/newsfirstlive-kannada/media/post_attachments/wp-content/uploads/2024/10/Path-to-parenthood-news-first-2.jpg)
ಬದಲಾಗುತ್ತಿರೋ ಲೈಫ್​ಸ್ಟೈಲ್​.. ಒತ್ತಡ.. ಗುಣಮಟ್ಟವಿಲ್ಲದ ಆಹಾರ.. ಹೀಗೆ ಹಲವು ಸಮಸ್ಯೆಗಳಿಂದಾಗಿ ಇತ್ತೀಚಿನ ದಂಪತಿಗಳಿಗೆ ಮಕ್ಕಳ ಭಾಗ್ಯದ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಂಭ್ರದ ದಾರಿಗೆ ನ್ಯೂಸ್ ​ಫಸ್ಟ್ ಮುಂದಾಗಿದೆ. ಇದರ ಭಾಗವಾಗಿ ಪಾತ್​ ಟು ಪೇರೆಂಟ್​ಹುಡ್​ ಎಂಬ ವಿಶೇಷ ಸಮಾವೇಶವನ್ನು ಆಯೋಜಿಸಿದೆ. ಮೊದಲ ದಿನದ ಸಮಾವೇಶಕ್ಕೆ ಅತ್ಯುತ್ತಮ ಸ್ಪಂದನೆ ಸಿಕ್ಕಿದ್ದು, ನಾಳೆ ಸಮಾವೇಶದ ಕೊನೆಯ ದಿನವಾಗಿದೆ.
/newsfirstlive-kannada/media/post_attachments/wp-content/uploads/2024/10/Path-to-parenthood-3.jpg)
ಒಂದು ಕುಟುಂಬ ಪರಿಪೂರ್ಣವಾಗಬೇಕು ಅಂದ್ರೆ ಆ ಕುಟುಂಬದಲ್ಲಿ ನಗು ಮೂಡಬೇಕು ಅಂದ್ರೆ ಅಲ್ಲಿ ಮಗು ಇರಬೇಕು. ಮಗು ಕೇವಲ ನಗುವಷ್ಟೇ ತರಲ್ಲ ತಂದೆ, ತಾಯಿ ಅಜ್ಜಿ, ತಾತ, ಅತ್ತೆ, ಮಾವ ಹೀಗೆ ಇಡೀ ಕುಟುಂಬ ಬಾಂಧವ್ಯ ಹೆಚ್ಚಿಸುತ್ತೆ. ಆದರೆ, ಸಂತಾನ ಹೀನತೆ ಸಮಸ್ಯೆ ಎದುರಿಸುತ್ತಿರುವ ದಂಪತಿಗಳ ಸಮಸ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ.
/newsfirstlive-kannada/media/post_attachments/wp-content/uploads/2024/10/Path-to-parenthood-2.jpg)
ಸಂತಾನಹೀನತೆ ಒಂದು ರೀತಿಯ ಸಾಮಾಜಿಕ ಪಿಡುಗು ಎನ್ನುವಂತೆ ರೂಪುಗೊಳ್ಳುತ್ತಿದೆ. ಈ ಸಮಸ್ಯೆ ನಿವಾರಿಸಿ ಮಕ್ಕಳ ಭಾಗ್ಯ ಪಡೆಯಲು ಇರುವ ಹಲವು ಮಾರ್ಗಗಳನ್ನ ಕಂಡುಕೊಳ್ಳಲು ಪಾತ್​ ಟು ಪೇರೆಂಟ್​ಹುಡ್​ ಅನ್ನೋ ವಿಶೇಷ ಸಮಾವೇಶವನ್ನು ನ್ಯೂಸ್ ​ಫಸ್ಟ್​ ಆಯೋಜಿದೆ. ಬೆಂಗಳೂರಿನ ಅರಮನೆ ಮೈದಾನದ ಗ್ರ್ಯಾಂಡ್​ ಕ್ಯಾಸಲ್‌ನಲ್ಲಿ ನಡೆಯುತ್ತಿರುವ ಸಮಾವೇಶದ ಮೊದಲ ದಿನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​​ ಗುಂಡೂರಾವ್​ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ನ್ಯೂಸ್​ಫಸ್ಟ್​ನ ಈ ವಿನೂತನ ಕಾರ್ಯಕ್ರಮದ ಮಹತ್ವ ಏನು ಎಂದು ತಿಳಿಸಿದರು.
/newsfirstlive-kannada/media/post_attachments/wp-content/uploads/2024/10/Path-to-parenthood-news-first.jpg)
ನ್ಯೂಸ್ ಫಸ್ಟ್‌ಗೆ ಅಭಿನಂದನೆ
ಪಾತ್ ಟು ಪೇರೆಂಟ್ ಹುಡ್ ಅನ್ನೋ ಬಹಳ ಮುಖ್ಯವಾದ ವಿಷಯದ ಬಗ್ಗೆ ಇಲ್ಲಿ ಜನರಿಗೆ ಸ್ಪಷ್ಟ ಮಾಹಿತಿ ನೀಡಲಾಗುತ್ತಿದೆ. ನ್ಯೂಸ್ ಫಸ್ಟ್ ಚಾನೆಲ್‌ನವರಿಗೆ ನನ್ನ ವಿಶೇಷ ಅಭಿನಂದನೆಯನ್ನು ತಿಳಿಸುತ್ತೇನೆ. ಈ ವಿಚಾರದಲ್ಲಿ ನಮ್ಮ ಇಲಾಖೆ ಕೂಡ ಬಹಳ ಹೆಚ್ಚಿನ ಗಮನ ಕೊಡುವ ಅವಶ್ಯಕತೆ ಇದೆ. ಈಗಂತೂ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ IVF ಸೆಂಟರ್‌ಗಳು ಬಂದಿದೆ. IVF ಸೆಂಟರ್‌ಗಳು ಯಾವ ರೀತಿ ಕೆಲಸ ಮಾಡುತ್ತಿದೆ. ಅದರ ನಿರ್ವಹಣೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಂತ ಅವಶ್ಯಕತೆ ಖಂಡಿತವಾಗಿಯೂ ಇದೆ.
- ದಿನೇಶ್​ ಗುಂಡೂರಾವ್, ಆರೋಗ್ಯ ಸಚಿವ
ಫರ್ಟಿಲಿಟಿ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳು, ಆಧುನಿಕ ವೈದ್ಯ ಪದ್ದತಿಯಲ್ಲಿರುವ ಚಿಕಿತ್ಸಾ ವಿಧಾನಗಳು, ಆಯುರ್ವೇದದಲ್ಲಿರುವ ಚಿಕಿತ್ಸಾ ವಿಧಾನಗಳು ಹಾಗೂ ಅಲೋಪತಿ ಹಾಗೂ ಆಯುರ್ವೇದ ಎರಡನ್ನೂ ಒಳಗೊಂಡು ಚಿಕಿತ್ಸಾ ವಿಧಾನಗಳ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆ ಸಂತಾನ ಹೀನತೆ ಅನುಭವಿಸುತ್ತಿರುವವರಿಗೆ ಹಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಇದೇ ಸಮಾವೇಶದಲ್ಲಿ ಫರ್ಟಿಲಿಟಿ, ಐವಿಎಫ್​, ಆಯುರ್ವೇದ ಸೇರಿದಂತೆ ಫರ್ಟಿಲಿಟಿಗೆ ಪೂರಕವಾಗಿರುವ ಉತ್ಪನಗಳ ಹಲವು ಮಳಿಗೆಗಳು ಇದ್ದು, ಇಲ್ಲಿಗೆ ಭೇಟಿ ನೀಡುವ ಜನರಿಗೆ ಉಪಯುಕ್ತ ಮಾಹಿತಿ ನೀಡುತ್ತಿವೆ.
ನಾಳೆ ಈ ಸಮಾವೇಶದ ಕೊನೆಯ ದಿನವಾಗಿದ್ದು, ಮಕ್ಕಳ ಭಾಗ್ಯ ಪಡೆಯಲು ಬೇಕಾದ ಹಲವು ಉಪಯುಕ್ತ ಮಾಹಿತಿಯನ್ನು ತಜ್ಞರು ನೀಡಲಿದ್ದಾರೆ. ಇದಲ್ಲದೇ ಮಕ್ಕಳನ್ನು ದತ್ತು ಪಡೆಯಲು ಬೇಕಾಗಿರುವ ಅಗತ್ಯ ಮಾಹಿತಿ ಅದಕ್ಕಿರುವ ಕಾನೂನು, ಅರ್ಹತೆ ಮುಂತಾದ ವಿಚಾರಗಳನ್ನೂ ಸಹ ತಜ್ಞರು ತಿಳಿಸಿಕೊಡಲಿದ್ದಾರೆ. ಈ ವಿಚಾರಗಳ ಅಗತ್ಯ ಇರುವ ನಿಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಪರಿಚಯಸ್ಥ ಕುಟುಂಬಗಳಿಗೆ ತಿಳಿಸಿ ಅಂತಹ ಕುಟುಂಬಗಳಿಗೆ ಭರವಸೆ ನೀಡಿ ಎಂದು ನ್ಯೂಸ್​ಫಸ್ಟ್​ ಆತ್ಮೀಯ ವೀಕ್ಷಕರಲ್ಲಿ ಕೇಳಿಕೊಳ್ಳುತ್ತಿದೆ.
ಇದನ್ನೂ ಓದಿ: ಕಿತ್ತಳೆ ಹಣ್ಣು ತಿಂದಮೇಲೆ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಆ ತಪ್ಪು ಮಾಡಬೇಡಿ, ಅದರಲ್ಲಿವೆ 6 ಪ್ರಯೋಜನಗಳು
ಇಂದು ನಡೆದ ಸಮಾವೇಶದಲ್ಲಿ ಮಾನ್ಯ ಸಚಿವರ ಜೊತೆಯಲ್ಲಿ ನ್ಯೂಸ್​ಫಸ್ಟ್​ ಎಂಡಿ ಹಾಗೂ ಸಿಇಒ ಎಸ್. ರವಿಕುಮಾರ್​ ಗರ್ಭಗುಡಿ ಐವಿಎಫ್​ ಕೇಂದ್ರದ ಸಿಇಓ ವಿಜಯ್​ಕುಮಾರ್​ ಹಾಗೂ ಡಾ.ಆಶಾ ವಿಜಯ್​ಕುಮಾರ್​ ಕೂಡ ಪಾಲ್ಗೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us