತೆ. ಇದಕ್ಕೆ ಉತ್ತರ ಕಂಡುಕೊಳ್ಳೋಕೆ ಅಂತಾನೇ ನ್ಯೂಸ್ ಫಸ್ಟ್ ವಿಶೇಷ ಕಾರ್ಯಕ್ರಮವೊಂದನ್ನ ಆಯೋಜಿಸಿದೆ.
ಬದುಕೆಂಬ ಪಯಣದಲ್ಲಿ ಮಕ್ಕಳು ಅತಿಥಿಗಳಾಗಿ ಬಂದ್ರೆ ಬದುಕೇ ಪರಿಪೂರ್ಣ ಅನ್ನೋದು ಎಷ್ಟೋ ಹೆತ್ತವರ ಭಾವನೆ. ತಾಯ್ತನ ನೀಡೋ ನೆಮ್ಮದಿ, ಖುಷಿಯೇ ಅಂಥದ್ದು. ಆದ್ರೆ ಲೈಫ್ ಸ್ಟೈಲ್ ಬದಲಾಗಿರೋ ಈ ಕಾಲದಲ್ಲಿ ಮಕ್ಕಳನ್ನ ಪಡೆಯೋದು ಅಷ್ಟು ಸುಲಭನಾ? ಖಂಡಿತ ಇಲ್ಲ. ಎಷ್ಟೋ ದಂಪತಿ ಈ ವಿಚಾರದಲ್ಲಿ ಎಷ್ಟೋ ಸವಾಲುಗಳನ್ನ ಎದುರಿಸಿದ್ದಾರೆ. ಆದ್ರೆ ಸವಾಲಿಗೆ ಉತ್ತರ ಕಂಡುಕೊಳ್ಳೋದು ಗೊತ್ತಾಗದೇ ಆತಂಕಕ್ಕೀಡಾಗಿದ್ದಾರೆ.
ಫರ್ಟಿಲಿಟಿ ಅಥವಾ ಸಂತಾನೋತ್ಪತ್ತಿ ಬಗ್ಗೆ ಪೋಷಕರಿಗೆ ಅನುಮಾನಗಳು ನೂರಾರಿವೆ. ಇದರ ಪರಿಹಾರಕ್ಕೆ ಅಂತಾನೇ ಬೆಂಗಳೂರಿನಲ್ಲಿ ನಾಳೆ (ಅ.19) ಮತ್ತು ನಾಡಿದ್ದು (ಅ.20) ಪಾತ್ ಟು ಪೇರೆಂಟ್‌ಹುಡ್ ಅನ್ನೋ ವಿಶೇಷ ಕಾರ್ಯಕ್ರಮವೊಂದನ್ನ ನ್ಯೂಸ್ ಫಸ್ಟ್ ಆಯೋಜಿಸಿದೆ. ಗರ್ಭಗುಡಿ ಐವಿಎಫ್ ಸೆಂಟರ್ ಕಾರ್ಯಕ್ರಮದ ಸಹಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ನಾಳೆ, ನಾಡಿದ್ದು ಪಾತ್ ಟು ಪೇರೆಂಟ್‌ಹುಡ್ ಕಾರ್ಯಕ್ರಮ
ಪೋಷಕರಾಗೋ ಹಾದಿಯಲ್ಲಿರೋರಿಗೆ ಸಿಗಲಿದೆ ಮಾರ್ಗದರ್ಶನ
ಬೆಂಗಳೂರಿನಲ್ಲಿ ಅಕ್ಟೋಬರ್ 19 ಮತ್ತು 20 ಅಂದ್ರೆ ನಾಳೆ ಮತ್ತು ನಾಡಿದ್ದು ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅರಮನೆ ಮೈದಾನದ ಗೇಟ್ ನಂ.6 ಗ್ರ್ಯಾಂಡ್ ಕ್ಯಾಸೆಲ್‌ನಲ್ಲಿ ನಡೆಯೋ ಪಾಥ್ ಟು ಪೇರೆಂಟ್ ಹುಡ್ ಕಾರ್ಯಕ್ರಮದಲ್ಲಿ ಪೋಷಕರಾಗೋ ಹಾದಿಯಲ್ಲಿ ಇರೋರಿಗೆ ಎಲ್ಲಾ ರೀತಿಯ ಮಾರ್ಗದರ್ಶನ ಸಿಗಲಿದೆ. ಈಗಾಗ್ಲೇ ಈ ಕಾರ್ಯಕ್ರಮಕ್ಕೆ ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಯೂ ನಡೆದಿದೆ.
ಇದನ್ನೂ ಓದಿ: ಅ. 19ಕ್ಕೆ ನ್ಯೂಸ್ಫಸ್ಟ್ನಿಂದ “ಪಾತ್ ಟೂ ಪೇರೆಂಟ್‌ಹುಡ್” ಈವೆಂಟ್; ಸಂತಾನಹೀನತೆಗೆ ಸಿಗಲಿದೆ ಪರಿಹಾರ!
ಪಾಥ್ ಟು ಪೇರೆಂಟ್‌ಹುಡ್ ಈ ವಿಶೇಷ ಕಾರ್ಯಕ್ರಮದಲ್ಲಿ ಫರ್ಟಿಲಿಟಿ ಬಗ್ಗೆ ಚರ್ಚೆ ನಡೆಯುತ್ತೆ. ದಂಪತಿಗೆ ಆಪ್ತ ಸಮಾಲೋಚನೆಗೂ ತಜ್ಞರು ಇರಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರಾಗಲು ಇರೋ 7 ದಾರಿಗಳ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ತಾಯ್ತನಕ್ಕಿರೋ ಪ್ರತಿ ಸವಾಲಿನ ಬಗ್ಗೆಯೂ ಈ ಕಾರ್ಯಕ್ರಮದಲ್ಲಿ ತಜ್ಞರು ಉತ್ತರ ನೀಡ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರೂ ಮಾತ್ನಾಡೋಕೆ ಹಿಂಜರಿಯೋ ಪುರುಷ ಬಂಜೆತನ, ಭಾವನಾತ್ಮಕ ಅಸಮತೋಲನ, ಪೌಷ್ಟಿಕ ಆಹಾರದ ಮಹತ್ವ, ಯೋಗ, ಆರೋಗ್ಯ ಹೀಗೆ ಎಲ್ಲದರ ಬಗ್ಗೆಯೂ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುತ್ತೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎನ್ನುವವರಿಗೆ www.pathtoparenthood.in ಗೆ ಲಾಗಾನ್ ಆಗಿ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಮೊಬೈಲ್ ನಂಬರ್ 6364523849ಗೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.
ಪೋಷಕರಾಗೋದು ಎಷ್ಟೋ ಜನರಿಗೆ ಸಾರ್ಥಕತೆ ಸಾಧಿಸೋ ಸಮಯ. ಅದಕ್ಕಿರೋ ಸವಾಲುಗಳಿಗೆ ಉತ್ತರ ಕಂಡುಕೊಳ್ಳೋಕೆ ಈ ಕಾರ್ಯಕ್ರಮ ಅತ್ಯಂತ ಉತ್ತಮ ವೇದಿಕೆಯಾಗೋದ್ರಲ್ಲಿ ಅನುಮಾನವಿಲ್ಲ. ನೀವೂ ಬನ್ನಿ.. ನಿಮ್ಮವರನ್ನೂ ಕರೆತನ್ನಿ.. ಅಗತ್ಯ ಇರೋರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ