/newsfirstlive-kannada/media/post_attachments/wp-content/uploads/2023/12/DKS_123.jpg)
ಗುಂಡಿಗೂ.. ಬೆಂಗಳೂರಿಗೂ ಅವಿನಾಭಾವ ಸಂಬಂಧ.. ಬಾಯ್ ತೆರೆದು ಕೂತಿರೋ ಗುಂಡಿಗೆ ಮುಕ್ತಿ ಯಾವಾಗಪ್ಪ ಅಂತ ಜನ ಕೇಳಿ ಕೇಳಿ ಸುಮ್ಮನೆ ಆಗಿದ್ದಾರೆ.. ಗುಂಡಿಗಳಿಗೆ ಮುಕ್ತಿ ಕೊಡಿಸೋದಾಗಿ ಡಿಕೆ ಶಿವಕುಮಾರ್ ಹೇಳಿದ್ರು, ಆದ್ರೆ ನಿಜಕ್ಕೂ? ಗುಂಡಿಗಳಿಗೆ ಮುಕ್ತಿ ಸಿಕ್ಕಿದಿಯಾ? ನ್ಯೂಸ್ಫಸ್ಟ್ ಮಾಡಿರೋ ಈ ರಿಯಾಲಿಟಿ ಚೆಕ್ ಅನ್ನ ಡಿಸಿಎಂ ಸಾಹೇಬ್ರೇ ಓದಲೇಬೇಕು.
ಅಕ್ಟೋಬರ್ 7ನೇ ತಾರೀಕು ಡಿಸಿಎಂ ಸಾಹೆಬ್ರು ಹೇಳಿದ್ದ ಮಾತುಗಳಿವು.. ಎರಡು ತಿಂಗಳುಗಳೊಳಗೆ ಬೆಂಗಳೂರು ಗುಂಡಿ ಮುಕ್ತವಾಗಲಿದೆ ಅಂತ ಹೇಳಿದ್ರು. ಆದ್ರೆ ನೀವು ಕೊಟ್ಟ ಗಡುವು ಮುಗಿಯೋಕೆ ಇನ್ನು 3 ದಿನವಷ್ಟೇ ಬಾಕಿ ಇದೆ. ಆದ್ರೆ ಕಳೆದ 2 ತಿಂಗಳಿಂದ ಪಾಲಿಕೆ ಅಧಿಕಾರಿಗಳು ಮುಚ್ಚಿರೋ ಗುಂಡಿಗಳೆಷ್ಟು ಮುಚ್ಚದಿರೋ ಗುಂಡಿಗಳೆಷ್ಟು ಗೊತ್ತಾ? ಎಂಬುದೇ ಈಗ ಚರ್ಚೆ.
ಜೊತೆಗೆ ಮಳೆ ಕೂಡಾ ಶುರುವಾಗಿದೆ. ಈ ಮೂರು ದಿನದಲ್ಲಿ ಈ ವೆದರ್ನಲ್ಲಿ ಬೆಂಗಳೂರು ರಸ್ತೆಗಳು ನಿಜವಾಗಿಯೋ ಸರಿಹೋಗುತ್ತಾ? ಪಾಲಿಕೆಯ ಕೂಗಳತೆಯ ದೂರದಲ್ಲಿಯೇ ಯಮಕಿಂಕರರು ಇಷ್ಟು ದೊಡ್ಡಗುಂಡಿಗಳಲ್ಲಿ ಕೂತು ಗುಂಡಿಗಳು ತಾಂಡವವಾಡ್ತಿದೆ. 100 ಮೀಟರ್ ಅಂತರದಲ್ಲಿ 40ಕ್ಕೂ ಅಧಿಕ ಗುಂಡಿಗಳು ರಾರಾಜಿಸುತ್ತಿದ್ದು, ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಿಟಿ ಜನ ಹೈರಾಣಾಗಿದ್ದಾರೆ. ಹಾಗಾದ್ರೆ ಬ್ರ್ಯಾಂಡ್ ಬೆಂಗಳೂರು ಬರೀ ಬಾಯಿ ಮಾತಿಗಷ್ಟೇ ಸೀಮಿತವಾಯ್ತಾ? ಇದಕ್ಕೆ ನೀವ್ ಏನ್ ಹೇಳ್ತಿರಾ ಡಿಸಿಎಂ ಸಾಹೆಬ್ರೇ? ಎನ್ನುತ್ತಿದ್ದಾರೆ ಜನ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ