ಸಂತಾನಹೀನತೆ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಮಾವೇಶ
ಪೋಷಕರಾಗಲು ಇರೋ 7 ದಾರಿಗಳ ವೈದ್ಯರಿಂದ ಮಾಹಿತಿ
ಅಕ್ಟೋಬರ್ 19 ಮತ್ತು 20 ಅರಮನೆ ಮೈದಾನದ ಗೇಟ್ ನಂ.6
ಬದುಕೆಂಬ ಪಯಣದಲ್ಲಿ ಮಕ್ಕಳು ಅತಿಥಿಗಳಾಗಿ ಬಂದ್ರೆ ಬದುಕೇ ಪರಿಪೂರ್ಣ ಅನ್ನೋದು ಎಷ್ಟೋ ಹೆತ್ತವರ ಭಾವನೆ. ತಾಯ್ತನ ನೀಡೋ ನೆಮ್ಮದಿ, ಖುಷಿಯೇ ಅಂಥಾದ್ದು. ಆದ್ರೆ ಲೈಫ್‌ಸ್ಟೈಲೇ ಬದ್ಲಾಗಿರೋ ಈ ಕಾಲದಲ್ಲಿ ಮಕ್ಕಳನ್ನ ಪಡೆಯೋದು ಅಷ್ಟು ಸುಲಭನಾ? ಖಂಡಿತಾ ಇಲ್ಲ. ಎಷ್ಟೋ ದಂಪತಿ ಈ ವಿಚಾರದಲ್ಲಿ ಎಷ್ಟೋ ಸವಾಲುಗಳನ್ನ ಎದುರಿಸುತ್ತಿದ್ದಾರೆ. ಆದ್ರೆ ಸವಾಲಿಗೆ ಉತ್ತರ ಕಂಡುಕೊಳ್ಳೋದು ಗೊತ್ತಾಗದೇ ಆತಂಕಕ್ಕೀಡಾಗಿದ್ದಾರೆ.
ಫರ್ಟಿಲಿಟಿ ಅಥವಾ ಸಂತಾನೋತ್ಪತ್ತಿ ಬಗ್ಗೆ ಪೋಷಕರಿಗೆ ಅನುಮಾನಗಳು ನೂರಾರಿವೆ. ಇದ್ರ ಪರಿಹಾರಕ್ಕೆ ಅಂತಾನೇ ಬೆಂಗಳೂರಿನಲ್ಲಿ ಪಾತ್ ಟು ಪೇರೆಂಟ್‌ಹುಡ್ ಅನ್ನೋ ವಿಶೇಷ ಕಾರ್ಯಕ್ರಮವೊಂದನ್ನ ನ್ಯೂಸ್ ಫಸ್ಟ್ ಆಯೋಜಿಸಿದೆ.
ಅ.19ರಿಂದ 20ರವರೆಗೆ ಪಾಥ್ ಟು ಪೇರೆಂಟ್‌ಹುಡ್ ಕಾರ್ಯಕ್ರಮ
ಪೋಷಕರಾಗೋ ಹಾದಿಯಲ್ಲಿರೋರಿಗೆ ಸಿಗಲಿದೆ ಮಾರ್ಗದರ್ಶನ
ಬೆಂಗಳೂರಿನಲ್ಲಿ ಇದೇ ಅಕ್ಟೋಬರ್ 19 ಮತ್ತು 20ರಂದು ಅರಮನೆ ಮೈದಾನದ ಗೇಟ್ ನಂ.6ರ ಗ್ರ್ಯಾಂಡ್ ಕ್ಯಾಸೆಲ್‌ನಲ್ಲಿ ನಡೆಯೋ ಪಾಥ್ ಟು ಪೇರೆಂಟ್ ಹುಡ್. ಕಾರ್ಯಕ್ರಮದಲ್ಲಿ ಪೋಷಕರಾಗೋ ಹಾದಿಯಲ್ಲಿ ಇರೋರಿಗೆ ಎಲ್ಲಾ ರೀತಿಯ ಮಾರ್ಗದರ್ಶನ ಸಿಗಲಿದೆ.
ಪಾಥ್ ಟು ಪೇರೆಂಟ್‌ಹುಡ್
ಈ ವಿಶೇಷ ಕಾರ್ಯಕ್ರಮದಲ್ಲಿ ಫರ್ಟಿಲಿಟಿ ಬಗ್ಗೆ ಚರ್ಚೆ ನಡೆಯುತ್ತೆ. ದಂಪತಿಗೆ ಆಪ್ತ ಸಮಾಲೋಚನೆಗೂ ತಜ್ಞರು ಇರಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರಾಗಲು ಇರೋ 7 ದಾರಿಗಳ ಬಗ್ಗೆ ಚರ್ಚೆ ನಡೆಯಲಿದೆ. ತಾಯ್ತನಕ್ಕಿರೋ ಪ್ರತಿ ಸವಾಲಿನ ಬಗ್ಗೆಯೂ ಈ ಕಾರ್ಯಕ್ರಮದಲ್ಲಿ ತಜ್ಞರು ಉತ್ತರ ನೀಡಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರೂ ಮಾತನಾಡೋಕೆ ಹಿಂಜರಿಯೋ ಪುರುಷರು, ಭಾವನಾತ್ಮಕ ಅಸಮತೋಲನ, ಪೌಷ್ಟಿಕ ಆಹಾರದ ಮಹತ್ವ, ಯೋಗ, ಆರೋಗ್ಯ ಹೀಗೆ ಎಲ್ಲದರ ಬಗ್ಗೆಯೂ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುತ್ತೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎನ್ನುವವರಿಗೆ www.pathtoparenthood.in ಗೆ ಲಾಗಾನ್ ಆಗಿ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಮೊಬೈಲ್ ನಂಬರ್ 6364523849 ಗೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಮಾವಿನ ಎಲೆಯಲ್ಲಿವೆ ಹಲವು ಔಷಧಿ ಗುಣಗಳು! ಇದರ ಸೇವನೆಯಿಂದ ಏನೆಲ್ಲಾ ತಡೆಯಬಹುದು ಗೊತ್ತಾ?
ಪೋಷಕರಾಗೋದು ಎಷ್ಟೋ ಜನರಿಗೆ ಸಾರ್ಥಕತೆ ಸಾಧಿಸೋ ಸಮಯ. ಅದಕ್ಕಿರೋ ಸವಾಲುಗಳಿಗೆ ಉತ್ತರ ಕಂಡುಕೊಳ್ಳೋಕೆ ಈ ಕಾರ್ಯಕ್ರಮ ಅತ್ಯಂತ ಉತ್ತಮ ವೇದಿಕೆಯಾಗೋದ್ರಲ್ಲಿ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ